Home ನಿಮ್ಮ ಜಿಲ್ಲೆ ಬೀದರ ಗ್ರಾ.ಪಂ ಚುನಾವಣೆ: ಬೀದರ್ ಜಿಲ್ಲೆಯಲ್ಲಿ ಮಾತ್ರ ಇವಿಎಂ ಯಂತ್ರ ಬಳಕೆ

ಗ್ರಾ.ಪಂ ಚುನಾವಣೆ: ಬೀದರ್ ಜಿಲ್ಲೆಯಲ್ಲಿ ಮಾತ್ರ ಇವಿಎಂ ಯಂತ್ರ ಬಳಕೆ

ಗ್ರಾ.ಪಂ ಚುನಾವಣೆ: ಬೀದರ್ ಜಿಲ್ಲೆಯಲ್ಲಿ ಮಾತ್ರ ಇವಿಎಂ ಯಂತ್ರ ಬಳಕೆ.

ಬೀದರ: ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬೀದರ್ ಜಿಲ್ಲೆಯಲ್ಲಿ ಮಾತ್ರ ಇ.ವಿ.ಎಂ ಯಂತ್ರಗಳ ಮೂಲಕ ಮತದಾನ ಪ್ರಕ್ರಿಯೆಗಳು ನಡೆಯಲಿದ್ದು, ಉಳಿದಂತೆ ರಾಜ್ಯದ ಇತರೆ ಎಲ್ಲಾ ಜಿಲ್ಲೆಗಳಲ್ಲಿ ಮತ ಪೆಟ್ಟಿಗೆಗಳ ಮೂಲಕ ಮತದಾನ ಪ್ರಕ್ರಿಯೆಗಳು ನಡೆಯಲಿವೆ ಎಂದು ರಾಜ್ಯ ಚುನಾವಣಾ ಆಯೋಗ ಪ್ರಕಟೆಯಲ್ಲಿ ತಿಳಿಸಿದ್ದಾರೆ.

ಕಳೆದ ಗ್ರಾಮಪಂಚಾಯತ್ ಚುನಾವಣೆಯಲ್ಲೂ ಕೂಡ ರಾಜ್ಯದಲ್ಲಿಯೇ ಪ್ರಾಯೋಗಿಕವಾಗಿ ಬೀದರ ಜಿಲ್ಲೆಯಲ್ಲಿ ಇವಿಎಂ ಯಂತ್ರಗಳ ಮೂಲಕವೇ ಮತದಾನ ನಡೆದಿತ್ತು. ಈ ಬಾರಿಯೂ ಕೂಡ ಅದೇ ಮಾದರಿಯಲ್ಲಿ ಚುನಾವಣೆ ನಡೆಯಲಿದೆ. ಬೀದರ ಜಿಲ್ಲೆಯಲ್ಲಿ ಕೂಡ ಎರೆಡು ಹಂತದ ಚುನಾವಣೆ ನಡೆಯಲ್ಲಿದ್ದು, ಮೊದಲನೆ ಹಂತದಲ್ಲಿ ಬಸವಕಲ್ಯಾಣ, ಹೂಲಸೂರ, ಹುಮನಾಬಾದ, ಚಿಟಗುಪ್ಪ ಹಾಗೂ ಭಾಲ್ಕಿ ತಾಲೂಕುಗಳ ಆದರೆ, ಎರಡನೇ ಹಂತದಲ್ಲಿ ಬೀದರ, ಔರಾದ ಹಾಗೂ ಕಮಲನಗರ ತಾಲೂಕುಗಳಲ್ಲಿ ಚುನಾವಣೆ ನಡೆಯಲಿದೆ.

https://play.google.com/store/apps/details?id=kknewsonline.in

ಜಿಲ್ಲೆಯ ಒಟ್ಟು 8 ತಾಲೂಕಿಗಳ 178 ಗ್ರಾಮ ಪಂಚಾಯತಗಳ ಚುನಾವಣೆಯಲ್ಲಿ 1252 ಮತಗಟ್ಟೆಗಳು ಕಾರ್ಯನಿರ್ವಹಿಸಲಿವೆ. ಈ ಚುನಾವಣೆಯಲ್ಲಿ ಗ್ರಾಮೀಣ ಭಾಗದ 999001 ಮತದಾರರು ಮತದಾನದ ಹಕ್ಕು ಹೊಂದಿದ್ದು, ಈ ಪೈಕಿ ಪುರಷ 518959 ಹಾಗೂ 480023 ಮಹಿಳಾ ಮತದಾರರು ಇದ್ದಾರೆ.

ಡಾತೆ: 30-11-2020

ಹೆಚ್ಚಿನ ಸುದ್ದಿಗಾಗಿ ಓದಿ ಕಸ್ತೂರಿ ಕಿರಣ ಪತ್ರಿಕೆ 

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…