ನಿಂಬೂರ ಗ್ರಾಮದಲ್ಲಿ ಭೂಕಂಪ : 3.1 ತೀವ್ರತೆ ದಾಖಲು
ನಿಂಬೂರ ಗ್ರಾಮದಲ್ಲಿ ಭೂಕಂಪ : 3.1 ತೀವ್ರತೆ ದಾಖಲು.
ಹುಮನಾಬಾದ: ಡಿಸೆಂಬರ್ 31: ತಾಲೂಕಿನ ನಿಂಬೂರ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ 1:58 ಕ್ಕೆ ಭೂಕಂಪ ಸಂಭವಿಸಿದ್ದು, 3.1 ತೀವ್ರತೆ ದಾಖಲಾಗಿದೆ ಎಂದು ತಿಳಿದುಬಂದಿದೆ.
ನಿಂಬೂರ ಗ್ರಾಮದಲ್ಲಿ ಕಳೆದ ಕೆಲ ದಿನಗಳಿಂದ ಭೂಮಿ ಕಂಪಿಸುತ್ತಿರುವ ಅನುಭವ ಹಾಗೂ ಭೂಮಿಯಿಂದ ನಿಗೂಢ ಶಬ್ದಗಳು ಕೇಳಿಬರುತ್ತಿರುವ ಕುರಿತು ಗ್ರಾಮಸ್ಥರು ಹೇಳುತ್ತಿದ್ದು, ಕಳೆದ ಎರೆಡು ದಿನಗಳ ಹಿಂದೆ ಗ್ರಾಮಸ್ಥರು 112ಗೆ ಕರೆಮಾಡಿ ಮಾಹಿತಿ ಕೂಡ ನೀಡಿರುವ ಕುರಿತು ತಿಳಿಸಿದ್ದಾರೆ. ಇದೀಗ ಗ್ರಾಮದಲ್ಲಿ ಭೂಕಂಪನ ಸಂಭವಿಸಿರುವ ಸುದ್ದಿ ತಿಳಿದ ಜನರು ಆತಂಕಕ್ಕೆ ಒಳಗಾಗಿದ್ದಾರೆ.
ಶುಕ್ರವಾರ ಮಧ್ಯಾಹ್ನ ಕೆಲಸಮಯ ಭೂಮಿಯಿಂದ ನಿಗೂಢ ಶಬ್ದಗಳು ಹಾಗೂ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಆದರೆ ಗ್ರಾಮದಲ್ಲಿ ಯಾವುದೇ ಅನಾಹುತ, ಜೀವಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…


















