Home ಅಂಕಣಗಳು ಮಾತು ತಪ್ಪಿದ ಬಿಜೆಪಿ ಪಕ್ಷದವರು..!

ಮಾತು ತಪ್ಪಿದ ಬಿಜೆಪಿ ಪಕ್ಷದವರು..!

ನಗರದಿಂದ 9ಕಿಮೀ. ದೂರದಲ್ಲಿ ಜಿಲ್ಲಾ ಕಚೇರಿಗಳ ಸಂಕೀರ್ಣ..

ದುರ್ಯೋಧನ ಹೂಗಾರ   (ಕಸ್ತೂರಿ ಕಿರಣ ಪತ್ರಿಕೆಯ ಸುದ್ದಿ ಮುಖ್ಯಸ್ಥರು)

ಬೀದರ: ಜಿಲ್ಲಾ ಕಚೇರಿಗಳ ಸಂಕೀರ್ಣ ನಿರ್ಮಾಣಕ್ಕೆ ಈಗಿರುವ ಜಿಲ್ಲಾಧಿಕಾರಿಗಳ ಕಚೇರಿಯಿಂದ ಸುಮಾರು 9 ಕಿ.ಮಿ. ದೂರದ ರೇಷ್ಮೆ ಇಲಾಖೆಯ ಸುತ್ತಲ್ಲಿನ ಭೂಮಿಯಲ್ಲಿ ನಿರ್ಮಿಸವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ  ಪ್ರಭು ಚವ್ಹಾಣ್ ಹಾಗೂ ಸಂಸದ ಭಗವಂತ ಖೂಬಾ, ಜಿಲ್ಲಾಧಿಕಾರಿ ಎಚ್.ಆರ್ ಮಹಾದೇವ ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿರುವುದು ಜನರಿಗೆ ಅನೇಕ ಅನುಮಾನ ಹುಟ್ಟುವಂತೆ ಮಾಡಿದೆ.

ಹೌದು, ಈ ಹಿಂದಿನ ಸಿದ್ರಾಮಯ್ಯ ಸರ್ಕಾರವು ಈಗಿರುವ ಜಿಲ್ಲಾಧಿಕಾರಿಗಳ ಕಚೇರಿಯಲ್ಲೇ ಜಿಲ್ಲಾ ಕಚೇರಿಗಳ ಸಂಕೀರ್ಣ ನಿರ್ಮಿಸಲು ಶಿಲಾನ್ಯಾಸ ನೆರವೇರಿಸಿದರು. ಇದಕ್ಕೆ 38 ಕೋಟಿ ರೂ. ಅನುದಾನ ಕೂಡ ಮಂಜೂರು ಆಗಿತ್ತು. ಆದರೆ, ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಈಶ್ವರ್ ಖಂಡ್ರೆ ಅವರು ಈಗಿರುವ ಜಿಲ್ಲಾಧಿಕಾರಿಗಳ ಕಚೇರಿ ಸ್ಥಳ ಬದಲಾಗಿ ಮಾಮನಕೇರಿ ಸಮೀಪದ ಸ್ಥಳದಲ್ಲಿ ನಿರ್ಮಿಸವ ನಿಟ್ಟಿನಲ್ಲಿ ಸ್ಥಳ ಗುರುತಿಸದ್ದರು. ಅದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಸಂಸದ ಭಗವಂತ್ ಖೂಬಾ, ಶಾಸಕ ಪ್ರಭು ಚವ್ಹಾಣ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಶಾಸಕರು ಕೂಡ ವಿರೋಧ ವ್ಯಕ್ತಪಡಿಸಿ ಜಿಲ್ಲಾಧಿಕಾರಿಗಳ ಕಚೇರಿ ಸ್ಥಳದಲ್ಲೇ ಹೊಸ ಕಟ್ಟಡ ನಿರ್ಮಿಸ ಬೇಕು ಎಂಬ ಧ್ವನಿ ಎತ್ತಿದರು. ಇದೀಗ ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರದಲ್ಲಿದೆ, ಅಂದು ವಿರೋಧ ವ್ಯಕ್ತಪಡಿಸಿದ ಶಾಸಕ ಇದೀಗ ಜಿಲ್ಲಾ ಮಂತ್ರಿಯಾಗಿದ್ದು, ಯಾವ ಕಾರಣಕ್ಕೆ ನಗರದಿಂದ 9 ಕಿ.ಮೀ ದೂರದಲ್ಲಿ ಜಿಲ್ಲಾ ಕಚೇರಿಗಳ ಸಂಕೀರ್ಣ ನಿರ್ಮಿಸಲು ಮುಂದಾಗಿದ್ದಾರೆ? ಯಾರ ಒತ್ತಡಕ್ಕೆ ರಾಜಕಾರಣಿಗಳು ಹಾಗೂ ಅಧಿಕಾರಿಗಳು  ಒಳಗಾಗಿದ್ದಾರೆ ಎಂದು ಜನರು ಮಾತಾಡಿಕೊಳ್ಳುತ್ತಿದ್ದಾರೆ.

