Home ನಿಮ್ಮ ಜಿಲ್ಲೆ ಬೀದರ ವೀರಭದ್ರೇಶ್ವರ ದೇವಸ್ಥಾನಕ್ಕೆ ನೂತನ ವ್ಯವಸ್ಥಾಪಕ ಸಮಿತಿ ರಚನೆ.

ವೀರಭದ್ರೇಶ್ವರ ದೇವಸ್ಥಾನಕ್ಕೆ ನೂತನ ವ್ಯವಸ್ಥಾಪಕ ಸಮಿತಿ ರಚನೆ.

ವೀರಭದ್ರೇಶ್ವರ ದೇವಸ್ಥಾನಕ್ಕೆ ನೂತನ ವ್ಯವಸ್ಥಾಪಕ ಸಮಿತಿ ರಚನೆ.

ಹುಮನಾಬಾದ: ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ ವ್ಯವಸ್ಥಾಪಕ ಸಮಿತಿಯ 9 ಜನ ಸದಸ್ಯರ ಸಮಿತಿ ರಚಿಸಿ ರಾಜ್ಯ ಧಾರ್ಮಿಕ ಪರಿಷತ್ತು ಹಾಗೂ ಆಯುಕ್ತರು, ಹಿಂದೂ ಧಾರ್ಮಿಕ `ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳಯ ಸದಸ್ಯ ಕಾರ್ಯದರ್ಶಿಯಾದ ಹೆಚ್.ಬಸವರಾಜೇಂದ್ರ ಆದೇಶ ಹೊರಡಿಸಿದ್ದಾರೆ.

ದೇವಸ್ಥಾನದ ನೂತನ ಸದಸ್ಯರನ್ನಾಗಿ ವೀರಣ್ಣಾ ಪಾಟೀಲ, ಅಭೀಷೇಕ್ ಪಾಟೀಲ, ಮಲ್ಲಿಕಾರ್ಜುನ ಮಾಳಶೆಟ್ಟಿ, ದತ್ತಕುಮಾರ ಚಿದ್ರಿ, ಸೋಮಶೇಖರ ಲಕ್ಷ್ಮಣರಾವ್ ಬುಳ್ಳಾ, ಕಲಾವತಿ ಬಾಬುಸಿಂಗ್,
ಮಹಾದೇವಿ ಬಂಡೆಪ್ಪಾ ಗುಳಶೆಟ್ಟಿ ಹಾಗೂ ದೇವಸ್ಥಾನದ ಪ್ರಧಾನ ಅರ್ಚಕರನ್ನು ಸಮಿತಿ ಸದಸ್ಯರನಾಗಿ ನೇಮಕಮಾಡಿ ಆದೇಶ ಹೊರಡಿಸಿದ್ದಾರೆ.

ದಿನಾಂಕ 05-01-2023ರಂದು ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಪೂರ್ವಭಾವಿ ಸಭೆ ನಡೆಯುವ ಮಧ್ಯದಲ್ಲಿಯೇ ನೂತನ ಸಮಿತಿ ರಚಬೆಯಾಗಿ ನೂತನ ಸದಸ್ಯರ ನೇಮಕಗೊಂಡಿದ್ದು, ಇದೀಗ ಅಧಿಕಾರಿಗಳಿಗೆ ತಲೆ ಬಿಸಿ ಮಾಡಿದಂತೆ ಭಾಸವಾಗುತ್ತದೆ. ಸದ್ಯ ಕ್ಷೇತ್ರದಲ್ಲಿ ಶಿಷ್ಟಾಚಾರ ವಿಷಯ ಕುರಿತು ಭಾರಿ ವಾಗ್ವಾದ ನಡೆದಿತ್ತು.

Date: 04-01-2023 : Time: 03:15pm

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…