ಬಿಎಸ್ಎಸ್ಕೆ ಪ್ರಾರಂಭಿಸಿ ಇಲ್ಲ ಆಡಳಿತ ಮಂಡಳಿ ಜಾಗ ಖಾಲಿಮಾಡಿ : ಸುಭಾಷ್ ಗಂಗಾ
ಡಿ.17ಕ್ಕೆ ಷೇರುದಾರರ, ರೈತರ ಸಭೆ
ಬಿಎಸ್ಎಸ್ಕೆ ಪ್ರಾರಂಭಿಸಿ ಇಲ್ಲ ಆಡಳಿತ ಮಂಡಳಿ ಜಾಗ ಖಾಲಿಮಾಡಿ : ಸುಭಾಷ್ ಗಂಗಾ
ಹುಮಾನಾಬಾದ: ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಪ್ರಾರಂಭಿಸಬೇಕು ಇಲ್ಲ ಆಡಳಿತ ಮಂಡಳಿಬಜಾಗ ಖಾಲಿ ಮಾಡಬೇಕು ಎಂದು ಸುಭಾಷ್ ಗಂಗಾ ಒತ್ತಾಯಿಸಿದ್ದಾರೆ.
ಪಟ್ಟಣದ ವೀರಭದ್ರೇಶ್ವರ ಚಿತ್ರಕಲಾ ಕಾಲೇಜು ಪ್ರಾಂಗಣದ ಸಭಾಂಗಣದಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಖಾನೆ ಆರಂಭಿಸುವ ಅನೇಕ ಮಾತುಗಳು ಕೇಳಿ ಆಡಳಿತಕ್ಕೆ ಬಂದ ಆಡಳಿತ ಮಂಡಳಿ ಕಾರ್ಖಾನೆ ಆರಂಭಿಸುವಲ್ಲಿ ವಿಫಲರಾಗಿದ್ದಾರೆ. ಕಾರ್ಖಾನೆಯಲ್ಲಿ 25 ಸಾವಿರ ಷೇರುದಾರರು ಇದ್ದಾರೆ. ಸೂಕ್ತ ಆಡಳಿತ ನಡೆಸಿದ ಕಾರಣ ಷೇರುದಾರಿಗೆ ಸಿಗಬೇಕಾದ ಹಕ್ಕುಗಳು ಸಿಗದಂತಾಗಿದೆ. ಸಹಕಾರ ಕಾರ್ಖಾನೆ ಇದ್ದಾಗಿದ್ದು, ಕೂಡಲೇ ಸರಕಾರ ಆಡಳಿತ ಮಂಡಳಿ ರದ್ದುಮಾಡಿ ಕಾರ್ಖಾನೆ ಆರಂಭಕ್ಕೆ ಮುಂದಾಗಬೇಕು. ಸಹಕಾರಿ ಇಲಾಖೆಯ ನಿಯಮದಂತೆ ರೈತರ ಸಭೆ ಕರೆದು ವಿವಿಧ ವಿಷಯಗಳ ಕುರಿತು ಚರ್ಚೆನಡೆಸುವ ಕಾರ್ಯ ನಡೆಸಿಲ್ಲ. ಈ ಭಾಗದ ರೈತರಿಗೆ ಇಲ್ಲಿನ ಕಾರ್ಖಾನೆ ಮುಖ್ಯವಾಗಿದ್ದು, ಸರಕಾರ ರೈತರ ಬಗ್ಗೆ ಕಾಳಜಿ ವಹಿಸಿದ ಬೇಕು ಎಂದರು.
ಡಿ.17 ಸಭೆ: ಬೀದರ ಸಹಕಾರ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಇದೇ ಡಿಸೆಂಬರ್ 17 ರಂದು ಬೆಳಿಗ್ಗೆ 11 ಗಂಟೆಗೆ ರೈತರ, ಕಬ್ಬು ಬೆಳೆಗಾರರು ಹಾಗೂ ಕಾರ್ಖಾನೆಯ ಸಿಬ್ಬಂದಿಗಳು ಈ ಸಭೆಯಲ್ಲಿ ಭಾಗವಹಿಸಬೇಕು. ಕಾರ್ಖಾನೆ ಪ್ರಾರಂಭಿಸುವ ನಿಟ್ಟಿನಲ್ಲಿ ಎಲ್ಲರೂ ಒಂದಾಗಿ ಮುಖ್ಯಮಂತ್ರಿಗಳ ಬಳಿ ನಿಯೋಗ ಹೋಗಬೇಕಿದೆ. ಸರ್ಕಾರದ ಮೇಲೆ ಒತ್ತಡ ಹಾಕುವ ಕಾರ್ಯ ಆಗಬೇಕಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಜನರು ಸಭೆಯಲ್ಲಿ ಭಾಗವಹಿಸಿ ಮುಂದಿನ ಚಟುವಟಿಕೆಗಳ ಕುರಿತು ಅಭಿಪ್ರಾಯಗಳು ಮಂಡಿಸಬೇಕು ಎಂದು ಕೇಳಿಕೊಂಡಿದ್ದಾರೆ.
ನಜ್ಜಿಬಿದ್ದೀನ್ ಮಾತನಾಡಿ, ಕಾರ್ಖಾನೆ ಆರಂಭಿಸಲು ಸಾಧ್ಯವಾಗದಿದ್ದರೆ ಯಾವ ಕಾರಣಕ್ಕೆ ಆ ಹುದ್ದೆಯಲ್ಕಿ ಇರಬೇಕು. ಕಾರ್ಖಾನೆ ಬಂದ್ ಆಗುವುದರಿಂದ ಅನೇಕ ಸಮಸ್ಯೆಗಳು ಉದ್ಭವ ಆಗಿವೆ ಎಂದರು.
ದಿನಾಂಕ: 05-11-2023 Time: 12:10pm : www.kknewsonline.in
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…

















