ಬೀದರ್ ಉತ್ಸವ ಸೆಕ್ಸೆಸ್ ಬಿಜೆಪಿ ಮುಖಂಡ ಸೂರ್ಯಕಾಂತ ನಾಗಮಾರಪಳ್ಳಿ ಅಭಿನಂದನೆ
ಉತ್ಸವದ ನಿಮತ್ಯ ಬೀದರ್ ಜನತೆಗೆ ಕಡಿಮೆ ದರಲ್ಲಿ ಹೆಲಿಕ್ಯಾಪ್ಟರ್ ರೈಡ್ ಮಾಡಿಸಿದ ನಾಗಮಾರಪಳ್ಳಿ.
ಬೀದರ್ ಉತ್ಸವ ಯಶಸ್ವಿ, ಜಿಲ್ಲಾ ಆಡಳಿತಕ್ಕೆ ಸೂರ್ಯಕಾಂತ್ ನಾಗಮಾರಪಳ್ಳಿ ಅಭಿನಂದನೆ
ಬೀದರ್ ಉತ್ಸವ ಯಶಸ್ವಿಯಾಗಿ ನಡೆದಿರುವ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣ ಸದಸ್ಯ ಸೂರ್ಯಕಾಂತ್ ನಾಗಮಾರಪಳ್ಳಿ ಅವರು ಜಿಲ್ಲಾ ಆಡಳಿತವನ್ನು ಅಭಿನಂದಿಸಿದ್ದಾರೆ.ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಿ.ಕಿಶೋರಬಾಬು ಅವರನ್ನು ಭೇಟಿಯಾಗಿ, ಶಾಲು ಹೊದಿಸಿ ಸನ್ಮಾನಿಸಿ, ಅಭಿನಂದಿಸಿದರು. ಜಿಲ್ಲಾ ಆಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯ ಕಾಳಜಿಯಿಂದಾಗಿ ಬೀದರ್ ಉತ್ಸವವು ಮೂರು ದಿನಗಳ ಕಾಲ ವೈಭವಪೂರ್ಣವಾಗಿ, ಶಾಂತಿಯುತವಾಗಿ ನಡೆದಿದೆ ಎಂದು ನಾಗಮಾರಪಳ್ಳಿ ತಿಳಿಸಿದ್ದಾರೆ.
ಉತ್ಸವದಲ್ಲಿ ಆರು ಲಕ್ಷ ಜನ ಪಾಲ್ಗೊಂಡರೂ ಯಾವುದೇ ಸಮಸ್ಯೆ ಆಗದಂತೆ ಜಿಲ್ಲಾ ಆಡಳಿತ ನೋಡಿಕೊಂಡಿರುವುದು ಶ್ಲಾಘನೀಯ. ಯಾವುದೇ ರೀತಿಯ ಗೊಂದಲ, ಅಹಿತಕರ ಘಟನೆ ಜರುಗದಂತೆ ಪೊಲೀಸ್ ಇಲಾಖೆಯು ಕಟ್ಟೆಚ್ಚರ ವಹಿಸಿರುವುದು ಅನುಕರಣಿಯ ಎಂದು ಶ್ಲಾಘಿಸಿದ್ದಾರೆ.ಬೀದರ್ ಉತ್ಸವ ಬರೀ ಸಾಂಸ್ಕೃತಿಕ ಚಟುವಟಿಕೆಗಷ್ಟೇ ಸೀಮಿತವಾಗಿಲ್ಲ. ಉದ್ಯೋಗ ಮೇಳ, ಕೃಷಿ ಮೇಳ, ತೋಟಗಾರಿಕೆ ಮೇಳ, ವಸ್ತುಪ್ರದರ್ಶನ ಮುಂತಾದವು ನಡೆದಿವೆ. ಸಂಗೀತ ಪ್ರತಿಭೆಗಳ ಶೋಧಕ್ಕೆ ಬೀದರ್ ಐಡಲ್ ಸ್ಪರ್ಧೆ ನಡೆಸಲಾಗಿದೆ. ಇಡೀ ಉತ್ಸವವು ಅತ್ಯಂತ ಅರ್ಥಪೂರ್ಣವಾಗಿ ನಡೆದಿರುವುದು ಸಂತಸದ ಸಂಗತಿ. ಹೆಸರಾಂತ ನಟರಾದ ಶಿವರಾಜಕುಮಾರ ಡಾಲಿ ಧನಂಜಯ್, ಸಂಗೀತ ನಿರ್ದೇಶಕ ವಿಜಯಪ್ರಕಾಶ, ಗಾಯಕಿ ಮಂಗ್ಲಿ ಸೇರಿದಂತೆ ನಾಡಿನ, ಹೊರ ನಾಡಿನ ಖ್ಯಾತನಾಮ ಕಲಾವಿದರು ಪಾಲ್ಗೊಂಡಿದ್ದರು. ಬೇರೆ ಬೇರೆ ರಾಜ್ಯಗಳ ಕಲಾತಂಡಗಳು ಉತ್ಸವದ ಸಂಭ್ರಮ ಹೆಚ್ಚಿಸಿದ್ದವು ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಉದ್ಯೋಗ ಮೇಳ: ಉತ್ಸವ ನಿಮಿತ್ತ ಡಾ. ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಶನ್‌ನಿಂದಉದ್ಯೋಗ ಮೇಳ ಯಶಸ್ವಿಯಾಗಿ ನಡೆಯಿತು. ದೇಶದ ಹೆಸರಾಂತ ಕಂಪೆನಿಗಳ ಪ್ರತಿನಿಧಿಗಳು ಆಗಮಿಸಿದ್ದರು. 1500 ಕ್ಕು ಅದಿಕ ಯುವಕರಿಗೆ ಉದ್ಯೋಗ ಲಭಿಸಿದೆ. ಇದೊಂದು ಖುಷಿಯ ಸಂಗತಿ. ಬೀದರ್ ಉತ್ಸವವು ನಿರುದ್ಯೋಗಿಗಳಿಗೆ ಉದ್ಯೋಗ ದೊರೆಕಿಸಿಕೊಡಲು ವೇದಿಕೆಯಾಗಿದ್ದು ಮಾದರಿಯಾಗಿದೆ ಎಂದಿದ್ದಾರೆ.