ಅಲ್ಲದೆ, ಅಂದು ದೊಡ್ಡ ಮಟ್ಟದಲ್ಲಿ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಮುಖಂಡರು ಇಂದು ಯಾವ ಕಾರಣಕ್ಕೆ ಸ್ವಪಕ್ಷದ ಮುಖಂಡರ ವಿರುದ್ಧ ಧ್ವನಿ ಎತ್ತುತ್ತಿಲ್ಲ? ಎಂದ ನಗರದ ಜನರು ಪ್ರಶ್ನಿಸುತ್ತಿದ್ದಾರೆ. ವಿರೋಧ ಪಕ್ಷದಲ್ಲಿದ್ದಾಗ ಒಂದು ಮಾತು. ಆಡಳಿತದಲ್ಲಿದ್ದಾಗ ಇನ್ನೊಂದು ಮಾತಾಡುವುದು ಎಷ್ಟು ಸರಿ? ಬಸವಣ್ಣಣ ರ‍್ಮ ಭೂಮಿಯಲ್ಲಿರು ರಾಜಕಾರಣಿಗಳು ನುಡಿದಂತೆ ನಡೆಯುವ ದಾಡಿ ಬೆಳೆಸಿಕೊಳ್ಳಬೇಕು ಎಂದು ಜನರು ರಾಜಕಾರಣಿಗಳಿಗೆ ಸಲಹೆ ನೀಡುತ್ತಿದ್ದಾರೆ.
ಈ ಹಿಂದೆ ಸಂಸದ ಖೂಬಾ ಅಂತೂ ಮಾಮನಕೇರಿ ಸಮೀಪ ಖಂಡ್ರೆ ಕುಟುಂಬಕ್ಕೆ ಸೇರಿದ ಜಾಗ ಇದ್ದು, ಅದಕ್ಕೋಸ್ಕರವೇ ಆ ಜಾಗ ಆಯ್ಕೆ ಮಾಡಿದ್ದಾರೆ. ಇದರ ಹಿಂದೆ ರಿಯಲ್ ಸ್ಟೇಟ್ ಲಾಬಿ ಇದೆ ಎಂದು ಆರೋಪಿಸಿದರು. ಹಾಗಾಗಿ, ಯಾವುದೇ ಕಾರಣಕ್ಕೂ ಮಾಮನಕೇರಿ ಜಾಗ ಬೇಡ. ಜನರಿಗೆ ಅನಾನುಕೂಲವಾಗಲಿದೆ. ಈಗಿರುವ ಜಿಲ್ಲಾಧಿಕಾರಿಗಳ ಕಚೇರಿಯೇ ಸೂಕ್ತ ಎಂದು ಮನವಿ ಪತ್ರ ಸಹ ಅಲ್ಲಿಸಿರುವುದು ಇಲ್ಲಿ ಸ್ಮರಿಸಬೇಕಾಗಿದೆ.
ಆದರೆ, ಈಗ ಖುದ್ದು ಸಂಸದ ಖೂಬಾ ಹಾಗೂ ಸಚಿವ ಚವ್ಹಾಣ್ ಸುಮಾರು 8 ಕೀ.ಮೀಗಿಂತ ದೂರವಿರುವ ರೇಷ್ಮೇ ಇಲಾಖೆ ಜಾಗದಲ್ಲಿ ಕಚೇರಿಗಳ ಸಂಕೀರ್ಣ ನಿರ್ಮಾಣ ಮಾಡಲು ಹೊರಟಿರುವುದು ಶಾಕಿಂಗ್ ನೀಡಿದೆ ಎನ್ನಬಹುದು. ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸದೇ ಏಕಾಏಕಿ ಇಂಥ ದೊಡ್ಡ ನಿರ್ಧಾರ ಹೇಗೆ ತೆಗೆದುಕೊಂಡಿದ್ದೀರಿ ಎಂದು ಸಚಿವ ಚವ್ಹಾಣ್‌ಗೆ ಪ್ರಶ್ನಿಸಿದಾಗ, ಜನರಿಗೆ ಅನುಕೂಲವಾಗಲಿ ಎಂದೇ ಈ ಜಾಗ ಆಯ್ಕೆ ಮಾಡಿದ್ದೇವೆ. ಸಾರ್ವಜನಿಕರ ಅಭಿಪ್ರಾಯವೂ ಆಲಿಸಲಾಗುವುದು ಎಂದು ಹೇಳಿ ನುಣುಚಿಕೊಂಡರು.

