ಬಿಎಸ್ಎಸ್ಕೆ ಚುನಾವಣೆಗೆ ಹೈಕೋರ್ಟ್ ತಡೆಯಾಜ್ಞೆ
ಬಿಎಸ್ಎಸ್ಕೆ ಚುನಾವಣೆಗೆ ಹೈಕೋರ್ಟ್ ತಡೆಯಾಜ್ಞೆ
ಬೀದರ: ಹುಮನಾಬಾದ ತಾಲೂಕಿನ ಹಳ್ಳಿಖೇಡ(ಬಿ) ಬಿಎಸ್ಎಸ್ಕೆ (ಬೀದರ ಸಹಕಾರ ಸಕ್ಕರೆ ಕಾರ್ಖಾನೆ)ಯ ೧೩ ಸ್ಥಾನಕ್ಕೆ ನಡೆಯಬೇಕಿದ ಚುನಾವಣೆಗೆ ಕಲಬುರಗಿ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಈ ಕುರಿತು ಹೈಕೋರ್ಟ್ ಹಿರಿಯ ವಕೀಲ ಗೋರಿಶಂಕರ ಖಾಶೆಂಪುರ್ ಪ್ರತೀಕ್ರೀಯೆ ನೀಡಿದ್ದು, ಸಕ್ಕರೆ ಕಾರ್ಖಾನೆಯ ಞನಾವಣೆಯಲ್ಲಿ ಮತದಾರರ ಹಕ್ಕು ಕಸಿದುಕೊಂಡು ಚುನಾವಣೆ ನಡೆಸುವುದು ಸೂಕ್ತ ಅಲ್ಲ , ಕಾರಣ ನ್ಯಾಯಾಲಯದಲ್ಲಿ ಚುನಾವಣೆಗೆ ತಡೆಯಾಜ್ಞೆ ನೀಡುವಂತೆ ಮನವಿ ಸಲ್ಲಿಸಿದ್ದು, ನ್ಯಾಯಾಧೀಶರು ತಡೆಯಾಜ್ಞಾನೆ ನೀಡಿದ್ದಾರೆ. ಕಾರ್ಖಾನೆಗೆ ಸಂಬಂಧಿಸಿದ ಎಲ್ಲಾ ಸದಸ್ಯರಿಗೆ ಮತದಾನದ ಹಕ್ಕು ನೀಡಬೇಕು ಎಂಬ ವಾದ ನಮ್ಮದಾಗಿದೆ ಎಂದು ತಿಳಿಸಿದ್ದಾರೆ.
ನವೆಂಬರ್ ೭ರಂದು ನಡೆಯಬೇಕಿದ ಚುನಾವಣೆಗೆ ಅ.೩೦ ನಾಮಪತ್ರ ಸಲ್ಲಿಸಲು ಕೋನೆಯ ದಿನವಾಗಿತ್ತು. ಇದೀಗ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು, ಚುನಾವಣೆ ನಡೆಯುವುದು ಬಹುತೇಕ ಅನುಮಾನವಾಗಿದೆ. ಕಳೆದ ಚುನಾವಣೆಯಲ್ಲಿ ಸುಮಾರು 25 ಸಾವಿರಕ್ಕೂ ಅಧಿಕ ಮತದಾದರು ಮತದಾನದ ಹಕ್ಕು ಹೊಂದಿದರು. ಆದರೆ, ಪ್ರಸಕ್ತ ಸಾಲಿನಲ್ಲಿ ನಡೆಬೇಕಿದ ಚುನಾವಣೆಯಲ್ಲಿ ಸುಮಾರು 669 ಸದಸ್ಯರು ಮಾತ್ರ ಮತದಾನದ ಹಕ್ಕು ಹೊಂದಿರುವ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡ ವಿಶ್ವನಾಥ ಮಾಣಿಕರಾವ ಪಾಟೀಲ, ರವಿಕಾಂತ ಕಲ್ಲಪ್ಪ ಹೂಗಾರ, ಬಸವರಾಜ ರತ್ನಪೂರ ಅವರು ಹೈಕೋರ್ಟ್ ಮೊರೆಹೊಗಿದ್ದು, ಶುಕ್ರವಾರ ಸಂಜೆ ಬಿಎಸ್ಎಸ್ಕೆ ಚುನಾವಣೆಗೆ ತಡೆಯಾಜ್ಞೆ ದೊರೆತ್ತಿದೆ.
Date: 23-10-2020
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…

