ಹೆಲಿಕಾಪ್ಟರ್ ಸಂಚಾರ: ಶ್ರೀಮಂತರಿಗಷ್ಟೇ ಸೀಮಿತವಾಗಿದ್ದ ಹೆಲಿಕಾಪ್ಟರ್ ಪ್ರಯಾಣವನ್ನು ಜನ ಸಾಮಾನ್ಯರೂ ಆನಂದಿಸುವಂತೆ ಆಗಿರುವುದು ಖುಷಿಯ ಸಂಗತಿ. ಡಾ. ಗುರುಪಾದಪ್ಪ ನಾ
ಗಮಾರಪಳ್ಳಿ ಫೌಂಡೇಶನ್‌ನಿಂದ ಹೆಲಿಕಾಪ್ಟರ್ ಸಂಚಾರ ಉತ್ಸವದ ವ್ಯವಸ್ಥೆ ಮಾಡಲಾಗಿತ್ತು. ರೈತ ಮುಖಂಡರು, ಮಹಿಳೆಯರು, ಮಕ್ಕಳು ಹೆಲಿಕಾಪ್ಟರ್‌ನಲ್ಲಿ ಸಂಚರಿಸಿ ಆನಂದಿಸಿದರು. ಇದು ಉತ್ಸವದ ವೈಭವನ್ನು ಹೆಚ್ಚಿಸಿತ್ತು ಎಂದು ಸೂರ್ಯಕಾಂತ ನಾಗಮಾರಪಳ್ಳಿ ತಿಳಿಸಿದ್ದಾರೆ.
ಹೆಸರಾಂತ ನಟರು, ಕಲಾವಿದರು ಆಗಮಿಸಿದ್ದರಿಂದ ಜಿಲ್ಲೆಯ ಖ್ಯಾತಿಯು ಇತರೆಡೆಯೂ ಹರಡುವಂತಾಗಿದೆ. ಪ್ರವಾಸೋದ್ಯಮ ಬೆಳವಣಿಗೆಗೂ ಬೀದರ್ ಉತ್ಸವ ನೆರವಾಗಿದೆ. ಬೀದರಿನ ಕಲೆ, ಪರಂಪರೆ, ಇತಿಹಾಸ, ಸಂಸ್ಕೃತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಎಲ್ಲ ನಾಯಕರು, ಕಲಾವಿದರು ಕೊಂಡಾಡಿದ್ದಾರೆ. ಇದೊಂದು ಹೆಮ್ಮೆಯ ಸಂಗತಿ.
ನಟ ಶಿವರಾಜಕುಮಾರ ಅವರು ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿ ಸೂಪರ್ ಸ್ಪೇಷಾಲಿಟಿ ಸಹಕಾರ ಆಸ್ಪತ್ರೆಗೆ ಭೇಟಿ ನೀಡಿದ್ದರು. ಅಲ್ಲಿನ ಚಿಕಿತ್ಸಾ ಸೌಲಭ್ಯ, ಆಸ್ಪತ್ರೆಯ ಸಾಧನೆ, ಕೋವಿಡ್ ಸಮಯದಲ್ಲಿನ ಸೇವೆಯನ್ನು ಕೊಂಡಾಡಿದ್ದರು. ಶಿವರಾಜಕುಮಾರ ಅವರ ಭೇಟಿ, ಪ್ರೋತ್ಸಾಹದಾಯಕ ಮಾತುಗಳು ಇನ್ನಷ್ಟು ಜನಸೇವೆ ಮಾಡಲು ಶಕ್ತಿ ನೀಡಿವೆ ಎಂದು ಆಸ್ಪತ್ರೆಯ ಅಧ್ಯಕ್ಷರೂ ಆಗಿರುವ ಸೂರ್ಯಕಾಂತ ನಾಗಮಾರಪಳ್ಳಿ ತಿಳಿಸಿದ್ದಾರೆ.
ಡಾ. ಗುರುಪಾದಪ್ಪ ನಾಗಮಾರಪಳ್ಳಿ ಡಿಸಿಸಿ ಬ್ಯಾಂಕ್ ಶಾರದಾ ಆರ್-ಸೆಟಿಗೂ ನಟ ಶಿವರಾಜಕುಮಾರ, ಗೀತಾ ಶಿವರಾಜಕುಮಾರ ಭೇಟಿ ನೀಡಿದ್ದರು. ಅಲ್ಲಿನ ತರಬೇತಿ ಚಟುವಟಿಕೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…

















