Home ನಿಮ್ಮ ಜಿಲ್ಲೆ ಬೀದರ ಬೀದರ್ ಉತ್ಸವದ ಆರಂಭಕ್ಕೆ ಹರಿದು ಬಂದ ಜನಸಾಗರ

ಬೀದರ್ ಉತ್ಸವದ ಆರಂಭಕ್ಕೆ ಹರಿದು ಬಂದ ಜನಸಾಗರ

ದಶಕದ ನಂತರ ಬೀದರ್ ಉತ್ಸವಕ್ಕೆ ಚಾಲನೆ

ಬೀದರ್ ಉತ್ಸವ ದಶಕದ ನಂತರ ಕೋಟೆ ನಗರಿ ಬೀದರ್ ನಲ್ಲಿ ಉತ್ಸವದ ಹಬ್ಬ ಮನೆ ಮಾಡಿತ್ತು.ಕಳೆದೊಮದು ದಶಕದಿಂದ ಉತ್ಸವವಿಲ್ಲದ ಸೊರಗಿದ ಕೋಟೆಗೆ ಇಂದು ಸಿಡಿಮದ್ದುಗಳ ಸ್ಪೋಟ ಬಾನಂಗಳದಲ್ಲಿ ಚಿತ್ತಾರವನ್ನ ಮೂಡಿಸಿದ್ದವು.ವೇದಿಕೆಯಲ್ಲಿ ಜನಪ್ರತಿನಿಧಿಗಳು, ಕಲಾವಿರ ಹಾಡು,ನೃತ್ಯ ಎಲ್ಲವು ನೋಡುಗರ ಕಣ್ಮನ ಸೆಳೆಯಿತು.ತಡ ರಾತ್ರಿವರೆಗೆ ನಡೆದ ಬೀದರ್ ಉತ್ಸವ ಕೋಟೆ ನಗರಿ ಬೀದರ್ ನಲ್ಲಿ ಸಂಭ್ರಮದಲ್ಲಿ ಜನ ಸಾಗರ ತೇಲುವಂತೆ ಮಾಡಿದ್ದು ವಿಶೇಷ…

ಇನ್ಬೀನು ಆರಂಭದಲ್ಲಿ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದ ಕೇಂದ್ರ ಸಚಿವ ಭಗವಂತ ಖೂಭಾ ಬೀದರ್  ಉತ್ಸವ ರಾಜ್ಯಕ್ಕೆ ಮಾದರಿ ಉತ್ಸವವಾಗಬೇಕು. ಕಲಾವಿದರು ರಾಜ್ಯದ ಜನತೆ ಬೀದರ್ ಉತ್ಸವವನ್ನೆ ಎಲ್ಲೆ ಹೋದ್ರು ಉದಾಹರಣೆಯಾಗಿ ನೀಡುವಂತೆ ಆಗಬೇಕು’ ಎಂದು ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು.ಬೀದರ್  ಕೋಟೆ ಆವರಣದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿರುವ ಬೀದರ್ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಈ ಸಲ ಬೀದರ್ ಉತ್ಸವದ ಮೆರಗು ಮತ್ತೆ ಮೂಡಿದ್ದು ಕೋಟೆ ನಗರಿ ಕಳೆ ಕಟ್ಟಿದೆ.

‘2005ರಿಂದ  ಬೀದರ್‌ ಉತ್ಸವ ಆರಂಭವಾಗಿದೆ. ಕಾರಣಾಂತರಗಳಿಂದ ದಶಕದ ವರೆಗೆ ಮತ್ತೆ  ಉತ್ಸವ ನಡೆದಿರಲಿಲ್ಲ. ಜನರ ಬೇಡಿಕೆ ಹಾಗೂ ಜನಪ್ರತಿನಿಧಿಗಳ ಒಮ್ಮತದ ಅಭಿಪ್ರಾಯದ ಮೇರೆಗೆ ಈ ವರ್ಷ ಮತ್ತೆ ಉತ್ಸವ ಆರಂಭವಾಗಿದೆ.ಬೀದರ್ ಜಿಲ್ಲಾಧಿಕಾರಿ ಗೋವಿಂದರೆಡ್ಡಿಯವರು ಅತ್ಯಂತ ಕಡಿಮೆ ಅವಧಿಯಲ್ಲಿ ಉತ್ಸವದ ತಯಾರಿಯನ್ನ ಮಾಡಿದ್ದು ಎಲ್ಲರ ಮೆಚ್ಚುಗೆ ಪಾತ್ರವಾಗಿದೆ. ಜಿಲ್ಲಾಡಳಿತದ ಅಧಿಕಾರಿಗಳು  ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಕಷ್ಟಪಟ್ಟು ಸಿದ್ಧತೆ ಮಾಡಿದ್ದು ನಿಜಕ್ಕು ಹೆಮ್ಮೆಯ ವಿಷಯ.

