ಬೆಳಗಾವಿ ಪರೀಕ್ಷೆ ಮುಗಿದ ಮೂರು ಗಂಟೆಯಲ್ಲಿ ರಿಜಲ್ಟ್..!!
ವಿಶ್ವೇಶ್ವರಯ್ಯ ವಿವಿಯ ಸಾಧನೆ
ಪರೀಕ್ಷೆ ಮುಗಿದ ಮೂರು ಗಂಟೆಯಲ್ಲಿ ಫಲಿತಾಂಶ ಪ್ರಕಟಿಸಿ ದಾಖಲೆ ಮಾಡಿದ ವಿಟಿಯೂ
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು 25 ವರ್ಷಗಳ ಇತಿಹಾಸದಲ್ಲಿಯೇ ಪರೀಕ್ಷಾ ಫಲಿತಾಂಶ ಪ್ರಕಟಣೆಯಲ್ಲಿ ಹೊಸ ದಾಖಲೆಯನ್ನು ಮಾಡಿದೆ. ವಿವಿಧ ಕೋರ್ಸ್ಗಳ ಪರೀಕ್ಷೆ ಮುಗಿಸಿದ ಮೂರೇ ಗಂಟೆಯಲ್ಲಿ ಫಲಿತಾಂಶ ಪ್ರಕಟಿಸಿ, ವಿಶಿಷ್ಟ ದಾಖಲೆ ಮಾಡಿದೆ.
ಗುರುವಾರ ಅಂತಿಮ ವರ್ಷದ ಬಿಇ, ಬಿ.ಟೆಕ್., ಬಿ.ಆರ್ಕ್, ಬಿ.ಪ್ಲಾನ್ ಅಂತಿಮ ಸೆಮಿಸ್ಟರ್ ಪರೀಕ್ಷೆ ನಡೆದವು. ಒಟ್ಟು 42,323 ವಿದ್ಯಾರ್ಥಿಗಳು ಹಾಜರಾಗಿ, ಸಂಜೆ 5.30ಕ್ಕೆ ಪರೀಕ್ಷೆ ಮುಗಿದವು.
ರಾತ್ರಿ 8.30ಕ್ಕೆ ಎಲ್ಲ ಫಲಿತಾಂಶ ಪ್ರಕಟಿಸುವುದರ ಜೊತೆಗೆ ಎಲ್ಲ ವಿದ್ಯಾರ್ಥಿಗಳ ವಾಟ್ಸ್ ಆ್ಯಪ್ ಸಂಖ್ಯೆಗೆ ಫಲಿತಾಂಶ ರವಾನಿಸಲಾಗಿದೆ.
‘ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯದ 25 ವರ್ಷಗಳ ಇತಿಹಾಸದಲ್ಲೇ ಇದು ದಾಖಲೆಯ ದಿನ. ಇಂಥ ಪ್ರಯೋಗ ಹಿಂದೆ ಎಲ್ಲಿಯೂ ಆಗಿಲ್ಲ. ಪರೀಕ್ಷೆ ಮುಗಿದ ದಿನವೇ ಎಲ್ಲ 42,323 ವಿದ್ಯಾರ್ಥಿಗಳ ಫಲಿತಾಂಶವನ್ನೂ ನೀಡಿದ್ದೇವೆ’ ಎಂದು ವಿಟಿಯು ಕುಲಪತಿ ಪ್ರೊ. ಎಸ್.ವಿದ್ಯಾಶಂಕರ ತಿಳಿಸಿದ್ದಾರೆ.
ಕಲಬುರಗಿ: ವಿದ್ಯುತ್ ಅವಘಡಗಳಿಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳಿ
*ಮುನ್ನೆಚ್ಚರಿಕೆ ವಹಿಸಿ; ವಿದ್ಯುತ್ ಅವಘಡ ತಪ್ಪಿಸಿ* *ಮಳೆಗಾಲ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಸುರಕ್ಷತಾ …

















