Home ನಿಮ್ಮ ಜಿಲ್ಲೆ ಬೀದರ ಸಕಲ ಮತಕ್ಕೆ ಪ್ರಭು ಸಂಸ್ಥಾನ ಹೆಸರುವಾಸಿ-ಆನಂದರಾಜ ಪ್ರಭು

ಸಕಲ ಮತಕ್ಕೆ ಪ್ರಭು ಸಂಸ್ಥಾನ ಹೆಸರುವಾಸಿ-ಆನಂದರಾಜ ಪ್ರಭು

 

ಹುಮನಾಬಾದ: ಮಾಣಿಕನಗರದ ಮಾಣಿಕಪ್ರಭು ಸಂಸ್ಥಾನದಲ್ಲಿ ಜಾತಿ, ಧರ್ಮಗಳ ಭೇಧಭಾವಕ್ಕೆ ಅವಕಾಶವಿಲ್ಲ. ಸಂಸ್ಥಾನದಲ್ಲಿ ಸಕಲಮತಗಳಿಗೆ ಒಂದೇ ಸ್ಥಾನಮಾನ ನೀಡಲಾಗಿದೆ ಎಂದು ಮಾಣಿಕಪ್ರಭು ಸಂಸ್ಥಾನದ ಸಚಿವ ಆನಂದರಾಜ ಮಾಣಿಕಪ್ರಭು ಹೇಳಿದರು.

ತಾಲೂಕಿನ ಮಾಣಿಕನಗರದಲ್ಲಿ ನಡೆಯುತ್ತಿರುವ ಮಾಣಿಕಪ್ರಭುಗಳ ಜಾತ್ರಾ ಮಹೋತ್ಸವ ನಿಮಿತ್ಯ ಡಿ.13 ಶುಕ್ರವಾರ ರಾತ್ರಿ ನಡೆದ ಸಂಗೀತ ದರ್ಬಾರ್ ಸಮಾರಂಭದಲ್ಲಿ ಸಂಸ್ಥಾನದ ಕಾರ್ಯ ಚಟುವಟಿಕೆಗಳ ಕುರಿತು ವಿವರಣೆ ನೀಡಿದರು.

ಮಾಣಿಕ ಪ್ರಭುಗಳ ಕುರಿತು ಡಾ| ಜ್ಞಾನರಾಜ ಮಾಣಿಕಪ್ರಭುಗಳು ದೇಶದ ವಿವಿಧ ರಾಜ್ಯಗಳಿಗೆ ಪ್ರವಾಸ ನಡೆಸಿ ಪ್ರಭು ಭಕ್ತರಿಗೆ ಆಶೀರ್ವಚನ ನೀಡುವ ಕಾರ್ಯಕ್ರಮಗಳು ಎಲ್ಲಾಕಡೆಗಳಲ್ಲಿ ಯಶಸ್ವಿಯಾಗಿವೆ. ಪ್ರಭು ಭಕ್ತರು ಸ್ವಯಂ ಇಚ್ಛೆಯಿಂದ ಸಕಲ ಯೋಜನೆಗಳು ರೂಪಿಸಿಕೊಂಡು ಕಾರ್ಯಕ್ರಮಗಳು ನಡೆಸುವ ಮೂಲಕ ಪ್ರಭು ಸೇವೆಗೆ ಅಣಿಯಾಗುತ್ತಿದ್ದಾರೆ. ಅಲ್ಲದೆ, ಜಾತ್ರೆಗೆ ಬರುವ ಭಕ್ತಾದಿಗಳಿಗೆ ವಿವಿಧಡೆಯ ಭಕ್ತರು ಅನ್ನದಾನ ಸೇವೆ ಜತೆಗೆ ಇತರೆ ಸೇವೆಗಳು ಮಾಡಿ ಪ್ರಭು ಕೃಪೆಗೆ ಒಳಗಾಗಿದ್ದಾರೆ. ಅಲ್ಲದೆ, ಇಲ್ಲಿನ ವಿವಿಧ ಕಾರ್ಯ ಯೋಜನೆಗಳಿಗೆ ಸ್ಥಳಿಯ ಶಾಸಕ ರಾಜಶೇಖರ ಪಾಟೀಲ ಸೇರಿದಂತೆ ವಿವಿಧ ರಾಜಕಾರಣಿಗಳು ಬೆಂಬಲ ನೀಡುತ್ತಿದ್ದಾರೆ ಎಂದು ಹೇಳಿದರು.

ಶುಕ್ರವಾರ ರಾತ್ರಿ ಇಡೀ ವಿವಿಧ ರಾಜ್ಯಗಳಿಂದ ಬಂದ ಸಂಗೀತ ಕಲಾವಿದರು ತಮ್ಮ ಸೇವೆ ಸಲ್ಲಿಸಿದರು. ಸಾವಿರಾರು ಭಕ್ತರು ಸಂಗೀತ ಸಮಾರಂಭದಲ್ಲಿ ಭಾಗವಹಿಸಿದರು. ಶನಿವಾರ ಬೆಳಿಗೆ ಭವ್ಯ ಮೆರವಣಿಗೆ ನಡೆಯಿತು. ಶಾಸಕ ರಾಜಶೇಖರ ಪಾಟೀಲ, ಎಂಎಲ್‌ಸಿ ಡಾ| ಚಂದ್ರಶೇಖರ ಪಾಟೀಲ ಅವರನ್ನು ಜ್ಞಾನರಾಜ ಪ್ರಭುಗಳು ಸನ್ಮಾನಿಸಿದರು.

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…