ಹುಮನಾಬಾದ : ಎಲ್ಲೆಡೆ ದೇಶಾಭಿಮಾನದ ಕಲರವ
ಹುಮನಾಬಾದ : ಎಲ್ಲೆಡೆ ದೇಶಾಭಿಮಾನದ ಕಲರವ
ಆಜಾದಿ ಕಾ ಅಮೃತಮಹೋತ್ಸವ : ಸಿದ್ದು ಪಾಟೀಲ ನೇತೃತ್ವದಲ್ಲಿ ಬೈಕ್ ಜಾಥ
ಹುಮನಾವಾದ:ಆ.14/ 75ನೇ ಸ್ವಾತಂತ್ರ್ಯ ಅಮೃತಮಹೋತ್ಸವ ನಿಮಿತ್ಯ ಪಟ್ಟಣದಲ್ಲಿ ಪ್ರತಿದಿನ ಹತ್ತಾರು ಜಾಥಗಳು ನಡೆಯುತ್ತಿದ್ದು ಹಬ್ಬದ ವಾತಾವರಣ ನಿರ್ಮಾಣಗೊಂಡಿದೆ.
ಕಳೆದ ಆ.8 ರಿಂದ ಆರಭಗೊಂಡ ತಿರಂಗಾ ಜಾಥಗಳು ಪ್ರತಿದಿನ ಹತ್ತಾರು ಸಂಘ, ಸಂಸ್ಥೆಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ರಾಜಕೀಯ ಪಕ್ಷಗಳ ನೇತೃತ್ವದಲ್ಲಿ, ಕಾಲ್ನಡಿಗೆ ಜಾಥಾ, ಬೈಕ್ ಜಾಥಾಗಳು ಭರದಿಂದ, ಸಡಗರ-ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ.
ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ ಹರ್ ಘರ್ ತಿರಂಗಾ ಯೋಜನೆಗೆ ಪಟ್ಟಣದಲ್ಲಿ ಉತ್ತಮ ಸ್ಪಂದನೆ ದೊರೆತಿದ್ದು, ಪಟ್ಟಣದ ಪ್ರತಿಯೊಂದು ಮನೆಗಳು, ಅಂಗಡಿಗಳ ಮೇಲೆ ರಾಷ್ಟ್ರಧ್ವಜ ಹಾರುತಿರುವುದು ಕಂಡುಬರುತ್ತಿದೆ. ದ್ವಿಚಕ್ರವಾಹನ, ಆಟೋ, ಕಾರುಗಳ ಮೇಲೆ ಕೂಡ ರಾಷ್ಟ್ರಧ್ವಜ ಅಳವಡಿಸಿ ಜನರು ಸಂಭ್ರಮಿಸುತ್ತಿದ್ದಾರೆ. ಒಟ್ಟಾರೆ ಈ ವರ್ಷದ ಅಮೃತಮಹೋತ್ಸವನ್ನು ಇಲ್ಲಿನ ಜನರು ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದಾರೆ. ಪಟ್ಟಣದ ಎಲ್ಲಾ ಕಡೆಗಳಲ್ಲಿ ರಾಷ್ಟ್ರಭಕ್ತಿಯ ಕಲರವ ಕಂಡುಬರುತ್ತಿದೆ.
ಬಿಜೆಪಿ ಬೈಕ್ ರ್ಯಾಲಿ: ಭಾನುವಾರ ಬೆಳಿಗ್ಗೆ ಬಿಜೆಪಿ
ಪಕ್ಷದ ವತಿಯಿಂದ ಪಟ್ಟಣದಲ್ಲಿ ಅದ್ದೂರಿ ಬೈಕ್ ರ್ಯಾಲಿ ನಡೆಯಿತು. ನೂರಾರು ಬೈಕ್ಗಳು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಭಾರತ್ ಮಾತಾ ಕೀ ಜಯ್ ಎಂಬ ಜಯಘೋಷ ಹಾಕಿದರು. ಬಿಜೆಪಿ ಯುವ ಮುಖಂಡ ಡಾ। ಸಿದ್ದಲಿಂಗಪ್ಪ ಪಾಟೀಲ, ಜಿಲ್ಲಾಧ್ಯಕ್ಷರಾದ ಶಿವಾನಂದ ಮಂಠಾಳಕರ್, ಸೋಮನಾಥ ಪಾಟೀಲ, ರಮೇಶ ಕಲ್ಲೂರ್, ಮಧುಕರ್ ಹಿಲಾಲಪೂರ್, ಸುನೀಲ ಪಾಟೀಲ, ನಾಗೇಶ ಕಲ್ಲೂರ್, ಗಿರೀಶ ತುಂಬಾ, ದಯಾನಂದ ಮೇತ್ರೆ, ಪ್ರಭಾಕಾರ ನಾಗರಾಳೆ, ಗಿರೀಶ ಮಾಲಿಪಾಟೀಲ ಸೇರಿದಂತೆ ನೂರಾರು ಪಕ್ಷದ ಕಾರ್ಯಕರ್ತರು ಭಾಗವಹಿಸಿದರು.
Date:14-08-2022/Time:2:00pm
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…

















