ಬೀದರ್ : ಹಿಂಗುಲಾಂಬಿಕಾ ದೇವಿ ಪೂಜೆ
ಬೀದರ ನಗರದ ದರ್ಜಿಗಲ್ಲಿಯಲ್ಲಿ ನವರಾತ್ರಿ ಅಂಗವಾಗಿ ಹಿಂಗುಲಾಂಬಿಕಾ ಮಾತಾ ನವರಾತ್ರಿ ಟ್ರಸ್ಟ್ ವತಿಯಿಂದ ದೇವಿಮೂರ್ತಿ ಪ್ರತಿಸ್ತಾಪನೆ ನಡೆಯಿತು.
ದಿನಾಲು ಬೆಳಗ್ಗೆ , ಸಂಜೆ ವಿಶೇಷ ಅಭಿಷೇಕ, ಮಹಾಮಂಗಳಾರತಿ ಹಾಗೂ ನಾನಾ ಹಲವು ಸಾಂಸ್ರುಕೃತಿಕ ಕಾರ್ಯ ಕ್ರಮಗಳು ನಡೆಯುತ್ತಿವೆ
ಪ್ರತಿ ವರ್ಷ ನವರಾತ್ರ ಉತ್ಸವದಲ್ಲಿ 9ದಿನ ಕಾಲ ದಾಂಡಿಯಾ, ಕೋಲು, ರಂಗೋಲಿ, ಭಜನೆ ಮತ್ತು ಒಂದು ದಿನ ಮಹಾ ಜಾಗರಣೆ ವಿಶೇಷರೂಪದಲ್ಲಿ ಜರುಗುತಿತ್ತು, ಆದರೆ ಈ ಬಾರಿ ಕೊರೊನಾ ಮಹಾಮಾರಿಯಿಂದಾಗಿ ಟ್ರಸ್ಟ್ ಪ್ರಮುಖರ ನೇತೃತ್ವದಲ್ಲಿ ನವರಾತ್ರಿ ಉತ್ಸವ ಕೇವಲ ಧಾರ್ಮಿಕ ಆಚರಣೆಗಾಗಿ ಸೀಮಿತವಿದ್ದು ಸರಳವಾಗಿ ಆಚರಿಸಲಾಗುತ್ತಿದೆ. ಮಾಸ್ಕ್, ಸ್ಯಾನಿಟೈಜರ್ ಮತ್ತು ಸಾಮಾಜಿಕ ಅಂತರ ಹಾಗೂ ಇತರೆ ಮುಂಜಾಗೃತ ಕ್ರಮಗಳನ್ನು ಅನುಸರಿಸಿ ಬರುವ ಭಕ್ತರಿಗೆ ಮಾತ್ರ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಪ್ರಸಾದ ವಿತರಣೆ ಸೇರಿದಂತೆ ಇತರ ಯಾವುದೆ ಧಾರ್ಮಿಕ ಕಾರ್ಯಕ್ರಮ ಇರುವುದಿಲ್ಲಾ. ಭಕ್ತಾದಿಗಳು ಸಹಕರಿಸಬೇಕು ಎಂದು ಟ್ರಸ್ಟ್ ಅಧ್ಯಕ್ಷ ಗಂಗಾಧರ ತಾಂದಳೆ ತಿಳಿಸಿದರು. ಪ್ರಮುಖ ರಾದ ಜಗದೀಶ ಸೂರ್ಯಾನ, ರಾಜೇಶ ಘನಾತೆ, ಸುನಿಲ ಘನಾತೆ, ಪವನ ತಾಂದಳೆ, ವಿನೋದ ಸೂರ್ಯಾನ, ಶೇಷನಾರಾಯಣ ದೌಜೋಡಿ, ಕೀರಣ ಗರ್ಜೇ, ಮನೋಜ ಘನಾತೆ, ವಿನೋದ ಘನಾತೆ, ಸುರೇಶ ತಾಂದಳೆ, ಅಕ್ಷಯ ತಾಂದಳೆ, ಶುಭಂ ಗರ್ಜೇ, ನಿಲೇಶ ಘನಾತೆ ಉಪಸ್ಥಿತರಿದ್ದರು.
ಕಮಲಸಂಸದ ಭಗವಂತ ಖುಬಾ, ಬಾಬುವಾಲಿ, ನಂದಕಿಶೋರ ವರ್ಮಾ ಹಾಗೂ ರಾಜಕೀಯ ಅನೇಕ ಧುರಿಣರು ದೇವಿಯ ದರ್ಶನ ಪಡೆದರು.
ಕಲಬುರಗಿ: ವಿದ್ಯುತ್ ಅವಘಡಗಳಿಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳಿ
*ಮುನ್ನೆಚ್ಚರಿಕೆ ವಹಿಸಿ; ವಿದ್ಯುತ್ ಅವಘಡ ತಪ್ಪಿಸಿ* *ಮಳೆಗಾಲ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಸುರಕ್ಷತಾ …

















