Home ನಿಮ್ಮ ಜಿಲ್ಲೆ ಬೀದರ ಪರವಾನಗಿ ರಹಿತ ಉತ್ಪಾದನೆ ತಯಾರಿಕೆ-ಅಧಿಕಾರಿಗಳ ಪರಿಶೀಲನೆ

ಪರವಾನಗಿ ರಹಿತ ಉತ್ಪಾದನೆ ತಯಾರಿಕೆ-ಅಧಿಕಾರಿಗಳ ಪರಿಶೀಲನೆ

ತಂಬಾಕು ಉತ್ಪಾದನೆ ಶಂಕೆ ಹಿನ್ನೆಲೆಯಲ್ಲಿ ಪರಿಶೀಲನೆ!

ಬೀದರ  – ನಗರ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿನ ವಿವಿಧ ಘಟಕಗಳು ಪರವಾನಗಿ ಪಡೆಯದ ಉತ್ಪನಗಳನ್ನು ತಯಾರಿಸಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕಿ ಸುರೇಖಾ ಮನೋಳಿ ನೇತೃತ್ವದಲ್ಲಿ ವಿವಿಧ ಅಧಿಕಾರಿಗಳ ತಂಡ ನೌಬಾದ ಹಾಗೂ ಕೊಳಾರ ಕೈಗಾರಿಕಾ ಪ್ರದೇಶದಲ್ಲಿ ವಿವಿಧ ಘಟಕಗಳ ಮೇಳೆ ದಿಢೀರ್ ಭೇಟಿನೀಡಿ ಪರಿಶೀಲನೆ ನಡೆಸಿದರು.

ನೌಬಾದ ಕೈಗಾರಿಕಾ ಪ್ರದೇಶದಲ್ಲಿರುವ ಮೇ.ಆರ್.ಕೆ ಪ್ರೋಡಕ್ಟ್,  ಮೆ| ಅನುಪಮ ಫ್ಯಾಬ್ರಿಕೇಷನ್ಸ್, ಕೊಳಾರ  ಕೈಗಾರಿಕಾ ಪ್ರದೇಶದಲ್ಲಿರುವ ಮೇ.ಫಾರ್ಮರ್ಸ್ ಫುಡ್ ಪ್ರೋಡಕ್ಟ್ ವೇರ್ ಹೌಸಿಂಗ್, ಮೇ.ರೀಗರ್ ಇಂಡಸ್ಟ್ರೀ, ಮೇ.ಎವರಿ ಡೇ ಪ್ರೋಡಕ್ಟ್, ಮೇ.ಹೆಚ್.ಎಮ್.ಎಸ್ ಎಂಜಿನೀಯರಿಂಗ್ ವಕ್ರ್ಸ್ ಕೈಗಾರಿಕಾ ಘಟಕಗಳಿಗೆ ಭೇಟಿ ನೀಡಿ, ಅಲ್ಲಿ ತಯಾರಿಸಲಾಗುವ ಉತ್ಪನ್ನಗಳನ್ನು ವೀಕ್ಷಿಸಿದರು. ಅಲ್ಲದೆ ಉತ್ಪನ್ನಗಳ ತಯಾರಿಕೆಯ ಪರವಾನಿಗೆ, ಬಾಡಿಗೆ ಪತ್ರಗಳು, ವಿದ್ಯುತ್ ಬಿಲ್ಲುಗಳು, ಕಾರ್ಮಿಕರ ಹಾಜರಾತಿ ಸೇರಿದಂತೆ ವಿವಿಧ ದಾಖಲಾತಿಗಳನ್ನು ಪರಿಶೀಲಿಸಿದರು. ಅನಧಿಕೃತವಾಗಿ ತಂಬಾಕು ಉತ್ಪನ್ನ ತಯಾರಿಕೆ ಘಟಕಗಳು ನಡೆಯುತ್ತಿವೆ ಎಂಬ ದೂರುಗಳು ಇರುವ ಹಿನ್ನಲೆಯಲ್ಲಿ ಕೂಡ ವಿವಿಧಡೆ ಅಧಿಕಾರಿಗಳು ಪರಿಶೀಲನೆ ನಡೆಸಿದರು.

ಸ್ಥಳೀಯರಿಗೆ ಉದ್ಯೋಗ ನೀಡಿ:

ಕೈಗಾರಿಕಾ ಘಟಕಗಳಲ್ಲಿನ ವಿವಿಧ ಕಾರ್ಖಾನೆಗಳು ಹೊರ ರಾಜ್ಯದ ಕಾರ್ಮಿಕರಿಗೆ ಹೆಚ್ಚಿನ ಉದ್ಯೋಗ ಕಲ್ಪಿಸಿರುವುದು ಗಮನಿಸಿದ ಅಧಿಕಾರಿಗಳು, ಕಾರ್ಖಾನೆಗಳಲ್ಲಿ ಶೇ.80ರಷ್ಟು ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎನ್ನುವ ನಿಯಮವಿದೆ. ಅದರಂತೆ ಹೆಚ್ಚಿನ ನೌಕರರು ಕಾರ್ಮಿಕರು ಸ್ಥಳೀಯರೇ ಇರುವಂತೆ ನೋಡಿಕೊಳ್ಳಬೇಕು ಎಂದು ಘಟಕಗಳ ಮಾಲೀಕರಿಗೆ ನಿರ್ದೇಶನ ನೀಡಿದರು.

ಈ ಸಂದರ್ಭದಲ್ಲಿ ಕೆಐಎಡಿಬಿ ಅಭಿವೃದ್ಧಿ ಅಧಿಕಾರಿ ಟಿ.ಹೆಚ್.ಪ್ರಕಾಶ, ಕರ್ನಾಟಕ ರಾಜ್ಯ ಪರಿಸರ ಮಾಲೀನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಮಂಜಪ್ಪ, ಆರೋಗ್ಯ ಇಲಾಖೆಯ ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಡಾ| ಶಿವಶಂಕರ.ಬಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕರಾದ ಬಾಬುರೆಡ್ಡಿ, ನ್ಯೂ ಟೌನ್ ಪೊಲೀಸ್ ಠಾಣೆಯ ಪಿಎಸ್‍ಐ ಗುರು ಪಾಟೀಲ್, ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕರಾದ ನಾಗರಾಜ, ಜೆಸ್ಕಾಂನ ಸತೀಶ ಹೆಬ್ಬಾಳಕರ್ ಹಾಗೂ ಇತರರು ಉಪಸ್ಥಿತರಿದ್ದರು.

 

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…