Home ನಿಮ್ಮ ಜಿಲ್ಲೆ ಬೀದರ ಬೀದರ ಜಿಲ್ಲೆ ಬರಪೀಡಿತ ಎಂದು ಸರ್ಕಾರ ಘೋಷಣೆ ಮಾಡಬೇಕು.

ಬೀದರ ಜಿಲ್ಲೆ ಬರಪೀಡಿತ ಎಂದು ಸರ್ಕಾರ ಘೋಷಣೆ ಮಾಡಬೇಕು.

ಬೆಂಗಳೂರು- ಬೀದರ ಜಿಲ್ಲೆಯಲ್ಲಿ ವಾಡಿಕೆಗಿಂದ ಕಡಿಮೆ ಮಳೆಯಾಗಿದ್ದು, ರಾಜ್ಯ ಸರ್ಕಾರ  ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಟ್ವೀಟ್ ಮೂಲಕ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಒತ್ತಾಯಿಸಿದ್ದಾರೆ.

ಅಲ್ಲದೇ, ಮೈತ್ರಿ ಸರ್ಕಾರದ ಅವಧಿಯಲ್ಲಿ  ಮಾಡಿದ ಸಾಲಮನ್ನಾ ಯೋಜನೆಯಲ್ಲಿ 1.17 ಲಕ್ಷ ರೈತರ ಖಾತೆಗೆ ಮಾತ್ರ ಹಣ ಜಮೆಗೊಂಡಿದ್ದು, ಇನ್ನೂ ಉಳಿದ ರೈತರಿಗೆ ತಕ್ಷಣ ಸಾಲ ಮನ್ನಾದ ಹಣ ಜಮಾವಣೆ ಮಾಡಬೇಕು ಎಂದು ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಸರು ಮತ್ತು ಉದ್ದಿನ ಬೆಳೆಯ ಬೆಲೆ ಮಾರುಕಟ್ಟೆಯಲ್ಲಿ ಕುಸಿತವಾಗಿದೆ. ಒಬ್ಬ ರೈತನಿಗೆ 4 ಕ್ವಿಂಟಲ್ ಖರೀದಿಯ ನಿಯಮ ಸರ್ಕಾರ ಕೈಬಿಡಬೇಕು. ರೈತರ ಸಂಪೂರ್ಣ ಬೆಳೆ ಖರೀದಿ ಮಾಡಬೇಕು. ಅಲ್ಲದೆ, ಖರೀದಿ ಕೇಂದ್ರಗಳನ್ನು ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಹೆಚ್ಚಿಸಬೇಕು ಎಂದು ಟ್ವೀಟ್ ಮೂಲಕ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…