ಜೆಡಿಎಸ್ ಹುಮನಾಬಾದ್ ವಿಧಾನಸಭಾ ಕ್ಷೇತ್ರ ಪ್ರಣಾಳಿಕೆ
ಜೆಡಿಎಸ್ : ಹುಮನಾಬಾದ್ ವಿಧಾನಸಭಾ ಕ್ಷೇತ್ರಕ್ಕೆ ಪ್ರಣಾಳಿಕೆ
ಹುಮನಾಬಾದ: ಹುಮ್ನಾಬಾದ್ ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿ ಸಿಎಂ ಫೈಜ್ ಪ್ರತ್ಯೇಕ ಪ್ರಣಾಳಿಕೆ ತಯಾರಿಸಿ ಬಿಡುಗಡೆ ಮಾಡಿದ್ದಾರೆ.
ಭಾನುವಾರ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರ ನೇತೃತ್ವದಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಲಾಯಿತು. ಕ್ಷೇತ್ರದಲ್ಲಿ ಹೈಟೆಕ್ ಶಾಲೆಗಳ ನಿರ್ಮಾಣ, ಆಸ್ಪತ್ರೆಗಳ ಆಧುನಿಕರಣ, ಶುದ್ಧ ಕುಡಿಯುವ ನೀರು, ಸದ್ಯ ಇರುವ ಬಸ್ ನಿಲ್ದಾಣ ತೆರವು ಮಾಡಿ ಧೋನಿಕ ಬಸ್ ನಿಲ್ದಾಣ ಜೊತೆಗೆ ಬೃಹತ್ ವಾಣಿಜ್ಯ ಮಳಿಗೆ ನಿರ್ಮಾಣ, ಕಡಿಮೆ ಆದಾಯ ಇರುವ ಕುಟುಂಬಗಳಿಗೆ ಮನೆ ನಿರ್ಮಾಣ, ಕೃಷಿ ಕ್ಷೇತ್ರದ ಅಭಿವೃದ್ಧಿಗೆ ವಿವಿಧ ಕೆಲಸ ಕಾರ್ಯಗಳು, ಅರ್ಹರಿಗೆ ಭೂಮಿ ಹಂಚಿಕೆ, ಶಾಸಕರಾದರೆ ಬರುವ ವೇತನವನ್ನು ಮಕ್ಕಳ ಆರೋಗ್ಯಕ್ಕಾಗಿ ಬಳಕೆ, ಕ್ರೀಡಾಂಗಣ ನಿರ್ಮಾಣ ಕ್ರೀಡೆಗಳಿಗೆ ಪ್ರೋತ್ಸಾಹ, ಹುಮ್ನಾಬಾದ್ ಪಟ್ಟಣದಲ್ಲಿ ಆರ್ ಟಿ ಓ ಕಚೇರಿ ಸ್ಥಾಪನೆ, ತ್ಯಾಜ್ಯ ನಿರ್ವಹಣೆ ಮತ್ತು ಮಾಲಿನ್ಯ ನಿಯಂತ್ರಣಕ್ಕೆ ಕ್ರಮ ಹೀಗೆ ಅನೇಕ ಯೋಜನೆಗಳು ಒಳಗೊಂಡ ಪ್ರಣಾಳಿಕೆ ಒಂದನ್ನು ಬಿಡುಗಡೆ ಮಾಡಿದ್ದಾರೆ. ಹುಮ್ನಾಬಾದ್ ಕ್ಷೇತ್ರಕ್ಕೆ ಅಭ್ಯರ್ಥಿ ಒಬ್ಬರು ಪ್ರತ್ಯೇಕವಾಗಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ವಿಶೇಷ.
ಜೆಡಿಎಸ್ ಅಭ್ಯರ್ಥಿ ಸಿ.ಎಂ ಫೈಜ್, ತಾಲೂಕು ಅಧ್ಯಕ್ಷ ಗೌತಮ್ ಸಾಗರ್, ಅಂಕುಶ್ ಗೋಖಲೆ, ಎ ಎಂ ಕುಲಕರ್ಣಿ, ಶಿವಪುತ್ರ ಮಾಳಿಗೆ ಸೇರಿದಂತೆ ಅನೇಕರು ಇದ್ದರು.
Date:08-05-2023/www.kknewsonline.in:
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…


