ಪಶು ಸಂಗೋ‍‍ಪನೆ ಸಚಿವ ಪ್ರಭು ಚವಾಣ್ ತಮ್ಮ ಎಂದಿನ ಶೈಲಿಯಲ್ಲಿ ಮಾತನಾಡಿ ಅಚ್ಚುಕಟಟ್ಆಗಿ ಮಾತನಾಡಿ ನರ ಮನಸೂರೆಗೊಂಡರು.ಎಲ್ಲರು ಇದರಲ್ಲಿ ಹೆಮ್ಮೆಯಿಂದ ಪಾಲ್ಗೋಳ್ಳುವಂತೆ ಅವರು ಕರೆ ನೀಡಿದ್ದರು.

ಕಾರ್ಯಕ್ರಮದಲ್ಲಿ ಶಾಸಕ  ರಹೀಂ ಖಾನ್, ಬುಡಾ ಅಧ್ಯಕ್ಷ ಬಾಬು ವಾಲಿ ಮಾತನಾಡಿದರು. ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ, ರಾಜ್ಯ ಹಜ್‌ ಸಮಿತಿ ಅಧ್ಯಕ್ಷ ರೌಫೋದ್ದಿನ್‌ ಕಚೇರಿವಾಲೆ, ವಿಧಾನ ಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪುರೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಕಿಶೋರ ಬಾಬು, ಬಿಜೆಪಿ ಮುಖಂಡರಾದ ಸೂರ್ಯಕಾಂತ ನಾಗಮಾರಪಳ್ಳಿ. ಗುರುನಾಥ ಕೊಳ್ಳೂರ, ವಿವಿಧ ಸಂಘ– ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ  ಕಾರ್ಯಕ್ರಮದ ಆರಂಭಕ್ಕೆ ಸ್ವಾಗತಿಸಿದರು. ಅನುಪಮ ಭಟ್‌ ನಿರೂಪಣೆ ಗಮನ ಸೆಳೆಯಿತು. ಜಿಲ್ಲಾ ಪಂಚಾಯಿತಿ ಸಿಇಒ ಶಿಲ್ಪಾ ಎಂ. ವಂದಿಸಿದರು.

ಉತ್ಸವಕ್ಕೆ ಇಂದು ಮೆರಗು ತರುವವರು:

ಗಾಯಕ ಕುಮಾರ ಸಾನು, ಗಾಯಕಿ ಮಂಗ್ಲಿ, ಅನುರಾಧಾ ಭಟ್ ಹಾಗೂ ವೀರ ಸಮರ್ಥ ಅವರು ಜ.9ರ ಎರಡನೆ ದಿನದ  ಬೀದರ್ ಉತ್ಸವದ ಬೀದರ್‌  ಮುಖ್ಯ ಆಕರ್ಷಣೆ ಆಗಲಿದ್ದಾರೆ.

ಕಾರ್ಯಕ್ರಮ ಆರಂಭ ಸಂಜೆ ಐದು ಗಂಟೆಗೆ ನಡೆಯಲಿದೆ. ಜಿಲ್ಲಾ ಮಟ್ಟದ ಕಲಾವಿದರು, ನಂತರ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕಲಾವಿದರು ಕಾರ್ಯಕ್ರಮ ನೀಡಲಿದ್ದಾರೆ. ಸಂಜೆ 5.30ಕ್ಕೆ ಕಥಾ ಕೀರ್ತನ, 5.40ಕ್ಕೆ ಸುಗಮ ಸಂಗೀತ, 5.50ಕ್ಕೆ ಜಾನಪದ ಗಾಯನ, 6ಕ್ಕೆ ಹಾರ್ಮೋನಿಯಂ ಸೋಲೊ, 6.10ಕ್ಕೆ ಭರತನಾಟ್ಯ, 6.20ಕ್ಕೆ ವಿಶಿಷ್ಟ ಸಮೂಹ ನೃತ್ಯ, 6.30ಕ್ಕೆ ಹಾಸ್ಯ, 6.40ಕ್ಕೆ ಸುಗಮ ಸಂಗೀತ, 7ಕ್ಕೆ ಜಾನಪದ ಗಾಯನ, ರಾಷ್ಟ್ರ ಮಟ್ಟದ ಜಾನಪದ ಕಲಾ ತಂಡಗಳಿಂದ ಕಲಾ ಪ್ರದರ್ಶನ ನಡೆಯಲಿದೆ.7.30ಕ್ಕೆ ಪಂಜಾಬಿ ಭಾಂಗಡಾ ಡಾನ್ಸ್, 7.45ಕ್ಕೆ ಲಾವಣಿ ನೃತ್ಯ ನಡೆಯಲಿದೆ.

