Home ನಿಮ್ಮ ಜಿಲ್ಲೆ ಬೀದರ ಬೀದರ ಬ್ರಿಮ್ಸ್ ಅವ್ಯವಸ್ಥೆಗೆ ಶೀಘ್ರ ಲಗಾಮು:

ಬೀದರ ಬ್ರಿಮ್ಸ್ ಅವ್ಯವಸ್ಥೆಗೆ ಶೀಘ್ರ ಲಗಾಮು:

ಬೀದರ ಬ್ರಿಮ್ಸ್ ಅವ್ಯವಸ್ಥೆಗೆ ಶೀಘ್ರ ಲಗಾಮು: ಸಚಿವರಾದ ಡಾ.ಕೆ.ಸುಧಾಕರ

ಬೀದರ : ಬೆಂಗಳೂರಿನಲ್ಲಿ ಉನ್ನತಮಟ್ಟದ ಅಧಿಕಾರಿಗಳ ಸಭೆಗೆ ವ್ಯವಸ್ಥೆ ಮಾಡಿಸಿ, ಬೀದರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬ್ರಿಮ್ಸ)ಯ ಸುಧಾರಣೆಯ ಬಗ್ಗೆ ಸಮಗ್ರ ಚರ್ಚಿಸಿ, ಇಲ್ಲಿನ ಅವ್ಯವಸ್ಥೆಗೆ ಲಗಾಮು ಹಾಕುವುದಾಗಿ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ.ಸುಧಾಕರ ಅವರು ಹೇಳಿದರು.

ಜೂನ್ 14ರಂದು ಬ್ರಿಮ್ಸ್ ಬೋಧಕ ಆಸ್ಪತ್ರೆಯ ಸಭಾಂಗಣದಲ್ಲಿ ಜನಪ್ರತಿನಿಧಿಗಳು ಮತ್ತು ವೈದ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿ, ಆಸ್ಪತ್ರೆಯ ಬಗ್ಗೆ ಸಮಗ್ರ ಮಾಹಿತಿ ಪಡೆದು ಅವರು ಮಾತನಾಡಿದರು.
ನಮಗೆ ಸಾಕಾಗಿ ಹೋಗಿದೆ ಈ ಆಸ್ಪತ್ರೆಯ ಅವ್ಯವಸ್ಥೆ ನೋಡಿ ನೋಡಿ ಎಂದು ಸಭೆಯಲ್ಲಿದ್ದ ಎಲ್ಲ ಶಾಸಕರು ಇದೆ ವೇಳೆಯಲ್ಲಿ ತಮ್ಮ ಅಸಮಾಧಾನವನ್ನು ಹೊರ ಹಾಕಿದರು. ಬ್ರಿಮ್ಸನ್ನು ಸರಿದಾರಿಗೆ ತರಲು ತಾವು ಈ ವಿಷಯವನ್ನು ಸವಾಲಾಗಿ ಸ್ವೀಕರಿಸುವುದಾಗಿ ಸಚಿವರು ತಿಳಿಸಿದಾಗ, ಸಭೆಯಲ್ಲಿದ್ದ ಎಲ್ಲರೂ ಚಪ್ಪಾಳೆ ತಟ್ಟಿದರು.
ಬ್ರಿಮ್ಸನಲ್ಲಿ 71 ಗ್ರೂಪ್ ಎ, 1 ಗ್ರೂಪ್ ಬಿ, 135 ಗ್ರೂಪ್ ಸಿ, 82 ಗ್ರೂಪ್ ಡಿ ಸೇರಿ 289 ಹುದ್ದೆಗಳು ಹಾಗೂ ಬ್ರಿಮ್ಸ್ ಬೋಧಕ ಆಸ್ಪತ್ರೆಯಲ್ಲಿ ಗ್ರೂಪ್ ಎ 12, ಗ್ರೂಪ್ ಬಿ 2, ಗ್ರೂಪ್ ಸಿ 71 ಮತ್ತು ಗ್ರೂಪ್ ಡಿ 15 ಸೇರಿ 100 ಹುದ್ದೆಗಳು ಸೇರಿ ಒಟ್ಟು 389 ಹುದ್ದೆಗಳು ಭರ್ತಿಯಾಗುವುದು ಬಾಕಿ ಇದೆ ಎಂದು ಬ್ರಿಮ್ಸ ನಿರ್ದೇಶಕರು ಪ್ರಾತ್ಯಕ್ಷಿಕೆ ಮೂಲಕ ಸಭೆಗೆ ಮಾಹಿತಿ ನೀಡಿದರು.

