Home ನಿಮ್ಮ ಜಿಲ್ಲೆ ಬೀದರ ಬೀದರ್:ಬುಡಾ ಸೈಟ್ ಹಂಚಿಕೆಗೆ ಹೈಕೋರ್ಟ್ ತಡೆ

ಬೀದರ್:ಬುಡಾ ಸೈಟ್ ಹಂಚಿಕೆಗೆ ಹೈಕೋರ್ಟ್ ತಡೆ

ಎಂಎಲ್ ಸಿ ಅರವಿಂದ ಅರಳಿ

ಬೀದರ್:ಬುಡಾ 47 ಸೈಟ್ ಹಂಚಿಕೆ ಗೆ ಹೈಕೋರ್ಟ್ ತಡೆ ಎಂಎಲ್ ಸಿ ಅರವಿಂದ ಅರಳಿ

ಬೀದರ್ ನಗರಾಭಿವೃದ್ದಿ ಪ್ರಾಧಿಕಾರ ನಗರದ ಸಿದ್ರಾಮಯ್ಯಾ ಬಡಾವಣೆಯ125 ಚಿದ್ರಿಯಲ್ಲಿ 13 ಸೈಟ್ ಸೇರಿ 47 ಸೈಟ್ ಗಳ ಈ ಹರಾಜು ಪ್ರತಿಕ್ರಿಯೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ…..

ಹೆಚ್ಚುವರಿ 47 ಸೈಟ್ ಗಳನ್ನ ಹಂಚಿಕೆ ಮಾಡಲು ಪತ್ರಿಕೆಗಳಲ್ಲಿ ಬೀದರ್ ನಗರಾಭಿವೃದ್ದಿ ಪ್ರಾಧಿಕಾರ ಜಾಹೀರಾತು ನೀಡಿತ್ತು. ಅದರಲ್ಲಿ ಬರುವ ಮಾರ್ಚ್ 28ರ ವರೆಗೆ ಇದ್ದ ಅವಧಿಯನ್ನ ಪತ್ರಿಕೆಯಲ್ಲಿ ಟೆಂಡರ್ ನೋಟಿಫಿಕೆಷನ್ ಬಂದ ಮರುದಿನ ಕೊನೆಯ ದಿನಾಂಕವನ್ನ 20ಕ್ಕೆ ಇಳಿಸಿಲಾಗಿತ್ತು…..

ಇದರಿಂದ ಸೈಟ್ ಗಾಗಿ ಅರ್ಜಿ ಹಾಕುವ ಜನರಿಗೆ ತೊಂದರೆಯಾಗಿತ್ತು.ಈ ಹಿನ್ನಲೆಯಲ್ಲಿ ಬೀದರ್ ನಗರಾಭಿವೃಧಿ ಪ್ರಾಧಿಕಾರ ಅಧ್ಯಕ್ಷ ಹಾಗು ಬುಡಾ ಕಮಿಷನರ್ ವಿರುದ್ದ ವಿಧಾನ ಪರಿಷತ್ ಸದಸ್ಯ ಅರವಿಂದ ಅರಳಿ ಕಲಬುರಗಿ ಹೈಕೋರ್ಟ್ ಮೆಟ್ಟಿಲು ಏರಿದ್ದರು….

ವಿಧಾನ ಪರಿಷತ್ ಸದಸ್ಯ ಅರವಿಂದ ಅರಳಿ ಪರವಾಗಿ ಅವರ ವಕೀಲರಾದ ರವಿ ಬಿ ಪಾಟೀಲ್ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ರು. ಅವರ ವಾದ ಹಿನ್ನಲೆಯಲ್ಲಿ ಹೈ ಕೋರ್ಟ್ ಬೀದರ್ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಆಯುಕ್ತರಿಗೆ ನೋಟಿಸ್ ಜಾರಿ ಮಾಡಿ ಹತ್ತು ದಿನದಲ್ಲಿ ಉತ್ತರಿಸುವಂತೆ ಸೂಚಿಸಿದ್ದಲ್ಲದೆ ಮಧ್ಯಂತರ ಆದೇಶದಲ್ಲಿ ಸೈಟ್ ಹಂಚಿಕೆಗೆ ತಡೆ ನೀಡಿದೆ…

ಇದರಲ್ಲಿ ಭಾರಿ ಬ್ರಷ್ಟಾಚಾರ ನಡೆದಿದೆ ಅಂತಾ ಎಂಎಲ್ ಸಿ ಅರವಿಂದ ಅರಳಿ ಆರೋಪಿಸಿದ್ದಾರೆ….

