ಪಿಜಿ ಮುಗಿಸಿದ ರೈತನ ಮಗ ಆತ್ಮಹತ್ಯೆ
ಜಲಸಂಗಿ ಗ್ರಾಮದ ಗಜಾನಂದ ಆತ್ಮಹತ್ಯೆ
ಹುಮನಾಬಾದ:17OCT19: ತಾಲೂಕಿನ ಜಲಸಂಗಿ ಗ್ರಾಮದ ಸಿದ್ದಪ್ಪ ಹೊನಗೊಂಡ ಅವರ ಮಗ ಗಜಾನಂದ (25 ವರ್ಷ) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಪಿಜಿ ವಿದ್ಯಾಭ್ಯಾಸ ಮುಗಿಸಿ ಗಜಾನಂದ ಖಾಸಗಿ ಶಾಲೆಯಲ್ಲಿ ಶಿಕ್ಷಕನಾಗಿ ಹಾಗೂ ಹೊಲದಲ್ಲಿ ರೈತನಾಗಿ ದುಡಿಯುತ್ತಿದ್ದ ಈತ ಹೆಚ್ಚಿನ ಶಿಕ್ಷಣಕಾಗಿ ಧಾರವಾಡ ಸೆಂಟರ್ಗೆ ಸೇರಬೇಕು ಎಂಬ ಹಂಬಲ ಹೊಂದಿದ. ಆದರೆ,ತಂದೆ ಬ್ಯಾಂಕ್ ಹಾಗೂ ಖಾಸಗಿ ಒಟ್ಟಾರೆ 7 ಲಕ್ಷ ಸಾಲ ಹೊಂದಿದ್ದು, ಶಿಕ್ಷಣಕ್ಕೆ ಹಣ ಇಲ್ಲದ ಕಾರಣ ಹಾಗೂ ತಂದೆಯ ಸಾಲ ತೀರಿಸುವ ಬಗ್ಗೆ ಚಿಂತಿಸಿ ಮನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬಸ್ತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಘಟನಾ ಸ್ಥಳಕ್ಕೆ ಪಿಎಸ್ಐ ಎಲ್.ಟಿ ಸಂತೋಷ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಹುಮನಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…


















