ಜನರ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸಬೇಕು – ಶಾಸಕ ರಾಜಶೇಖರ ಪಾಟೀಲ,

ಜನರ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸಬೇಕು – ಶಾಸಕ ರಾಜಶೇಖರ ಪಾಟೀಲ,
ಹುಮನಾಬಾದ: ದೇಶದ ಗಡಿಯಲ್ಲಿ ನಮ್ಮ ಸೈನಿಕರು ಗಡಿ ಕಾಯುತ್ತಿರುವ ಕಾರಣ ದೇಶದ ಒಳಗಿರುವ ನಾವೆಲ್ಲರೂ ಸಂತಸದಿAದ ಇದ್ದೇವೆ. ಗಡಿಯಲ್ಲಿ ಸೈನಿಕರು ಸಲ್ಲಿಸುವ ಸೇವೆಯಂತೆ ನಾವುಗಳು ಕೂಡ ನಮ್ಮ ಜವಾಬ್ದಾರಿಗಳನ್ನು ಅರೆತುಕೊಂಡು ಕೆಲಸ ಮಾಡಬೇಕು. ಅಧಿಕಾರಿಗಳು ಕೂಡ ಜನಸಾಮಾನ್ಯರ ಕೆಲಸಗಳಿಗೆ ಹೆಚ್ಚಿನ ಮಹತ್ವ ನೀಡಿ ಸೇವೆ ಸಲ್ಲಿಸಬೇಕು ಎಂದು ಶಾಸಕ ರಾಜಶೇಖರ ಪಾಟೀಲ ಹೇಳಿದರು.
ಪಟ್ಟಣದ ತಹಶೀಲ್ದಾರ ಕಚೇರಿ ಆವರಣದಲ್ಲಿ ತಾಲೂಕು ಆಡಳಿತ ವತಿಯಿಂದ ಏರ್ಪಡಿಸಿದ 74ನೇ ಸ್ವಾತಂತ್ರ್ಯ ದಿನಾಚಾರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ತಹಶೀಲ್ದಾರ ಕಚೇರಿ ಸೇರಿದಂತೆ ಸೇರಿದಂತೆ ಇತರೆ ಕಚೇರಿಗಳಲ್ಲಿ ಪಾರದರ್ಶಕ ಆಡಳಿತ ನಡೆಯಬೇಕು. ಕ್ಷೇತ್ರದ ಜನರು ಒಂದು ಕೆಲಸಕ್ಕೆ ಅನೇಕ ಬಾರಿ ಅಲ್ಲೆದಾಡಿಸುವುದನ್ನು ತಪ್ಪಿಸಬೇಕು. ಸೂಕ್ತ ಸಮಯಕ್ಕೆ ಸಾರ್ವಜನಿಕರ ಕೆಲಸ ಮಾಡಿಕೊಡಬೇಕು ಎಂದು ಸಲಹೆ ಮಾಡಿದರು.
ಕೊರೊನಾ ಸೋಂಕು ಹೆಚ್ಚಾಗಿ ಜನರು ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲಿ ಜನ ಪ್ರತಿನಿಧಿಗಳು ಜನರ ಸಂಕಷ್ಟದಲ್ಲಿ ಭಾಗಿಯಾಗಬೇಕು. ಅನೇಕ ಜನ ಪ್ರತಿನಿಧಿಗಳು ಜನರ ಕಡೆಗೆ ನೋಡದೆ ಕುಟುಂಬದೊ0ದಿಗೆ ಮನೆ ಸೇರಿಕೊಂಡರು. ಆದರೆ, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಾಮಾಣಿಕ ಕೆಲಸ ನಾನು ಮಾಡಿದ್ದೇನೆ ಎಂದು ಶಾಸಕ ಪಾಟೀಲ ಹೇಳಿದರು.
