ಮಾಣಿಕನಗರ ಪಂಚಾಯತಿಗೆ ಬೀಗ ಜಡಿದು ಸರ್ವ ಸದಸ್ಯರ ಪ್ರತಿಭಟನೆ
ಮಾಣಿಕನಗರ ಪಂಚಾಯತಿಗೆ ಬೀಗ ಜಡಿದು ಸರ್ವ ಸದಸ್ಯರ ಪ್ರತಿಭಟನೆ
ಬೀದರ: ಹುಮನಾಬಾದ ತಾಲೂಕಿನ ಮಾಣಿಕನಗರ ಗ್ರಾಮ ಪಂಚಾಯತಿ ವ್ಯಾಪ್ತಿಯ 23 ಸರ್ವೇ ಸಂಖ್ಯೆ ಭೂಮಿಗಳನ್ನು ಪುರಸಭೆಗೆ ಹತ್ತಾಂತರಿಸಿರುವುದನ್ನು ವಿರೋಧಿಸಿ ಪಂಚಾಯತ ಎಲ್ಲಾ ಸದಸ್ಯರು ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿ ಓಂಕಾರ ತುಂಬಾ,ದಿಲೀಪಕುಮಾರ ಹಾಗೂ ಇತರೆ ಸದಸ್ಯರು ಮಾತನಾಡಿ, ಮಾಣಿಕನಗರ ಪಂಚಾಯತ್ ವ್ಯಾಪ್ತಿಯಲ್ಲಿನ ಪ್ರಮುಖ ಸರ್ವೆ ಸಂಖ್ಯೆಗಳು ಪಂಚಾಯ್ತಿಯ ಮೂಲ ಆದಾಯವಾಗಿವೆ. ಸಮೀಪದಲ್ಲಿ ಧುಮ್ಮನಸೂರ್ ಪಂಚಾಯ್ತಿ ಇದ್ದರು ಕೂಡ ಆ ಕಡೆಗೆ ಗಮನ ಹರಿಸುವ ಕೆಲಸ ಮಾಡದ ಅಧಿಕಾರಿಗಳು ಮಾಣಿಕನಗರ ಪಂಚಾಯತ್ ಮುಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಪಂಚಾಯತ ನಡೆಸಲು ಹೆಚ್ಚಿನ ತೆರಿಗೆ ಬರುವ ಸರ್ವೇ ಸಂಖ್ಯೆಗಳನ್ನೆ ಗುರಿಮಾಡಿಕೊಂಡು ವರ್ಗಾವಣೆಗೆ ಮುಂದಾಗುತ್ತಿದ್ದಾರೆ. ಯಾವ ಕಾರಣಕ್ಕೆ ಉದ್ದೇಶ ಪೂರ್ವಕವಾಗಿ ಹುಮನಾಬಾದ ಪುರಸಭೆಗೆ ನೀಡಲಾಗುತ್ತಿದೆ. ಈ ಕುರಿತು ಪಂಚಾಯತ ಅಧ್ಯಕ್ಷರು ಹಾಗೂ ಸದಸ್ಯರಿಗೆ ಯಾವುದೇ ಮಾಹಿತಿ ಇಲ್ಲದೆ ಅಕ್ರಮವಾಗಿ ವರ್ಗವಣೆ ಮಾಡಲಾಗಿದೆ ಎಂದು ದೂರಿದರು.
ಸ್ಥಳಕ್ಕೆ ಆಗಮಿಸಿದ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಿರಣ್ ಪಾಟೀಲ, ಸದಸ್ಯರ ಸಮಸ್ಯೆ ಆಲಿಸಿದರು. ಈ ಕುರಿತು ಸಮಗ್ರವಾಗಿ ಮಾಹಿತಿ ಪಡೆಯುತ್ತೇನೆ ಮುಂದಿನ ಎರಡು ದಿನಗಳಲ್ಲಿ ಈ ಬಗ್ಗೆ ಕ್ರಮ ವಹಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸದಸ್ಯರು, ಬಾಯಿಯಿಂದ ಮಾತಾಡುವ ಬದಲಿಗೆ ಲಿಖಿತ ಆಧಾರ ನೀಡಿ. ಪಂಚಾಯತ್ ಅಧಿಕಾರಿಗೆ ಯಾರು ಒತ್ತಡ ಹಾಕುತ್ತಿದ್ದಾರೆ. ಯಾವ ಕಾರಣಕ್ಕೆ ಎಲ್ಲರನ್ನು ಮುಚ್ಚಿಟ್ಟು ಈ ಕೆಲಸ ಮಾಡಲಾಗುತ್ತಿದೆ ಎಂದು ಸದಸ್ಯರು ಪ್ರಶ್ನಿಸಿದರು.
Date: 13/01/2023 : www.kknewsonline.in
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…

















