Home ನಿಮ್ಮ ಜಿಲ್ಲೆ ಬೀದರ ಬೇರೆಕಡೆಗಳಿಂದ ಬಂದಿಲ್ಲ ಮಿಡತೆಗಳು – ಕೃಷಿ ಅಧಿಕಾರಿ ಮಾಹಿತಿ

ಬೇರೆಕಡೆಗಳಿಂದ ಬಂದಿಲ್ಲ ಮಿಡತೆಗಳು – ಕೃಷಿ ಅಧಿಕಾರಿ ಮಾಹಿತಿ

ಬೇರೆಕಡೆಗಳಿಂದ ಬಂದಿಲ್ಲ ಮಿಡತೆಗಳು – ಕೃಷಿ ಅಧಿಕಾರಿ ಮಾಹಿತಿ

ಬೀದರ: ಕಳೆದ ರಾತ್ರಿ ಚಿಟಗುಪ್ಪ ಪಟ್ಟಣದಲ್ಲಿ ಕಂಡುಬಂದಿರುವ ಮಿಡತೆಗಳು ಸ್ಥಳಯ ಮಿಡತೆಗಳಾಗಿದ್ದು, ಬೇರೆ ರಾಜ್ಯಗಳಿಂದ ಮಿಡತೆಗಳ ಹಿಂಡು ಚಿಟಗುಪ್ಪ ವ್ಯಾಪ್ತಿಗೆ ಬಂದಿಲ್ಲ ಎಂದು ಹುಮನಾಬಾದ ಕೃಷಿ ಇಲಾಖೆಯ ಸಹಾಯಕ ಕೃಷಿ ಅಧಿಕಾರಿ ಡಾ| ಮಲ್ಲಿಕಾರ್ಜುನ ಮೇತ್ರೆ ಮಾಹಿತಿ ಸ್ಪಷ್ಟಪಡಿಸಿದ್ದಾರೆ.

ಮಳೆಯ ಪ್ರಮಾಣ ಹಾಗೂ ವಾತಾವಣದ ಬದಲಾವಣೆಗೆ ಈ ತರಹದ ಕೀಟಗಳು ಬೆಳಕಿನ ಕಡೆಗೆ ಹಾಗೂ ಹೂವಿನ ಗಿಡಗಳ ಕಡೆಗೆ ಹೆಚ್ಚಿನ ಆರ್ಕಷಣೆಯಾಗಿ ಬರುತ್ತವೆ. ಚಿಟಗುಪ್ಪ ಕಡೆಗಳಲ್ಲಿ ಕಂಡು ಬಂದಿರುವುದು ಅತಿ ಚಿಕ್ಕ ಪ್ರಮಾಣದ ಕೀಟಗಳು ಎಂಬುವುದು ತಿಳಿದು ಬಂದಿದ್ದು, ಈಗಾಗಲೇ ಮೂರು ಅಧಿಕಾರಿಗಳ ತಂಡ ರಚಿಸಿ, ಚಿಟಗುಪ್ಪ ತಾಲೂಕಿನ ವಿವಿಧಡೆ ಮಿಡತೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲ್ಲಿದ್ದಾರೆ ಎಂದು ತಿಳಿಸಿದ್ದಾರೆ.

Download KK NEWS MOBILE APP https://play.google.com/store/apps/details?id=kknewsonline.in

ಆತಂಕ ಬೇಡ: ಕೀಟಗಳಿಂದ ರೈತರು ಹಾಗೂ ನಿವಾಸಿಗಳು ಆತಂಕ ಪಡುವ ಅಗತ್ಯ ಇಲ್ಲ. ರೈತರ ಹೊಲಗಳಲ್ಲಿ ಈ ಕೀಟಗಳು ಕಂಡುಬಂದಲ್ಲಿ ರೈತರ ತಟ್ಟೆಗಳು ಬಾರಿಸುವ ಮೂಲಕ ಅಥವ ಹೊಲದಲ್ಲಿ ಹೋಗೆ ಹಾಕುವ ಮೂಲಕ ಇವುಗಳನ್ನು ಓಡಿಸಬಹುದಾಗಿದೆ. ಒಂದು ಬಾರಿ ಇಲ್ಲಿಂದ ಹೊರಟರೆ ಸುಮಾರು 15 ಕಿ.ಮೀ ವರೆಗೆ ಅವುಗಳು ನಿಲ್ಲುವುದಿಲ್ಲ. ಹೆಚ್ಚಿನ ಪ್ರಮಾಣದಲ್ಲಿ ಇದ್ದಲ್ಲಿ ಕೂಡಲೇ ಕೃಷಿ ಇಲಾಖೆಗೆ ಭೇಟಿಮಾಡಿದರೆ ಸೂಕ್ತ ಸಲಹೆ ಸೂಚನೆಗಳು ನೀಡಲಾಗುತ್ತದೆ. ಔಷಧಿ ಸಿಂಪಡಿಸಲು ಕೂಡ ಸಹಕಾರ ನೀಡಲಾಗುವುದು ಎಂದು ಕೃಷಿ ಅಧಿಕಾರಿ ಮಾಹಿತಿ ನೀಡಿದ್ದಾರೆ.

Date: 03-09-2020   www.kknewsonline.in

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…