ಬೀದರ- ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಎಸಿಬಿ ಬಲೆಗೆ..
ಬೀದರ: ಲಂಚ ಪಡೆಯುವಾಗ ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಎಸಿಬಿ ಬಲೆಗೆ ಬಿದ್ದಿರುವ ಘಟನೆ ಗುರುವಾರ ನಡೆದಿದೆ.
ಬೀದರ್ ಪಶು ಆಸ್ಪತ್ರೆ ಸಹಾಯಕ ನಿರ್ದೆಶಕ ಓಂಕಾರ ಪಾಟೀಲ್ ಮೇಲೆ ಬೀದರ್ ಎಸಿಬಿ ತಂಡದಿಂದ ದಾಳಿ ನಡೆದಿದೆ. ಸುಭಾಷ ವೆಂಕಟರಾವ್ ಒಡಿಯರ್ ಅಲಿಯಂಬರ್ ಎಂಬ ವ್ಯಕ್ತಿ ಯಿಂದ ಪಶುಭಾಗ್ಯ ಯೋಜನೆ ಚೆಕ್ ನೀಡಲು ಐದು ಸಾವಿರ ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಎಸಿಬಿ ಎಸ್ಪಿ ವಿ.ಎಂ.ಜ್ಯೋತಿ ಮಾರ್ಗದರ್ಶನದಲ್ಲಿ ದಾಳಿ ನಡೆದಿದೆ. ಎಸಿಬಿ ಬೀದರ್ ಡಿ ವೈಎಸ್ಪಿ ಬಿಬಿ ಪಾಟೀಲ್, ತನಿಖಾಧಿಕಾರಿ ಶರಣಬಸಪ್ಪಾ ಕೊಡ್ಲಾ, ವೆಂಕಟೇಶ್ ಎಡಹಳ್ಳಿ.ಶ್ರೀಕಾಂತ್ ಅನಿಲ ಪರಶೇಟ್ಟಿ, ಕಿಶೋರ್ ರಮೇಶ ರಘು ವಿಠಲ,ವಸಂತ ಸೇರಿದಂತೆ ಹಲವಾರು ಸಿಬ್ಬಂದಿ ದಾಖಲೆಗಳ ಪರಿಶೀಲನೆ ನಡೆಸಿದರು.
Date:09-01-2010 Time•3:00PM9
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…


















