ಪೊಲೀಸ್ ಅಧಿಕಾರಿಗಳು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು
PSI ಸಂತೋಷ ದಕ್ಷ ಅಧಿಕಾರಿ
ಹುಮನಾಬಾದ: ಪೊಲೀಸ್ ಅಧಿಕಾರಿಗಳು ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಬೇಕು. ಯಾವುದೇ ತಾರತಮ್ಯ ಮಾಡಬಾರದು ಎಂದು ಮಾಜಿ ಸಚಿವ ಹಾಗೂ ಶಾಸಕ ರಾಜಶೇಖರ ಪಾಟೀಲ ಹೇಳಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಮಂಗಳವಾರ ಸಂಜೆ ಏರ್ಪಡಿಸಿದ ಬೀಳ್ಕೊಡುಗೆ ಹಾಗೂ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂತೋಷ ಅವರು ಮೂರು ವರ್ಷ ಇಲ್ಲಿ ಸೇವೆ ಸಲ್ಲಿಸಿದ್ದಾರೆ. ಪೊಲೀಸ್ ಇಲಾಖೆ ಎಂದರೆ ಜನರಿಗೆ ಭಯ ಇರಬೇಕು. ಆದರ ಜತೆಗೆ ಉತ್ತಮ ಕೆಲಸ ಮಾಡುವರಿಗೆ ಪ್ರೋತ್ಸಾಹ ನ್ಯಾಯ ನೀಡುವ ಕೆಲಸ ಕೂಡ ಆಗಬೇಕು. ಅದೇ ರೀತಿ ದುಷ್ಟರಿ ಚುರುಕಿ ಮುಟ್ಟಿಸುವ ಕೆಲಸ ಆಗಬೇಕು. ಪೊಲೀಸರು ಜನರ ರಕ್ಷಕರಾಗಿ ಕೆಲಸ ಮಾಡಬೇಕು, ರಾಕ್ಷಸರಾಗಿ ಕೆಲಸ ಮಾಡಬಾರದು ಎಂದು ಸಲಹೆ ಮಾಡಿದರು.
ಪಿ.ಎಸ್.ಐ ಸಂತೋಷ ದಕ್ಷ ಅಧಿಕಾರಿಯಾಗಿ ಕೆಲಸ ಮಾಡಿದ್ದಾರೆ. ಪೊಲೀಸ್ ಇಲಾಖೆಯ ಮೂಲಕ ಜನರಿಗೆ ನ್ಯಾಯ ನೀಡುವ ಕೆಲಸ ಆಗಬೇಕು. ಸರ್ಕಾರ ಬದಲಾದ ನಂತರ ಅಧಿಕಾರಿಗಳು ಬದಲಾಗುವುದು ಸಾಮಾನ್ಯ ಎಂದ ಅವರು, ಅಧಿಕಾರಿಗಳು ಕಾನೂನು ಪ್ರಕಾರ ಕೆಲಸ ಮಾಡಬೇಕು ಎಲ್ಲರಿಗೂ ಒಂದೆ ನ್ಯಾಯ ದೊರೆಯುವಂತೆ ಆಗಬೇಕು ಎಂದು ಅಧಿಕಾರಿಗಳಿಗೆ ಸಲಹೆ ಮಾಡಿದರು.
ಡಾ। ಚಂದ್ರಶೇಖರ ಪಾಟೀಲ ಮಾತನಾಡಿ, ಅಧಿಕಾರಿಗಳು ಮಾಡುವ ಉತ್ತಮ ರ್ಯಗಳು ಯಾವತ್ತು ಮರೆಯಲ್ಲು ಸಾಧ್ಯವಿಲ್ಲ. ಸಂತೋಷ ಅವರು ಹುಮನಾಬಾದ ಪೊಲೀಸ್ ಠಾಣೆಯ ಮೂಲಕ ಉತ್ತಮ ಕಾರ್ಯ ನಿರ್ವಹಿಸಿದ್ದಾರೆ ಎಂಬುವುದು ನೆರೆದ ಜನರು ನೋಡಿದರೆ ಗೊತ್ತಾಗುತ್ತೆ. ಅವರು ಸಲ್ಲಿಸಿದ ಸೇವೆ ಇಲ್ಲಿನ ಜನರು ಮರೆಯುವುದಿಲ್ಲ. ಹುಮನಾಬಾದ ವಲಯದಲ್ಲಿ ಕೋಮವಾದಕ್ಕೆ ಆಸ್ಪದ ಯಾವ ಅಧಿಕಾರುಗಳು ನೀಡಿಲ್ಲ. ಠಾಣೆಗೆ ಬರುವ ಜನರಿಗೆ ಸೂಕ್ತ ನ್ಯಾಯ ನೀಡುವ ಕೆಲಸ ಅಧಿಕಾರುಗಳು ಮಾಡಬೇಕು ಎಂದು ಸಲಹೆ ಮಾಡಿದರು.
ಇದೇ ಸಂದರ್ಭದಲ್ಲಿ ವರ್ಗಾವಣೆಗೊಂಡ ಪಿ.ಎಸ್.ಐ ಸಂತೋಷ ಎಲ್.ಟಿ ಹಾಗೂ ನೂತನ ಪಿ.ಎಸ್.ಐ ರವಿಕುಮಾರ ವಿವಿಧ ಗಣ್ಯರು ಹಾಗೂ ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿದಿಗಳು ಸನ್ಮಾನಿಸಿದರು.
ಎಮ್.ಎಲ್.ಸಿ ಡಾ। ಚಂದ್ರಶೇಖರ ಪಾಟೀಲ,
ಡಿ.ವೈ.ಎಸ್.ಪಿ ಎಸ್.ಬಿ ಮಹೇಶ್ವರಪ್ಪ,
ಸಿಪಿಐ ಜೆ.ನ್ಯಾಮೆಗೌಡ್, ಸಿಪಿಐ ಶರಣಬಸವೇಶ್ವರ ಭಜಂತ್ರಿ, ಪಿ.ಎಸ್.ಐ ಮಹಾಂತೇಶ ಲಂಬಿ, ಪುರಸಭೆ ಸದಸ್ಯ ಅಪ್ಸರ್ ಮಿಯ್ಯಾ ಸೇರಿದಂತೆ ಅನೇಕರು ಇದ್ದರು.
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…


















