ಜಾತಿ ಧರ್ಮದ ಹೆಸರಲ್ಲಿ ಜಗಳ ಬೇಡ-ಶಾಸಕ ಪಾಟೀಲ.
ಹುಮನಾಬಾದ: ಖಟಕಚಿಂಚೋಳಿ ಗ್ರಾಮದಲ್ಲಿ ನಡೆದ ದಲಿತ-ಮುಸ್ಲಿಂ ಸಮುದಾಯದ ಜಗಳ ಪ್ರಕರಣ ಹಿನ್ನೆಲೆಯಲ್ಲಿ ಪಟ್ಟಣದ ತಾಲೂಕು ಪಂಚಾಯತ ಸಭಾಂಗಣದಲ್ಲಿ ಶುಕ್ರವಾರ ಪೊಲೀಸ್ ಇಲಾಖೆಯಿಂದ ಶಾಂತಿ ಸಭೆ ಜರುಗಿತು.
ಸಭೆಯಲ್ಲಿ ಶಾಸಕ ರಾಜಶೇಖರ ಪಾಟೀಲ ಮಾತನಾಡಿ, ಕ್ಷೇತ್ರದಲ್ಲಿ ದಲಿತರಿಗೆ ನ್ಯಾಯ ನೀಡುವ ಕೆಲಸ ಮಾಡಿದ್ದೇನೆ. ತಾಲೂಕು ಪಂಚಾಯತ ಹಾಗೂ ಜಿಲ್ಲಾ ಪಂಚಾಯತ ಉಪಾಧ್ಯಕ್ಷ ಸ್ಥಾನ ಸೇರಿದಂತೆ ಇತರೆ ಪ್ರಮುಖ ಸ್ಥಾನ ದಲಿತರಿಗೆ ನೀಡಲಾಗಿದೆ. ದಲಿತ ಮುಖ್ಯಡರು ಇದು ತಿಳಿದುಕೊಳ್ಳಬೇಕು ಎಂದು ತಿಳಿಸಿದ ಅವರು, ಒಂದೇ ಗ್ರಾಮದಲ್ಲಿ ಇರುವ ಎಲ್ಲಾ ವರ್ಗದ ಜನರು ಒಟ್ಟಾಗಿ ಇರಬೇಕು. ಗ್ರಾಮದಲ್ಲಿ ಪ್ರೀತಿ- ಪ್ರೇಮದಿಂದ ಬಾಳಬೇಕು ಎಂದು ಸಲಹೆ ನೀಡಿದ ಅವರು, ಗ್ರಾಮದಲ್ಲಿ ಕುಡಿವ ನೀರು ಎಲ್ಲಾ ಜನರಿಗೆ ಒಂದೇ ರೀತಿ ಪೊರೈಕ್ಕೆ ಮಾಡಲಾಗುತ್ತದೆ. ಅಲ್ಲಿ ಯಾವ ಜಾತಿ, ಧರ್ಮ ಇದೇ ಹೇಳಿ ಎಂದು ಪ್ರಶ್ನಿಸಿದರು. ಎಲ್ಲಾ ವರ್ಗದವರು ಒಂದಾದರೆ ಮಾತ್ರ ಗ್ರಾಮಕ್ಕೆ ಕಿರ್ತಿ ಬರುತ್ತೆ ಎಂದು ತಿಳಿಸಿದರು.
ಯಾರೊ ಒಬ್ಬರು ಮಾಡುವ ಒಂದು ತಪ್ಪು ಇಡೀ ಸಮುದಾಯಕ್ಕೆ ಮಾರಕ ಆಗಬಾರದು. ಇದರಿಂದ ಗ್ರಾಮದಲ್ಲಿ ಶಾಂತಿಗೆ ಭಂಗ ಬರಬಾರದು ಎಂದು ತಿಳಿಸಿದರು.
ಹುಮನಾಬಾದ ಮತ ಕ್ಷೇತ್ರದಲ್ಲಿ, ಬವಸಣ್ಣನ ಪುಣ್ಯ ಭೂಮಿಯಲ್ಲಿ ಕೋಮು ಗಲಭೆಗೆ ಯಾರು ಅವಕಾಶ ನೀಡಬಾರದು. ಜಾತಿ ಧರ್ಮದ ಹೆಸರಲ್ಲಿ ಯಾರು ಜಗಳ ಮಾಡಬಾರದು ಎಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯತ ಉಪಾಧ್ಯಕ್ಷ ಲಕ್ಷ್ಮಿರಾವ ಬುಳ್ಳಾ, ಡಿ.ವೈ.ಎಸ್.ಪಿ ಮಹೇಶ್ವರಪ್ಪ, ಸಿಪಿಐ ಜೆ.ಎಸ್ ನ್ಯಾಮಗೌಡರ್, ಪಿ.ಎಸ್.ಐ ರವಿಕುಮಾರ ಸೇರಿದಂತೆ ಮುಸ್ಲಿ ಹಾಗೂ ದಲಿತ ಸಮುದಾಯದ ಮುಖಂಡರು ಭಾಗವಹಿಸಿದರು.
Date: 01-05-2020
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…