ಬೀದರ-ಮೂರುಜನ ಕೊರೊನಾ ಶಂಕೆ?
ಬೀದರ: ಬೀದರ್ ಬ್ರಿಮ್ಸ್ ಆಸ್ಪತ್ರೆಯಲ್ಲಿ ಮೂರು ಜನರಲ್ಲಿ ಕೊರೊನಾ ವೈರಸ ಇರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಮೂರು ಜನರ ರಕ್ತದ ಮಾದರಿಯನ್ನು ಮಹಾರಾಷ್ಟ್ರದ ಪುಣೆಗೆ ಕಳುಹಿಸಲಾಗಿದೆ.
ಔರಾದ ತಾಲೂಕಿನ ಹನುಮಂತ ( 30) ಎಂಬ ವ್ಯಕ್ತಿ ನಾರ್ವೆ ದೇಶದಲ್ಲಿ ಕಳೆದ 8 ವರ್ಷಗಳಿಂದ ಸಾಫ್ಟ್ ವೇರ್ ಇಂಜಿನಿಯರ್ ಕೆಲಸ ಮಾಡಿಕೊಂಡಿದ್ದು, ಕಳೆದ ಸುಮಾರು 25 ದಿವಸಗಳ ಹಿಂದೆ ನಾರ್ವೆ ದೇಶ ದಿಂದ ತಮ್ಮ ಔರಾದ ಪಟ್ಟಣಕ್ಕೆ ಬಂದಿದ್ದು, ಇನ್ನು 4-5 ದಿವಸಗಳಲ್ಲಿ ನಾರ್ವೆ ದೇಶಕ್ಕೆ ಹೋಗುವಲಿರುವ ಇವರು ಕೊರಾನಾ ವೈರಸ್ ವಿದೇಶದಲ್ಲಿನ ಜನರಿಗೆ ಬರುತ್ತಿದೆ ಎಂದು ಸುದ್ದಿ ತಿಳಿದ ವ್ಯಕ್ತಿ ಸುಮ್ಮನೆ ಪರೀಕ್ಷೆ ಮಾಡಿಕೊಳ್ಳೋಣ ಎಂದು ಮಧ್ಯಾಹ್ನ ಬೀದರ ಸರ್ಕಾರಿ ಆಸ್ಪತ್ರೆಗೆ ಪರೀಕ್ಷೆ ಕುರಿತು ಬಂದಿದ್ದು, ಇವರನ್ನು ವೈದ್ಯರು ಕೊರಾನಾ ವೈರಸ್ ಬಗ್ಗೆ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ವೈದ್ಯರು ಇವರನ್ನು ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಂಡು ವ್ಯಕ್ತಿಯ ರಕ್ತ ಸ್ಯಾಂಪಲ್ ನ್ನು ತೆಗೆದುಕೊಂಡು ಪರೀಕ್ಷೆ ಕುರಿತು ಪೂನಾ ಕ್ಕೆ ಕಳಿಹಿಸಿದ್ದಾರೆ.
ಪಾತ್ತರಪಳ್ಳಿ ಗ್ರಾಮದ ಶಿವಕುಮಾರ (44 ವರ್ಷ) ಹಾಗೂ ಅವರ ಮಗನಾದ ಮಹಾವೀರ ಶಿವಕುಮಾರ ( 14 ವರ್ಷ) ಇವರಲ್ಲಿ ಕೂಡ ಕೊರೊನಾ ವೈರಸ್ ಕುರಿತು ವೈದ್ಯರು ಶಂಕೆ ವ್ಯಕ್ತಪಡಿಸಿದ್ದಾರೆ.
ಶಿವಕುಮಾರ ದಿನಾಂಕ 21-02-2020 ರಂದು ಕತಾರ ದೇಶ ದಿಂದ ಚಟ್ನಳ್ಳಿ ಗ್ರಾಮಕ್ಕೆ ಬಂದಿರುತ್ತಾರೆ.ಇವರು ಕತಾರ ದೇಶದಲ್ಲಿ ಸ್ಪ್ರೇ ಪೇಂಟರ್ ಅಂತ ಕೆಲಸ ಮಾಡಿದ್ದು, ಅವರ ಮಗನಾದ ಮಹಾವೀರನಿಗೆ ಕೆಮ್ಮು-ಶೀತ ಇದೆ ಎಂದು ಮಧ್ಯಾಹ್ನ ಬೀದರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ಕುರಿತು ಬಂದಾಗ ವೈದ್ಯರು ಕೊರಾನಾ ವೈರಸ್ ಹರಡಿರುವ ಬಗ್ಗೆ ಲಕ್ಷಣಗಳು ಇವೆ ಅಂತ ವೈದ್ಯರು ತಂದೆ-ಮಗ ಇಬ್ಬರ ರಕ್ತವನ್ನು ಸ್ಯಾಂಪಲ್ ಕುರಿತು ತೆಗೆದುಕೊಂಡು ಪೂನಾ ಕ್ಕೆ ಕಳಿಹಿಸಿದ್ದಾರೆ.
ಪೂನಾದಿಂದ ಇವರ ರಕ್ತದ ಸ್ಯಾಂಪಲ್ ವರದಿ ಬಂದ ಮೇಲೆ ಕೊರಾನಾ ವೈರಸ್ ಇದೆಯೇ ಅಥವಾ ಇಲ್ಲ ಎಂಬುವುದು ಗೊತ್ತಾಗಲ್ಲಿದೆ.
Date: 4-03-2020


















