ಸಮಾಜ ಸುಧಾರಕ ಕ್ರಾಂತಿಯೋಗಿ ಬಸವಣ್ಣ- ಶಾಸಕ ರಾಜಶೇಖರ ಪಾಟೀಲ.
ಹುಮನಾಬಾದ: ಶೋಷಣೆ ರಹಿತ ಸಮಾನತೆಯ ಸಮಾಜದ ಸೃಷ್ಟಿಗಾಗಿ ಹೋರಾಡಿದ ಸಾಮಾಜಿಕ ಹರಿಕಾರ ಸುಧಾರಕ ಬಸವಣ್ಣನವರು. ಅವರು ಪ್ರತಿಪಾದಿಸಿದ ಆದರ್ಶಗಳು ನಮಗೆ ಸದಾಕಾಲ ವಿಶ್ವಭ್ರಾತೃತ್ವದ ಸನ್ಮಾರ್ಗದಲ್ಲಿ ನಡೆಯುವ ಬೆಳಕನ್ನು ನೀಡುವಂತಾಗಲಿ ಎಂದು ಶಾಸಕ ರಾಜಶೇಖರ ಪಾಟೀಲ ಹೇಳಿದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿ ನಿಮಿತ್ಯ ಪ್ರಾರ್ಥನೆ ಸಲ್ಲಿಸಿ ಹಾಗೂ ಪುತ್ಥಳಿಗೆ ಮಾಲಾರ್ಪಣೆ ಮಾಡು ಅವರು ಮಾತನಾಡಿದರು.
ವಿಶ್ವಕ್ಕೆ ಇಂದು ಕೊರೊನಾ ವೈರಸ್ ಹಾವಳಿ ಕಾಡುತ್ತಿದ್ದು ಪ್ರತಿಯೊಬ್ಬರು ತಮ್ಮ ತಮ್ಮ ಮನೆಯಲ್ಲಿ ಉಳಿದುಕೊಂಡು ಕೊರೊನಾ ವೈರಸ್ ಹರಡದಂತೆ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದ ಅವರು, ವಿಶ್ವದ ಮೊದಲ ಸಂಸತ್ ಸ್ಥಾಪಿಸಿದ ವಿಶ್ವಗುರು ಬಸವಣ್ಣನವರು ಸಮಾಜದ ಎಲ್ಲಾ ವರ್ಗಗಳ ಜನರಿಗೆ ಸಾಮಾಜಿಕ ನ್ಯಾಯ ನೀಡಿದ ಕೀರ್ತಿ ಅವರದಾಗಿದೆ ಎಂದು ಬಣ್ಣಿಸಿದರು.
ವಿಧಾನ ಪರಿಷತ್ ಸದಸ್ಯ ಡಾ। ಚಂದ್ರಶೇಖರ ಪಾಟೀಲ, ಡಾ। ಸಿದ್ದು ಪಾಟೀಲ, ಮಲ್ಲಿಕಾರ್ಜುನ ಮಾಶೇಟ್ಟಿ, ತಾಪಂ ಅಧ್ಯಕ್ಷ ರಮೇಶ ಡಾಕುಳಗಿ, ತಗಶೀಲ್ದಾರ ನಾಗಯ್ಯಾ ಹಿರೇಮಠ, ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ, ಮಹೇಶ ಅಗಡಿ, ಸೋಮಯ್ಯ ಮಠಪತಿ, ಬಸವರಾಜ ಆರ್ಯ, ಗಜೇಂದ್ರ ಕನಕಟ್ಕರ್, ರವಿ ಮಾಡಗಿ, ಸುರೇಶ ಸೀಗಿ, ಶ್ರೀನಾಥ ದೇವಣಿ, ವಿಜಯಕುಮಾರ ದುರ್ಗ, ಅಶೋಕ ಸಿದ್ದೇಶ್ವರ, ಮಲ್ಲಿಕಾರ್ಜುನ ಸೀಗಿ, ಸುನೀಲ ಪಾಟೀಲ, ದತ್ತಕುಮಾರ ಚಿದ್ರಿ, ವೀರಪ್ಪಾ ಭೂತಾಳೆ, ಎಂ.ಎ ಬಾಸಿದ್, ಲಕ್ಷ್ಮಿಕಾಂತ ಹಿಂದೊಡಿ ಸೇರಿದಂತೆ ಅನೇಕರು ಇದ್ದರು.
Date: 26-04-20209
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…