ನಾಡು-ನುಡಿ ರಕ್ಷಣೆಗೆ ಪ್ರತಿಯೊಬ್ಬರು ಮುಂದಾಗಬೇಕು – ನವೀನ್ ಬತಲಿ

ಹುಮನಾಬಾದ: ಕನ್ನಡ ಪರ ಸಂಘಟನೆಗಳಿAದ ಕನ್ನಡ ನಾಡು, ನುಡಿ ರಕ್ಷಣೆ ನಡೆದಿದ್ದು, ಕನ್ನಡ ಭಾಷೆಯ ರಕ್ಷಣೆಗಾಗಿ ನಾಡಿನ ಪ್ರತಿಯೊಬ್ಬರ ಶ್ರಮಿಸಬೇಕು ಎಂದು ಜಯ ಕರ್ನಾಟಕ ಜನಪರ ವೇಧಿಕೆ ಸಂಘಟನೆಯ ರಾಜ್ಯ ಕಾರ್ಯದರ್ಶಿ ನವೀನ ಬತಲಿ ಹೇಳಿದರು.
ಪಟ್ಟಣದ ಜಯ ಕರ್ನಾಟಕ ಜನರಪ ವೇಧಿಕೆ ಕಚೇರಿಯಲ್ಲಿ ಏರ್ಪಡಿಸಿದ ರಾಜೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ನಾವುಗಳು ಪ್ರತಿನಿತ್ಯ ಮಾತೃಭಾಷೆಯಲ್ಲಿ ವ್ಯವಹಾರ ನಡೆಸಬೇಕು. ಕಳೆದ ಅನೇಕ ವರ್ಷಗಳಿಂದ ನಮ್ಮ ಸಂಘಟನೆ ಕೂಡ ಕನ್ನಡ ನಾಡು-ನುಡಿಗಾಗಿ ನಿರಂತ ಕೆಲಸ ಮಾಡುತ್ತಾ ಬಂದಿದ್ದು, ಅಪಾರ ಸಂಖ್ಯೆಯ ಕರ‍್ಯಕರ್ತರನ್ನು ಹೊಂದಿದೆ. ಗುಣರಂಜನ ಶೆಟ್ಟಿ ಅವರ ನೇತೃತ್ವದಲ್ಲಿ ಸಂಘಟನೆ ಕಾರ್ಯ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಇಂದು ಕನ್ನಡದ ಜನರು ಇಡೀ ವಿಶ್ವದಲ್ಲಿ ಉತ್ತನ ಸ್ಥಾನದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಅಲ್ಲಿಯೂ ಅವರು ಕನ್ನಡ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ನಾವುಗಳು ದೇಶದ ವಿವಿಧ ರಾಜ್ಯಗಳ ಅನ್ಯ ಭಾಷೆಗಳನ್ನು ಗೌರವದಿಂದ ಕಾಣಬೇಕು. ಆದರೆ, ಮಾತೃ ಭಾಷೆಗೆ ಮಾತ್ರ ಧಕ್ಕೆ ಬರದಂತೆ ಎಲ್ಲರೂ ನೋಡಿಕೊಳ್ಳಬೇಕು ಎಂದು ಹೇಳಿದರು.
ತಾಲೂಕು ಅಧ್ಯಕ್ಷ ಅವಿನಾಶ ಧುಮಾಳೆ ಮಾತನಾಡಿ, ನಮ್ಮ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕನ್ನಡ, ಮರಾಠಿ, ತೆಲಗು, ಹಿಂದಿ, ಉರ್ದು ಭಾಷೆಗಳು ಮಾತಾಡುವುದು ಸಾಮಾನ್ಯವಾಗಿದೆ. ಬಹು ಭಾಷೆಗಳು ಸರಳವಾಗಿ ಆಡುವ ನಾವುಗಳು ನಮ್ಮ ನಾಡಿನ ಮಾತೃ ಭಾಷೆಯನ್ನು ಮೊದಲು ಬಳಸಬೇಕು. ವ್ಯವಹಾರಕ್ಕೆ ಬೇರೆ ಭಾಷೆಗಳು ಬಳಸಿದರು ಕೂಡ, ಕನ್ನಡಕ್ಕೆ ಧಕ್ಕೆ ಆಗಂದತೆ ಎಲ್ಲರೂ ನೋಡಿಕೊಳ್ಳಬೇಕು. ಕನ್ನಡ ಮಾತೆ ನಮಗೆ ಚಂದ ಎಂದರು.
ಈ ಸಂದರ್ಭದಲ್ಲಿ ತಾಲೂಕು ಗೌರವ ಅಧ್ಯಕ್ಷ ಸಂದೀಪ ಬತಲಿ, ಕರಣ ಜಾನವೀರ್, ಗನೇಶ, ಮಹಾದೇವ ಗೌಳಿ, ರಾಜು, ಪ್ರವೀಣ ಗುತ್ತೆದಾರ, ಅಕ್ಷಯ, ಅಮರ್, ಧನರಾಜ, ರೇವಣಸಿದ್ದಪ್ಪ, ಸಿದ್ದು ಭಾಲ್ಕೇಶ್ವರ ಸೇರಿದಂತೆ ಅನೇಕರು ಇದ್ದರು.
Date:01-11-2023
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…

















