Home ನಿಮ್ಮ ಜಿಲ್ಲೆ ಬೀದರ ಜಿಲ್ಲೆಯಾದ್ಯಂತ ವಿವಿಧ ಧಾರ್ಮಿಕ ಕೇಂದ್ರಗಳ ತೆರವು..?

ಜಿಲ್ಲೆಯಾದ್ಯಂತ ವಿವಿಧ ಧಾರ್ಮಿಕ ಕೇಂದ್ರಗಳ ತೆರವು..?

ಹುಮನಾಬಾದ: ತಾಲೂಕಿನ ವಿವಿಧ ಗ್ರಾಮಗಳಲ್ಲಿನ ಸಾರ್ವಜನಿಕ ರಸ್ತೆಯಲ್ಲಿನ ಧಾರ್ಮಿಕ ಕಟ್ಟಡಗಳನ್ನು ತೆರವು ಗೊಳಿಸುವ ನಿಟ್ಟಿನಲ್ಲಿ ತಾಲೂಕ ಆಡಳಿತ ಸಿದ್ಧತೆ ನಡೆಸಿದೆ.

ಈ ಕುರಿತು ಬುಧವಾರ ರಾತ್ರಿ ತಹಶೀಲ್ದಾರ ಕಛೇರಿಯಲ್ಲಿ ತಹಶೀಲ್ದಾರ ನಾಗಯ್ಯ ಹಿರೇಮಠ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಾಿದ್ದು, ತಾಲೂಕಿನ ಧುಮ್ಮನಸೂರ ಗ್ರಾಮದ ಗಣೇಶ ಮೂರ್ತಿ, ಭವಾನಿ ಮಾತಾ ಮಂದಿರ, ಸಿಧಾರ್ಥ ಸ್ವಾಮಿ ಮಂದಿರ, ಹನುಮಾನ ಮಂದಿರ, ಮರಗೆಮ್ಮಾ ಮಂದಿರ. ಮುಸ್ತಾಪೂರ ಗ್ರಾಮದ ದಸ್ತಗೀರ ದರ್ಗಾ, ಕಲ್ಲೂರ ಗ್ರಾಮದ ಜೈ ಭವಾನಿ ಮಂದಿರ, ಕನಕದಾಸ ಮಂದಿರ. ಮೋಳಕೇರಾ ಗ್ರಾಮದಲ್ಲಿ ಲಕ್ಷ್ಮಿ ಮಂದಿರ, ಹುಡಗಿ ಗ್ರಾಮದ ಮಾತಾ ಮಾಣಿಕೇಶ್ವರಿ ಮಂದಿರ, ಹುಣಸನಾಳ ಹನುಮಾನ ಮಂದಿರ, ಸೇಡೊಳ ವಿಠಲ ರುಕ್ಮೀಣಿ ಮಂದಿರ, ವಾಲ್ಮೀಕಿ ಮಂದಿರ, ಚಂದನಹಳ್ಳಿ ಬೌದ್ಧ ಮಂದಿರ, ನಾಮದಾಪೂರ ಗ್ರಾಮದ ರೇಣುಕಾ ಮಂದಿರ, ಬೌದ್ಧ ಮಂದಿರ, ಸಿತಾಳಗೇರಾ ಗ್ರಾಮದ ಚರ್ಚ ಸಿಲುಬೆ, ಭಕ್ತ ಕನಕದಾಸ ಮಂದಿರ, ಮರಖಲ ಗ್ರಾಮದ ಬೇತಮ್ ಚರ್ಚ, ನ್ಯೂ ಕೆಥೋಲಿಕ್ ಚರ್ಚ, ಶೇಖ ಫರೀದ ದರ್ಗಾ, ಶಕ್ಕರಗಂಜ ಗ್ರಾಮದಲ್ಲಿನ ಸೇವಂತ ಡ್ಯ ಚರ್ಚ ಗಳು ತೆರವು ಮಾಡುವ ನಿಟ್ಥಿನಲ್ಲಿ ಚರ್ಚೆ ನಡೆಸಿದ್ದಾರೆ.

ಜಿಲ್ಲಾಧಿಕಾರಿ ಎಚ್.ಆರ್ ಮಹಾದೇವ ಅವರ ಆದೇಶ ಹಿನ್ನೆಲೆಯಲ್ಲಿ ತಹಶೀಲ್ದಾರ ನಾಗಯ್ಯ ಹಿರೇಮಠ ಅವರ ಅಧಿಕಾರಿಗಳ ಸಭೆ ನಡೆಸಿ ಎಲ್ಲಾ ಗ್ರಾಮಗಳಲ್ಲಿ ಗುರುವಾರ ಶಾಂತಿ ಸಭೆ ನಡೆಸಬೇಕು. ಶಾಂತಿಯುತವಾಗಿ ತೆರವು ಆಗಬೇಕು ಎಂದು ತಿಳಿಸಿದ್ದಾರೆ.
ರಾಜ್ಯದಂತ ಈ ಕಾರ್ಯ ನಡೆಯಲ್ಲಿದ್ದು, ಬೀದರ ಜಿಲ್ಲೆಯಲ್ಲಿ ಕೂಡ ವಿವಿಧ ತಾಲೂಕಿನಲ್ಲಿ ತೆರವುಗೊಳ್ಳಿಸುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿದು ಬಂದಿದೆ.

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…