Home ನಿಮ್ಮ ಜಿಲ್ಲೆ ಬೀದರ ಜಿಲ್ಲಾಡಳಿತಕ್ಕೆ ಸ್ಯಾನಿಟೈಜರ್, ಮಾಸ್ಕ, ಔಷಧಿ ಸಿಂಪಡಣೆ ಯಂತ್ರ ವಿತರಣೆ

ಜಿಲ್ಲಾಡಳಿತಕ್ಕೆ ಸ್ಯಾನಿಟೈಜರ್, ಮಾಸ್ಕ, ಔಷಧಿ ಸಿಂಪಡಣೆ ಯಂತ್ರ ವಿತರಣೆ

ಕಾಶಿಲಿಂಗ ಅವರಿಂದ 80 ಔಷಧಿ ಸಿಂಪಡಣೆ ಸ್ಪ್ರೇಯರ್‌ ಯಂತ್ರಗಳ ಸಹಾಯ

ಬೀದರಃ ಕೃಷಿ ಸಮೃದ್ಧಿ ಬೀದರನ ಕಾಶಿಲಿಂಗ ಅಗ್ರಹಾರ ಇವರು ಬೀದರ ಜಿಲ್ಲಾಡಳಿತಕ್ಕೆ ಸೋಮವರ ಸ್ಯಾನಿಟೈಜರ್ ಮತ್ತು 80 ಔಷಧಿ ಸಿಂಪಡಿಸುವ ಬ್ಯಾಟರಿಯುಕ್ತ ಔಷಧಿ ಸಿಂಪಡಣೆ ಸ್ಪ್ರೇಯರ್‌ಗಳನ್ನು ಜಿಲ್ಲಾಡಳಿತಕ್ಕೆ ನೀಡಿದರು. ಜಿಲ್ಲಾಧಿಕಾರಿ ಡಾ. ಎಚ್.ಆರ್ ಮಹಾದೇವ ಯಂತ್ರಗಳು ಸ್ವೀಕರಿಸಿ ಸಂತಸ ವ್ಯಕ್ತಪಡಿಸಿದರು. ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಈ ಯಂತ್ರಗಳು ಕಾರ್ಯ ನಿರ್ವಹಿಸುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಲ್ಲದೇ ಅಜೀಮ್ ಪ್ರೇಮಜಿ ಫೌಂಡೇಶನ್ ವತಿಯಿಂದ ಜಿಲ್ಲಾ ಸಂಯೋಜಕರಾದ ಶಿವಕುಮಾರ ಸಿ.ಎಂ ಅವರು ಜಿಲ್ಲಾಡಳಿತಕ್ಕೆ 200 ಪಿಪಿ ಕಿಟ್, 200 ಎನ್95 ಮಾಸ್ಕ್ಗಳನ್ನು ಜಿಲ್ಲಾಧಿಕಾರಿಗಳ ಮೂಲಕ ಡಿ.ಎಚ್.ಓ ಅವರಿಗೆ ನೀಡಿದರು.

 

Date: 13-04-2020 Time:6:05PM

 

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…