ಏಡ್ಸ್ ರೋಗವನ್ನು ದೂರವಿಡಿ, ರೋಗಿಯನ್ನಲ್ಲ: ನ್ಯಾ.ಸಿದ್ರಾಮ ಟಿ.ಪಿ
ಬೀದರ: ಸಮಾಜದಲ್ಲಿ ಏಡ್ಸ್ ರೋಗ ಪೀಡಿತರನ್ನು ಕನಿಷ್ಠವಾಗಿ ನೋಡುವ ವಾತಾವರಣ ನಿರ್ಮಾಣವಾಗಿದೆ. ನಮ್ಮ ಸುತ್ತಲಿನಲ್ಲಿ ಏಡ್ಸ್ ಪೀಡಿತರು ಕಾಣಿಸಿದಾಗ ಅವರನ್ನು ಕಡೆಗಣನೆಯ ದೃಷ್ಟಿಯಿಂದ ನೋಡದೇ ರೋಗ ನಿವಾರಿಸಲು ಸಹಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿದ್ರಾಮ.ಟಿ.ಪಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ ಹಾಗೂ ಪ್ರವರ್ಧ, ಎಲ್‌ಬಿಇಎಸ್, ಎಸ್‌ಟಿಪಿ ಮತ್ತು ಆರ್‌ಡಿಎಸ್‌ಎಸ್, ಬೆಳದಿಂಗಳು ನೆಟವರ್ಕ್ ಸ್ವಯಂ ಸೇವಾ ಸಂಸ್ಥೆಗಳ sಸಂಯುಕ್ತ ಆಶ್ರಯದಲ್ಲಿ
ಡಿ.3ರಂದು ಮಂಗಳವಾರ ನಗರದ ಬ್ರಿಮ್ಸ್ ಆಸ್ಪತ್ರೆಯ ಲೆಕ್ಚರ್ ಹಾಲ್-1ರಲ್ಲಿ ಜಿಲ್ಲಾ ಮಟ್ಟದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬ್ರಿಮ್ಸ್ ನಿರ್ದೇಶಕರಾದ ಡಾ| ಚಂದ್ರಕಾAತ ಚಿಲ್ಲರ್ಗಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿÀ ಡಾ| ದೀಪಾ ಖಂಡ್ರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವೈದ್ಯಕೀಯ ಅಧೀಕ್ಷಕರಾದ ಡಾ| ವಿಜಯಕುಮಾರ ಅಂತಪ್ಪನೋರ ಮಾತನಾಡಿ, ಹೆಚ್.ಐ.ವಿ ಸೋಂಕಿತರು ತಮ್ಮ ಆರೋಗ್ಯದ ಸ್ಥಿತಿ ಸುಧಾರಣೆಗಾಗಿ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ, ಸರಿಯಾದ ರೀತಿಯಲ್ಲಿ ಚಿಕಿತ್ಸೆಯನ್ನು ಪಡೆಯಬೇಕೆಂದು ಸಲಹೆ ಮಾಡಿದರು.
ಉಪನ್ಯಾಸ ನಿಡಿದ ಆರ್‌ಎನ್‌ಟಿಸಿಪಿ ನೋಡಲ್ ಅಧಿಕಾರಿ ಡಾ| ಮಹೇಶ ತೊಂಡಾರೆ ಏಡ್ಸ್ ರೋಗದ ಲಕ್ಷಣಗಳು ಮತ್ತು ನಿಯಂತ್ರಣ ಕ್ರಮಗಳ ಬಗ್ಗೆ ವಿವರಣೆ ನೀಡಿದರು. ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಕೃಷ್ಣಾ ರೆಡ್ಡಿ, ಡಾ| ರಾಜಶೇಖರ ಪಾಟೀಲ, ಡಾ| ಇಂದುಮತಿ ಪಾಟೀಲ, ಡಾ| ಅನೀಲಕುಮಾರ ಚಿಂತಾಮಣಿ ಸೇರಿದಂತೆ ಅನೇಕರು ಇದ್ದರು.
Date:03-12-2019 Time:6:50
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…

















