ದಾಬಾ ವೇಟರ್ ಗಳ ಜಗಳ ಕೊಲೆಯಲ್ಲಿ ಅಂತ್ಯ
ರೆಡ್ಡಿ ದಾಬದ ವೇಟರ್ ಕೊಲೆ
ಬೀದರ: ದಾಬಾದಲ್ಲಿ ಕೆಲಸ ಮಾಡುತ್ತಿದ ವೇಟರ್ ಗಳ ಜಗಳ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಹುಮನಾಬಾದ ಹೊರವಲಯದಲ್ಲಿ ನಡೆದಿದೆ.
ಕಾಳಗಿ ಮೂಲದ ಇಸ್ಮಾಯಿಲ್ ( 40 ವರ್ಷ) ಕೊಲೆಗೀಡಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಅಲ್ಲೆ ಕೆಲಸ ನಿರ್ವಹಿಸುತ್ತಿದ ಸೆಳಗಿ ಮೂಲದ ಮೈಲಾರಿ ಕೊಲೆಮಾಡಿದ್ದಾನೆ. ಹುಮನಾಬಾದ ಕಲಬುರಗಿ ರಸ್ತೆಯಲ್ಲಿನ ದಾಬಾದಲ್ಲಿ ಇವರು ವೇಟರ್ ಅಂತ ಕೆಲಸ ಮಾಡುತ್ತಿದ್ದರು. ರಾತ್ರಿ ದಾಬ ಮುಚ್ಚುವ ಸಂದರ್ಭದಲ್ಲಿ ಜಗಳ ನಡೆದಿದೆ ಎಂದು ತಿಳಿದು ಬಂದಿದೆ.ದಾಬಾದಲ್ಲಿನ ಕಟ್ಟಿಗೆಯಿಂದ ಇಸ್ಮಾಯಿಲ್ ತಲೆಯ ಮೇಲೆ ಮತ್ತು ಕುತ್ತಿಗೆಯ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಕುರಿತು ಹುಮನಾಬಾದ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರುಮಾಡುದ್ದಾರೆ.
ಕಲಬುರಗಿ: ವಿದ್ಯುತ್ ಅವಘಡಗಳಿಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳಿ
*ಮುನ್ನೆಚ್ಚರಿಕೆ ವಹಿಸಿ; ವಿದ್ಯುತ್ ಅವಘಡ ತಪ್ಪಿಸಿ* *ಮಳೆಗಾಲ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಸುರಕ್ಷತಾ …


















