Home ನಿಮ್ಮ ಜಿಲ್ಲೆ ಬೀದರ ಶಿಕ್ಷಕನ ಮನೆ ಕಳ್ಳತನ ಮಾಡಿದ ಆರೋಪಿ ಬಂಧನ

ಶಿಕ್ಷಕನ ಮನೆ ಕಳ್ಳತನ ಮಾಡಿದ ಆರೋಪಿ ಬಂಧನ

ಶಿಕ್ಷಕನ ಮನೆ ಕಳ್ಳತನ ಮಾಡಿದ ಆರೋಪಿ ಬಂಧನ

ಬೀದರ: ಹುಮನಾಬಾದ ಪಟ್ಟಣದಲ್ಲಿ ಶಿಕ್ಷಕನ ಮನೆಯೊಂದು ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್‌ ಅಧಿಕಾರಿಗಳು ಕಳ್ಳನೊಬ್ಬನನ್ನು ಬಂಧಿಸಿ 10.01 ತೊಲ  ಬಂಗಾರದ ಆಭರಣ  ಹಾಗೂ 30 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ.

15-10-2020ರಂದು ರಾತ್ರಿ ಪಿಡಬ್ಲೂಡಿ ವಸತಿ ಗೃಹದನಲ್ಲಿದ  ಶಿಕ್ಷಕ ಮನೋಹರ ಸಂಗಪ್ಪ ಪೂಜಾರಿ ಮನೆ ಕಳ್ಳತನ ನಡೆದಿತ್ತು.  ಮನೆಯ ಕಿಟಕಿ ಮುರಿದು ಕಳ್ಳತನ ಮಾಡಲಾಗಿತ್ತು. ಮನೆಯಲ್ಲಿದ 10.01 ತೊಲೆ ಬಂಗಾರ ಹಾಗೂ 37.600 ನಗದು ಹಣ ಒಂದು ಮೊಬೈಲ್‌ ಕಳ್ಳತನಮಾಡಿದ ಕುರಿತು ಹುಮಾನಾಬಾದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತು.  ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್‌ ಅಧಿಕಾರಿಗಳು 22-10-2020 ರಂದು ಪಟ್ಟಣದಲ್ಲಿ  ಕಳ್ಳತನಕ್ಕೆ ಸಂಬಂಧಿಸಿದ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದು, ಶಿಕ್ಷಕನ ಮನೆ ಕಳ್ಳತನ ಮಾಡಿರುವ ಬಗ್ಗೆ ಬಾಯಿ ಬಿಟ್ಟಿದ್ದಾನೆ ಎಂದು ಪೊಲೀಸ್‌ ಮೂಲಗಳು ಮಾಹಿತಿ ನೀಡಿವೆ.

ಆರೋಪಿಯಿಂದ ಬಂಗಾರದ ಆಭರಣಗಳು ಹಾಗೂ ನಗದು ಹಣ ಪೊಲೀಸ್‌ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಎಸ್.ಪಿ ನಾಗೇಶ ಡಿ.ಎಲ್‌, ಡಿವೈಎಸ್‌ಪಿ ಸೋಮಲಿಂಗ ಕುಂಬಾರ ಮಾಗದರ್ಶನದಲ್ಲಿ ಸಿಪಿಐ ಮಲ್ಲಿಕಾರ್ಜುನ ನೇತೃತ್ವದಲ್ಲಿ ತನಿಖೆ ನಡೆಸಿ ಆರೋಪಿ ಬಂಧಿಸಲಾಗಿದೆ. ಪಿಎಸ್‌ಐ ರವಿಕುಮಾರ, ಅಪರಾಧ ವಿಭಾಗದ ಪಿಎಸ್‌ಐ ಕಿರಣಕುಮಾರ, ಸಿಬ್ಬಂದಿಗಳಾ ಭಗವಾನ, ಮಲ್ಲಪ್ಪಾ, ನವೀನ, ನಸೀದ, ಸಿದ್ರಾಮ, ರಮೇಶ, ವಸಂತರಾವ, ದುಂಡಪ್ಪಾ, ಕಾರ್ಯಚರಣೆಯಲ್ಲಿ ಇದ್ದರು ಎಂದು ಡಿವೈಎಸ್‌ಪಿ ಸೋಮಲಿಂಗ ಮಾಹಿತಿ ನೀಡಿದರು.

ದಿನಾಂಕ:22-10-2020

 

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…