ಡಾ। ಸಿದ್ದು ಪಾಟೀಲಗೆ ಹಾಲಿನ ಅಭಿಷೇಕ ಮಾಡುವ ಮೂಲಕ ಜನ್ಮದಿನ ಆಚರಿಸಿದ ಅಭಿಮಾನಿಗಳು.
ಡಾ। ಸಿದ್ದು ಪಾಟೀಲ ಅದ್ದೂರಿ ಜನ್ಮದಿನಾಚರಣೆ
ಡಾ। ಸಿದ್ದು ಪಾಟೀಲಗೆ ಹಾಲಿನ ಅಭಿಷೇಕ ಮಾಡುವ ಮೂಲಕ ಜನ್ಮದಿನ ಆಚರಿಸಿದ ಅಭಿಮಾನಿಗಳು.
ಬೀದರ: ಬಿಜೆಪಿ ಯುವ ಮುಖಂಡ ಡಾ। ಸಿದ್ದಲಿಂಗಪ್ಪ ಪಾಟೀಲ ಅವರ 44ನೇ ಜನ್ಮ ದಿನವನ್ನು ಅಭಿಮಾನಿ ಬಳಗದಿಂದ ಅದ್ದೂರಿಯಾಗಿ ಆಚರಿಸಿದರು. ವಿಶೇಷವಾಗಿ ಹಾಲಿನ ಅಭಿಷೇಕ ಮಾಡುವ ಮೂಲಕ ಅಭಿಮಾನಿಗಳು ಸಂಭ್ರಮಿಸಿದರು.
ಬೆಳ್ಳೆಗೆ ಕುಲ ದೇವ ವೀರಭದ್ರೇಶ್ವರ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದ, ಡಾ। ಸಿದ್ದಲಿಂಗಪ್ಪಾ ಪಾಟೀಲ, ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಏರ್ಪಡಿಸಿದ್ದ ಜನ್ಮದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಎಲ್ಲಾ ಕಡೆಗಳಲ್ಲಿ ಯುವಕರು ಉತ್ಸಾಹದಿಂದ ಸನ್ಮಾನಿಸಿ ಜನ್ಮದಿನದ ಶುಭಕೋರಿದರು.

ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆದ ಜನ್ಮ ದಿನ ಕಾರ್ಯಕ್ರಮದಲ್ಲಿ ಸಂಸದ ಭಗಂತ ಖೂಬಾ ಭಾಗವಹಿಸಿ ಜನ್ಮದಿನದ ಶುಭಕೋರಿದರು. ಬಿಎಸ್ಎಸ್ಕೆ ಅಧ್ಯಕ್ಷ ಸುಭಾಷ್ ಕಲ್ಲೂರ್ ಮಾತನಾಡಿ, ಬಿಜೆಪಿ ಮುಖಂಡ ಪದ್ಮಾಕರ್ ಪಾಟೀಲ ಮಾತನಾಡಿ, ಸಿದ್ದು ಪಾಟೀಲ ಅವರಿಗೆ ರಾಜಕೀಯ ಭವಿಷ್ಯ ಉತ್ತಮವಾಗಿದೆ ಎಂದು ಹೇಳಿದರು. ಸೂಕ್ತ ಸಮಯ ಹಾಗೂ ಸಂದರ್ಭಗಳು ಬಳಸಿಕೊಂಡು ರಾಜಕೀಯ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಅನೇಕ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಸಿದ್ದು ಪಾಟೀಲ ಅವರನ್ನು ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು. ಬಿಜೆಪಿ ಮುಖಂಡರಾದ ಬಸವರಾಜ ಆರ್ಯ, ಗಿರೀಶ ತುಂಬಾ, ಬಾಬು ಟೈಗರ್, ಗಜೇಂದ್ರ ಕನಕಟ್ಟಕರ್,ಪ್ರಭಾಕರ ನಾಗರಾಳೆ, ಶ್ರೀನಿವಾಸ ದೇವಣಿ ಸೇರಿದಂತೆ ಅನೇಕ ಮುಖಂಡರ ಭಾಗವಹಿಸಿದರು.
Date: 06-11-2021 : KKNEWSONLINE.IN
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…

