ರಾತ್ರಿ 8ಕ್ಕೆ ಖ್ಯಾತ ಗಾಯಕಿ ಮಂಗ್ಲಿ, ಅನುರಾಧಾ ಭಟ್ ಹಾಗೂ ವೀರ ಸಮರ್ಥ ತಂಡದಿಂದ ಸಂಗೀತ ಸಂಜೆ ಹಾಗೂ ರಾತ್ರಿ 10.30ಕ್ಕೆ ಗಾಯಕ ಕುಮಾರ ಸಾನು ಅವರಿಂದ ಸುಮಧೂರ  ಹಿಂದಿ ಚಿತ್ರಗೀತೆಗಳ ಹಾಡಿನ ಸೂರಿಮಳೆ ಸೂರಿಯಲಿದೆ.

ಬೀದರರ ಉತ್ಸವದ ರೂವಾರಿಗಳು:

ಬೀದರ್ ಉತ್ಸವಕ್ಕೆ ಆರಂಭದಲ್ಲಿ ಅಪಸ್ವರ ಕೇಳಿ ಬಂದರು ನಂತರ ಎಲ್ಲರು ಅದಕ್ಕೆ ಕೈ ಜೋಡಿಸಿದ್ದರ್ರು.ವಿಶೇಷವಾಗಿ ಬೀದರ್ ಜಿಲ್ಲಾಧಿಕಾರಿ ಗೋವಿಂಧರಡ್ಡಿ ಕೇಂದ್ರ ಸಚಿವ ಭಗವಂತ ಖೂಭಾ ಮತ್ತು ಜಿಲ್ಲೆಯ ಇನ್ನೀತರ ಜನಪ್ರತಿನಿಧಿಗಳು ಬೀದರ್ ಉತ್ಸವಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಾಗ ಅತ್ಯಂತ ಕಡಿಮೆ ಸಮಯದಲ್ಲಿ ಜಿಲ್ಲೆಯ ಅಧಿಕಾರಿಗಳಿಗೆ ಬೀದರ್ ಉತ್ಸವಕ್ಕೆ ಅಣಿಯಾಗಲು ಸೂಚಿಸಿದ್ದರು.ಅತ್ಯಂತ ಕಡಿಮೆ ಅವಧಿಯಲ್ಲಿ ಬೀದರ್ ಉತ್ಸವಕ್ಕೆ ಸಿದ್ದತೆ ಮಾಡಿದ್ದು ಅದು ದಶಕದ ನಂತರ ಸಾಮಾನ್ಯ ಕೆಲ್ಸ್ವಂತು ಅಲ್ಲ.ಇಡಿ ಜಿಲ್ಲಾಡಳಿತದ ಸಿಬ್ಬಂಧಿಗಳ ತಂಡವನ್ನ ಕಟ್ಟಿಕೊಂಡು ಬೀದರ್ ಉತ್ಸವಕ್ಕೆ ಬೇಕಾದ ಸಂಪನ್ಮೂಲವನ್ನ ಕೃಡಿಕರಿಸಿ ಉತ್ಸವ ಮಾಡುವ ಜವಾಬ್ದಾರಿ ಹೊತ್ತಿದ್ದು ಸಣ್ಣ ಕೆಲ್ಸವಲ್ಲ. ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಕೇಂದ್ರ ಸಚಿವ ಭಗವಂತ ಖುಭಾ,ಶಾಸಕರಾದ ರಹಿಮ್ ಖಾನ್,ಶರಣು ಸಲಗರ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು ಜೊತೆಗೆ ಉತ್ಸವಕ್ಕೆ ಮೆರಗು ತರಲು  ಅದರ ಜೊತೆಗೆ ಆಯೋಜನೆ ಮಾಡಿರುವ ಹಲವಾರು ಉತ್ಸವಗಳು ಬೀದರ್ ಉತ್ಸವಕ್ಕೆ ಮೆರಗು ಕೊಟ್ಟಿದ್ದು ಸುಳ್ಳಲ್ಲ.

 

 

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…