Home ನಿಮ್ಮ ಜಿಲ್ಲೆ ಬೀದರ ಬಸವರಾಜ ಆರ್ಯ ಹುಮನಾಬಾದ MLA ಟಿಕೆಟ್ ಆಕಾಂಕ್ಷಿ..?

ಬಸವರಾಜ ಆರ್ಯ ಹುಮನಾಬಾದ MLA ಟಿಕೆಟ್ ಆಕಾಂಕ್ಷಿ..?

ಬಸವರಾಜ ಆರ್ಯ ಹುಮನಾಬಾದ MLA ಟಿಕೆಟ್ ಆಕಾಂಕ್ಷಿ..?

ಬೀದರ: ಡಾ| ಅಂಬೇಡ್ಕರ್ ವಸತಿ ನಿಗಮದ ನಿರ್ದೇಶಕರಾದ ಬಸವರಾಜ ಆರ್ಯ ಹುಮನಾಬಾದ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿಯಾಗಿರುವ ಕುರಿತು ಇದೀಗ ಭಾರಿ ಚರ್ಚೆ ಶುರುವಾಗಿದೆ.

ಮೂಲತಃ ಹುಮನಾಬಾದ ವಿಧಾನ ಸಭಾ ಕ್ಷೇತ್ರದ‌ ನಿವಾಸಿಯಾಗಿರುವ ಬಸವರಾಜ ಆರ್ಯ ಅವರು, ಈ ಹಿಂದೆ 2004ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ನಡೆಸಿದರು. ದಿ| ರಾಮಚಂದ್ರ ಆರ್ಯ ಅವರ ಸುಪುತ್ರರಾದ ಇವರು, ಬಿಜೆಪಿ ಪಕ್ಷಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಬಸವರಾಜ ಆರ್ಯ ಅವರು, ಪಕ್ಷದ ವರಿಷ್ಟರು ಟಿಕೆಟ್ ನೀಡಿದರೆ ಸ್ಪರ್ಧೆ ನಡೆಸುವ ಜತೆಗೆ ಹುಮನಾಬಾದ ಕ್ಷೇತ್ರದಿಂದ ಕಮಲ ಅರಳಿಸುವ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದು ತಿಳಿಸಿದ್ದಾರೆ. ಪಕ್ಷದ ಮುಖಂಡರ ಗಮನಕ್ಕೆ ಇಲ್ಲಿನ ಎಲ್ಲಾ ಸ್ಥಿತಿ ಗತಿಗಳು ತಿಳಿದಿವೆ ಎಂದರು.

ಈ ಕುರಿತು ಸೋಮನಾಥ ಪಾಟೀಲ ಪ್ರತಿಕ್ರಿಯೆ ನೀಡಿದ್ದು, ಬಸವರಾಜ ಆರ್ಯರು ಕೂಡ ಯುವ ಉತ್ಸಾಹಿಗಳಾಗಿದ್ದಾರೆ. ಪಕ್ಷದ ಎಲ್ಲಾ ಕಾರ್ಯ‌‌ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ. ಪಕ್ಷದ ಮುಖಂಡರ ತೆಗೆದುಕೊಳ್ಳುವ ನಿರ್ಧಾರಕ್ಕೆ ಇಲ್ಲಿನ ಕಾರ್ಯಕರ್ತರು ಸ್ವಾಗತಿಸಿ ಕೆಲಸ ಮಾಡುತ್ತಾರೆ.

Date: 26-02-2023

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…