Home ನಿಮ್ಮ ಜಿಲ್ಲೆ ಕಲಬುರಗಿ ಬದಲಾಯಿತು ತಹಶೀಲ್ದಾರ ವಾಹನಗಳ ಮೇಲೆ ಬೀಕನ್ ಲೈಟ್.

ಬದಲಾಯಿತು ತಹಶೀಲ್ದಾರ ವಾಹನಗಳ ಮೇಲೆ ಬೀಕನ್ ಲೈಟ್.

ಬದಲಾಯಿತು ತಹಶೀಲ್ದಾರ ವಾಹನಗಳ ಮೇಲೆ ಬೀಕನ್ ಲೈಟ್.

ಹುಮನಾಬಾದ: ತಾಲೂಕು ಮಟ್ಟದ ಅಧಿಕಾರಿಗಳು ಸರ್ಕಾರಿ ವಾಹನಕ್ಕೆ ಕೆಂಪು ಬಿಳಿ ಮತ್ತು ನೀಲಿ ಬಣ್ಣ ಹೊಂದಿದ ಬೀಕನ್ ದೀಪಗಳು ಹಾಕಿಕೊಂಡು ಸಂಚರಿಸುತ್ತಿರುವ ಕುರಿತ ಜಿಲ್ಲಾಧಿಕಾರಿಗಳು ಹಾಗೂ ಆರ್‌ಟಿಒ ಅಧಿಕಾರಿಗಳಿಗೆ ಮಾಹಿತಿ ಪಡೆಯುತ್ತಿದ್ದಂತೆ ವಾಹನದ ಮೇಲಿನ ಬೀಕನ್ ಲೈಟ್ ತೆರವುಗೊಳ್ಳಿಸುವುದು ಗೊತ್ತಾಗಿದೆ.
ಕಳೆದ 2017 ಮೇ ತಿಂಗಳಲ್ಲಿ ಕೇಂದ್ರ ಮೋಟಾರು ವಾಹನಗಳ ಕಾಯ್ದೆ ರೂಲ್ 108 ಬದಲಾವಣೆ ಮಾಡಿ ಕೇಂದ್ರ ಸರ್ಕಾರ ನೋಟಿಫಿಕೇಶನ್ ಹೊರಡಿಸಿತ್ತು. ಪ್ರಧಾನಿ, ಮುಖ್ಯಮಂತ್ರಿ ಸೇರಿದಂತೆ ಉನ್ನತ ಅಧಿಕಾರಿಗಳು, ಸಚಿವರು ಕೂಡ ತಮ್ಮ ವಾಹನಗಳ ಮೇಲೆ ಬೀಕನ್ ದೀಪಗಳನ್ನು ಬಳಸುವುದಕ್ಕೆ ನಿಷೇಧ ಹೇರಲಾಗಿತ್ತು. ಆದರೆ, ಕಳೆದ ಕೆಲ ವರ್ಷಗಳಿಂದ ಇಲ್ಲಿನ ತಹಶೀಲ್ದಾರ ಹುಮನಾಬಾದ, ತಹಶಿಲ್ದಾರ ಚಿಟಗುಪ್ಪ ಹಾಗೂ ತಹಶೀಲ್ದಾರ ಬಸವಕಲ್ಯಾಣ ಅವರ ಸರಕಾರಿ ವಾಹನದ ಮೇಲೆ ಮೂರು ಬಣ್ಣದ ಬೀಕನ್ ಲೈಟ್ ಇರುವುದು ಕಂಡು ಬಂದಿದ್ದು, ಇತರೆ ಇಲಾಖೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಬೀಕನ್ ದೀಪದ ಕುರಿತು ಮಾತಾಡಿಕೊಳ್ಳುತ್ತಿದ್ದರು. ನೂರಿತ ಅಧಿಕಾರಿಗಳ ಪ್ರಕಾರ 2017ರಲ್ಲಿ ಬದಲಾದ ವಾಹನ ನೀತಿಯ ನಂತರ ತುರ್ತು ಸಂದರ್ಭದಲ್ಲಿ ಸೇವೆ ಸಲ್ಲಿಸುವ ವಾಹನಗಳಿಗೆ ಮಾತ್ರ ಅವಕಾಶ ಇದೆ. ಇತರೆ ಯಾವುದೇ ಅಧಿಕಾರಿಗಳು ದೀಪದ ವಾಹನ ಬಳಸುವಂತೆ ಇಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಕೆಲ ಖಾಸಗಿ ಪ್ರಭಾವಿ ವ್ಯಕ್ತಿಗಳು ತಮ್ಮ ವಾಹನದಲ್ಲಿ ಸೈರನ್ ಅಳವಡಿಸಿಕೊಂಡಿದ್ದು, ಸಮಯಕ್ಕೆ ಅನುಸಾರ ಸೈರನ್ ಕೂಡ ಬಳಸುತ್ತಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ. ಈ ಕುರಿತು ಜಿಲ್ಲಾಧಿಕಾರಿ ಗೋವಿಂದ್ ರೆಡ್ಡಿ ಅವರನ್ನು ಸಂಪರ್ಕಿಸಿದ್ದಾಗ, ತಹಶೀಲ್ದಾರ ವಾಹನಗಳ ಮೇಲೆ ಇರುವ ಬೀಕನ್ ಲೈಟ್ ಕುರಿತು ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಯೇ ಸೂಕ್ತ ಉತ್ತರ ನೀಡುತ್ತಾರೆ. ಸಾರಿಗೆ ಇಲಾಖೆಯ ನೀತಿ ನಿಯಮಗಳು ಅವರಿಗೆ ಹೆಚ್ಚಿಗೆ ಗೊತ್ತಿರುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಮ್ಮ ಕಡೆಗೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಇದೇ ಸಂದರ್ಭದಲ್ಲಿ ಪ್ರಾದೇಶಿಕ ಸಹಾಯಕ ಸಾರಿಗೆ ಅಧಿಕಾರಿ ಮಹ್ಮದ್ ಝಾಫರ್ ಸಾಧಿಕ್ ಅವರನ್ನು ಸಂಪರ್ಕಿಸಿದ್ದಾಗ, ಸರ್ಕಾರದ ಸಾರಿಗೆ ನಿಯಮ ಅನುಸಾರ ತುರ್ತು ಸೇವೆ ಸಲ್ಲಿಸುವ ಸರ್ಕಾರಿ ವಾಹನಗಳ ಮೇಲೆ ಬೀಕನ್ ದೀಪ ಅಳವಡಿಸಲು ಮಾತ್ರ ಅವಕಾಶ ಇದೆ. ಕೇಂದ್ರ ಮೋಟಾರು ವಾಹನಗಳ ಕಾಯ್ದೆ ರೂಲ್ 108ರ ಪ್ರಕಾರ ಇತರೆ ಯಾವುದೇ ವಾಹನಗಳು ದೀಪ ಅಳವಡಿಸಲು ಬರುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ.

Date: 25-11-2023 / Time: 12:10pm / www.kknewsonline.in

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…