ಸೋಂಕು ಹೆಚ್ಚಾಗುತ್ತಿದರು ಕ್ಷೇತ್ರದ ವಿವಿಧಡೆ ಸಂಚರಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದೇನೆ. ಅಲ್ಲದೆ, ಹುಮನಾಬಾದ ಚಿಟಗುಪ್ಪ ಕೊರೊನಾ ಕೇಂದ್ರಗಳಿಗೆ ಭೇಟಿನೀಡಿ ರೋಗಿಗಳ ಆರೈಕೆ ಬಗ್ಗೆ ಮಾಹಿತಿ ಪಡೆದು ಗುಣಮಟ್ಟದ ಆಹಾರ ನೀಡುವಂತೆ ಸೂಚಿಸಿದ್ದೇನೆ. ಸೋಂಕು ಮಹಾಮಾರಿ ಎಂಬುವುದು ತಿಳಿದುಕೊಂಡು ಕೂಡ ಜನರ ಮಧ್ಯೆ ಉಳಿದ ಪರಿಣಾಮ ನಾನು ಸೋಂಕಿಗೆ ಸಿಲುಕಿಕೊಂಡೆ. ಸೋಂಕು ಪತ್ತೆಯಾದವರಿಗೆ ಮಾತ್ರ ಅದರ ನೋವು, ಕಷ್ಟ ಗೊತ್ತಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಯಾರು ಹತ್ತಿರಕ್ಕೆ ಬರುವುದಿಲ್ಲ. ಕಾರಣ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಮುಂದಾಗಬೇಕು ಎಂದು ಸಲಹೆ ನೀಡಿದರು.
ಇದಕ್ಕೂ ಮುನ್ನ ತಹಶೀಲ್ದಾರ ನಾಗಯ್ಯಾ ಹಿರೇಮಠ ಧ್ವಜಾರೋಹಣ ನೆರೆವೇರಿಸಿ ಮಾತನಾಡಿದರು. ಅಲ್ಲದೆ, ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಸೇವೆ ಸಲ್ಲಿಸುತ್ತಿದ ವೈದರು, ಪೊಲೀಸ್ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ಸೇರಿದಂತೆ ಇತರೆ ಅಧಿಕಾರಿಗಳನ್ನು ಕೂಡ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ ಅಧ್ಯಕ್ಷ ರಮೇಶ ಡಾಕುಳಗಿ, ಉಪಾಧ್ಯಕ್ಷೆ ಸುಗಂದಾ, ಸ್ಥಾಯಿ ಸಮಿತಿ ಅಧ್ಯಕ್ಷ ಕಂಟೆಪ್ಪ ದಾ, ಸಿಪಿಐ ಮಲ್ಲಿಕಾರ್ಜುನ ಯಾತನೂರ್, ಶರಣಬಸವೇಶ್ವರ ಭಜಂತ್ರಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಮಲ್ಲಿಕಾರ್ಜುನ ಮಾಶೆಟ್ಟಿ, ತಾಪಂ ಇಒ ವೈಜಿನಾಥ ಫುಲೇ, ಕಾಶಿನಾಥ ರೆಡ್ಡಿ, ಶಂಭುಲಿAಗ ದೇಸಾಯಿ, ಯೂಸುಫ್, ಶ್ರೀಪಾದ, ಡಾ| ನಾಗನಾಥ ಹುಲಸೂರೆ, ಡಾ| ಅಶೋಕ ಮೈಲಾರೆ, ಡಾ| ವಿಜಯಕುಮಾರ ಸೂರ್ಯವಂಶಿ, ಪುರಸಭೆ ಸದಸ್ಯರಾದ ಅಫ್ಸರ್ ಮಿಯ್ಯಾ, ಸುನೀಲ ಪಾಟೀಲ, ಎಮ್.ಎ ಬಾಸಿದ್, ಬಸವರಾಜ ಶೇರಿಕರ್ ಸೇರಿದಂತೆ ಅನೇಕರು ಇದ್ದರು.
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…

















