ಮಕ್ಕಳಿಗೆ ನೃತ್ಯ ರೂಪಕ ತರಬೇತಿ ನೀಡಿ.
ಹುಮನಾಬಾದ: ಮಕ್ಕಳಿಗೆ ಭಾರತದ ಸಂಸ್ಕೃತಿ ಕುರಿತು ಪಾಲಕರು ತಿಳುವಳಿಕೆ ನೀಡುವ ಮೂಲಕ ನಮ್ಮ ಸಂಸ್ಕೃತಿ ಉಳಿಸಿ ಬೆಳೆಸುವ ಕೆಲಸ ಆಗಬೇಕು ಎಂದು ಕೇಂದ್ರ ಸಂಸ್ಕೃತಿ ಇಲಾಖೆಯ ಸಲಹಾ ತಜ್ಞರಾದ ಡಾ। ಜಿ.ಕೆ ಅಶ್ವಥ ಹರಿತತ್ ಹೇಳಿದರು.
ಪಟ್ಟಣದ ಭಾರತೀಯ ಮಾತಂಗ ಸಾಮಾಜಿಕ ಸಾಂಸ್ಕೃತಿಕ ಅಕಾಡೆಮಿ ಹಾಗೂ ಶ್ರೀ ವಿದ್ಯಾ ಪ್ರತಿಷ್ಠಾನ ಬೆಂಗಳೂರು ಸಂಯುಕ್ತ ಆಶ್ರಯದಲ್ಲಿ ಶ್ರೀ ಕೃಷ್ಣವಂದನ ನೃತ್ಯ ರೂಪಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗಡಿ ಜಿಲ್ಲೆ ಬೀದರನಲ್ಲಿ ಕೂಡ ನೃತ್ಯ ರೂಪಕ ತರಬೇತಿಗಾಗಿ ಸಹಾಯ ಮಾಡಲಾಗುವುದು. ಭಾರತ ಸರ್ಕಾರದಲ್ಲಿ ಸಂಸ್ಕೃತಿಕ ಭಾಗಕ್ಕೆ ವಿವಿಧ ಯೋಜನೆಗಳು ಇವೆ. ಈ ಭಾಗದವರು ಕೂಡ ಸರ್ಕಾರದ ಯೋಜನೆಗಳ ಸಹಾಯ ಪಡೆಯಬೇಕು ಎಂದು ಸಲಹೆ ಮಾಡಿದ ಅವರು, ಹುಮನಾಬಾದ ಅನೀಲ ಕಟ್ಟಿ ಅವರು, ಈ ಭಾಗದಲ್ಲಿ ಕೂಡ ರೂಪಕ ಕಾರ್ಯಕ್ರಮ ನೀಡುವತೆ ತಿಳಿಸಿದ್ದು, ಗ್ರಾಮೀಣ ಭಾಗದಲ್ಲಿ ಕಾರ್ಯಕ್ರಮ ನೀಡಲು ಉತ್ಸಾಹದಿಂದ ಬದಿರುವುದಾಗಿ ತಿಳಿಸಿದರು.
ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಚಪ್ಪ ವಾಲಿ ಉದ್ಘಾಟಿಸಿದರು. ಹಿರಿಯ ವರದಿಗಾರ ಶಶಿಕಾಂತ ಭಗೋಜಿ, ಸಂಜಯ ದಂತಕಾಳೆ, ದುರ್ಯೋಧನ ಹೂಗಾರ, ರಮೇಶ ರಾಜೋಳೆ, ಮಾನಸ ಗಂಗೋತ್ರಿ ಶಾಲೆಯ ಅಧ್ಯಕ್ಷ ಅನಿಲ ಕಟ್ಟಿ ಕಾರ್ಯದರ್ಶಿ ವೆಂಕಟೇಶ್ ಸೇರಿದಂತೆ ಅನೇಕರು ಇದ್ದರು.
Date: 15-12-2019 Time: 8:30
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…


