ಪ್ರೊಪೆಸರ್ ನೇಮಕಾತಿಗೆ ಕ್ರಮ
ಬ್ರಿಮ್ಸನಲ್ಲಿ ಇದುವರೆಗೆ ಖಾಲಿ ಇರುವ 5 ಪ್ರೊಪೆಸರ್, 3 ಅಸೋಸಿಯೇಟ್ ಪ್ರೊಪೆಸರ್ ಮತ್ತು 8 ಅಸಿಸ್ಟಂಟ್ ಪ್ರೊಪೇಸರ್ ಗಳ ಹುದ್ದೆಗಳ ನೇಮಕಾತಿ ನಡೆಯುವ ಪ್ರಕ್ರಿಯೆ ಶೀಘ್ರ ಆರಂಭವಾಗಬೇಕು ಎಂದು ಸಚಿವರು ಇದೆ ವೇಳೆ ನಿರ್ದೇಶನ ನೀಡಿದರು.
ತೀವ್ರ ಅಸಮಾಧಾನ 13 ವರ್ಷದ ಈ ಕಾಲೇಜಿಗೆ ಇದುವರೆಗೆ ಆಡಾಳಿತಾಧಿಕಾರಿ ಇಲ್ಲವೆಂದರೆ ಹೇಗೆ? ಒಟ್ಟು ಮಂಜೂರಾದ 1085 ಹುದ್ದೆಗಳ ಪೈಕಿ ಇದುವರೆಗೆ 389 ಹುದ್ದೆಗಳು ಭರ್ತಿಯೇ ಆಗಿಲ್ಲ ಅಂದರೆ ಹೇಗೆ? ಎಂದು ಪ್ರಶ್ನಿಸಿದ ಸಚಿವರು, ಈ ಆಸ್ಪತ್ರೆಯಿಂದ ಜನರಿಗೆ ಅನುಕೂಲವಾಗುತ್ತಿಲ್ಲ ಎಂದರೆ ನೂರಾರು ಕೋಟಿ ಹಣ ವ್ಯಯಿಸಿ ನಿರ್ಮಿಸಿದ ಆಸ್ಪತ್ರೆಯು ಯಾವ ಪುರುಷಾರ್ಥಕ್ಕೆ ಇರಬೇಕು ಎಂದು ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಸಂ

ಸದರಿಂದಲೂ ಅಸಾಮಾಧಾನ

ಇದೆ ವೇಳೆ ಸಂಸದರಾದ ಭಗವಂತ ಖೂಬಾ ಅವರು ಮಾತನಾಡಿ, ಹಲವಾರು ಭಾರಿ ಆಸ್ಪತ್ರೆಗೆ ಭೇಟಿ ನೀಡಿ, ಸಭೆ ನಡೆಸಿ ತಿಳಿಸಿದ್ದರೂ ಇದುವರೆಗೆ ಸುಧಾರಣೆಯಾಗುತ್ತಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿ ಅಸಮಾಧಾನ ತೋರಿದರು.
*ಶಾಸಕರಿಂದಲೂ ಅಸಮಾಧಾನ:* ಆಸ್ಪತ್ರೆಗೆ ನೂರಾರು ಕೋಟಿ ರೂ ಖರ್ಚು ಮಾಡಿದ್ದರೂ ಜನತೆಗೆ ಇಲ್ಲಿ ಸರಿಯಾಗಿ ಚಿಕಿತ್ಸೆ ಸಿಗದೇ ಸೊಲ್ಲಾಪುರ, ಹೈದ್ರಾಬಾದ್ ಹೋಗುವಂತಾಗಿದೆ ಎಂದು ಶಾಸಕರಾದ ರಹೀಂ ಖಾನ್ ತಿಳಿಸಿದರು. ಬಹಳಷ್ಟು ವರ್ಷಗಳಿಂದ ಇಲ್ಲಿವರೆಗೆ ಬ್ರಿಮ್ಸ್ ಸುಧಾರಣೆ ವಿಷಯವು ಹತ್ತಾರು ವರ್ಷಗಳ ಕಾಲ ಮೀಟಿಂಗ್ ಗೆ ಮಾತ್ರ ಸೀಮಿತ ಆಗುತ್ತಿದೆ. ಸುಧಾರಣೆಯಾಗಿಲ್ಲ ಎಂದು ಶಾಸಕರಾದ ರಾಜಶೇಖರ ಪಾಟೀಲ ಹೇಳಿದರು. ಇಲ್ಲಿ ಸರಿಯಾದ ಆಡಳಿತ ವ್ಯವಸ್ಥೆಯಿಲ್ಲ. ಇಲ್ಲಿನ ಸಮಸ್ಯೆ ನಿಮ್ಮಿಂದಾದರೂ ತೊಲಗಲಿ ಎಂದು ಶಾಸಕರಾದ ಬಿ.ನಾರಾಯಣರಾವ್ ಅವರು ಧನಿಗೂಡಿಸಿದರು.
ಸಭೆಯಲ್ಲಿ ಜಿಪಂ ಅಧ್ಯಕ್ಷರಾದ ಗೀತಾ ಚಿದ್ರಿ, ಜಿಲ್ಲಾಧಿಕಾರಿಗಳು, ಜಿಪಂ ಸಿಇಓ, ಎಸ್ಪಿ ಹಾಗೂ ಇತರರು ಇದ್ದರು.

Date:14-06-2020

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…