____________________________________________

ಅರವಿಂದ ಅರಳಿ ವಿಧಾನ ಪರಿಷತ್ ಸದಸ್ಯರು.

ಈ ಹಿಂದೆ ಜಿಲ್ಲಾ ಕಚೇರಿಗಳ ಸಂಕೀರ್ಣ ನಿರ್ಮಾಣ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕರೆದ ಸಭೆಯಲ್ಲಿ ಖುದ್ದು ಸಂಸದ ಭಗವಂತ ಖೂಬಾ ವಿರೋಧ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸ್ಥಳದಲ್ಲಿಯೇ ಸುತ್ತಲ್ಲಿನ ಭೂಮಿ ಪಡೆದುಕೊಂಡು ಭವ್ಯವಾಗಿ ನರ‍್ಮಿಸಬೇಕು ಎಂದು ಖುದ್ದು ಮನವಿ ಪತ್ರ ಸಲ್ಲಿಸಿದರು. ಆದರೆ, ಇದೀಗ ಯಾವ ಜನಪ್ರತಿನಿಧಿಗಳು, ಸಂಘ, ಸಂಸ್ಥೆಗಳ ಪ್ರತಿನಿಧಿಗಳಿಗೆ ಕೇಳಿ ನಗರದಿಂದ 8 ಕಿ.ಮೀ ದೂರದಲ್ಲಿ ಕಟ್ಟಡ ನರ‍್ಮಾಣಕ್ಕೆ ಮುಂದಾಗಿದ್ದಾರೆ? ಎಷ್ಟು ಜನರ ಅಭಿಪ್ರಾಯಗಳು ಸಂಗ್ರಹಿಸಿದ್ದಾರೆ? ಎಂದು ಪ್ರಶ್ನಿಸಿದ್ದಾರೆ. ಜನರಿಗಾಗಿ ಆಯ್ಕೆಗೊಂಡ ಜನ ಪ್ರತಿನಿಧಿಗಳು ಜನರ ಹಿತಕ್ಕಾಗಿ ಕೆಲಸ ಮಾಡಬೇಕು. ಜಿಲ್ಲಾಧಿಕಾರಿಗಳ ಕಚೇರಿ ಸ್ಥಳದಲ್ಲಿಯೇ ಹೊಸ ಕಟ್ಟಡ ನರ‍್ಮಿಸುವ ಮೂಲಕ ಜನರಿಗೆ ಅನುಕೂಲ ಮಾಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸುವುದು ಅನಿವಾರ್ಯ.

__________________________________________

 

Date: 17-12-2019  Time:6:30PM

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…