ಅತ್ಯಂತ ಕಡಿಮೆ ಹಣಕ್ಕೆ ಅಂದ್ರೆ ನಾಲ್ಕುರಿಂದ ಐದು ಲಕ್ಷಕ್ಕೆ ಸೈಟ್ ಗಳನ್ನ ನೀಡಿ ಹೆಚ್ಚುವರಿ ಹಣ ಲೂಟಿ ಮಾಡಲಾಗುತ್ತದೆ ಅಂತಾ ಅವರು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ….

ಸಧ್ಯಕ್ಕೆ 47 ಸೈಟ್ ಗಳ ಹರಾಜು ಪ್ರತಿಕ್ರಿಯೇಗೆ ಬ್ರೇಕ್ ಬಿದ್ದಿದ್ದು ಬೀದರ್ ಜನರಿಗೆ ಸೈಟ್ ಸಿಗುವ ಆಶಯ ಗರಿಗೆದರಿದೆ.

ಅತ್ಯಂತ ಕಡಿಮೆ ಹಣದಲ್ಲಿ ಪ್ರಭಾವಿ ರಾಜಕಾರಣಿಗಳ ಪತ್ನಿಯರ ಹೆಸರಿಗೆ 4ರಿಂದ 5ಲಕ್ಷ ಕ್ಕೆ ಒಂದು ಸೈಟ್ ನೀಡಲು ಮುಂದಾಗಿದ್ದರು. ಆದ್ರೆ ಅಲ್ಲಿ ವಾಸ್ತವದಲ್ಲಿ ಅಷ್ಟು ಕಡಿಮೆ ದರದಲ್ಲಿ ಪ್ಲಾಟ್ ಸಿಗುತ್ತಾ ಅನ್ನೋದು ಅವರ ಪ್ರಶ್ನೆಯಾಗಿತ್ತು.

ಪತ್ರಿಕೆಯಲ್ಲಿ ಜಾಹೀರಾತು ಕೊಡುವಾಗಲು ವಾರ್ತಾಇಲಾಖೆಯ ಮುಖಾಂತರವು ಗೋಲ್ಮಾಲ್ ಮಾಡಲಾಗಿದೆ ಅಂತಾ ಅರವಿಂದ ಅರಳಿ ಪತ್ರಿಕೆಯೊಂದರ ಪ್ರತಿ ಪ್ರದರ್ಶಿಸಿದ್ದರು.

ಸಧ್ಯಕ್ಕೆ ಬುಡಾ ಅಧ್ಯಕ್ಷರು ಹಾಗೂ ಆಯುಕ್ತರು ಭಾರಿ ಭ್ರಷ್ಟಾಚಾರ ಮಾಡುತ್ತಿದ್ದಾರೆ ಅಂತಾ ಅವರು ಆರೋಪಿಸಿದ್ದರು.ಪ್ರತಿ ಸಲ ಮೀಟಿಂಗ್ ನಲ್ಲಿ ಆಗುವ ಚರ್ಚೆಯೇ ಬೇರೆ ಆದ್ರೆ ಪ್ರೋಸಿಡಿಂಗ್ ನಲ್ಲಿ ಬರೆಯುವದೆ ಬೇರೆ.

ಅದರ ಪ್ರತಿಯನ್ನ ಆಯುಕ್ತರರಿಗೆ ಕೇಳಿದ್ರೆ ಅದು ಅಧ್ಯಕ್ಷರ ಮನೆಯಲ್ಲಿದೆ ಅಂತಾ ಅವರು ಹೇಳುತ್ತಾರೆ.
ಸರ್ಕಾರಿ ಕಚೇರಿಯಲ್ಲಿರಬೇಕಾದ ದಾಖಲೆಗಳು ಅಧ್ಯಕ್ಷರ ಮನೆಯಲ್ಲಿದೆ ಅನ್ನೋದು ಯಾಕೆ..? ಅಂತ ಅವರು ಪ್ರಶ್ನೆ ಸಿದ್ದರು…

ಶಾಹಿನ್ ಕಾಲೇಜ್ ಕೆರೆ ಒತ್ತುವರಿ ವಿಷಯ ತಾವು ಯಾವುದೆ ಕಾರಣಕ್ಕು ಬಿಡುವುದಿಲ್ಲ ಅಂತಾ ಅವರು ಇದೇ ಸಂದರ್ಭದಲ್ಲಿ ಹೇಳಿದ್ದರು.

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…