ಕೆಎಸ್ಓ ವರ್ಷಕ್ಕೆ ಒಂದು ಲಕ್ಷ ವಿದ್ಯಾರ್ಥಿಗಳ ಪ್ರವೇಶದ ಗುರಿ;ಕೆಎಸ್ಓ ಕುಲಪತಿ ಡಾ. ಶರಣಪ್ಪಾ ಹಲಸೆ
ಹೊಸದಾಗಿ 15ಕೋರ್ಸ್ ಗಳ ಪ್ರಾರಂಭಕ್ಕೆ ಸಿದ್ದತೆ
ಬೀದರ್:ನಗರದ ಕರ್ನಾಟಕ ಕಾಲೇಜ್ ನಲ್ಲಿಂದು ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿಗಳಾದ ಡಾ. ಶರಣಪ್ಪಾ ಹಲ್ಸೆಯವರು ಮಾಧ್ಯಮ ಗೋಷ್ಠಿ ನಡೆಸಿದ್ದರು.ಕೆಎಸ್ಓ ನೂತನ ಕುಲಪತಿಗಳಾಗಿ ಆಯ್ಕೆಯಾದ ಬೆನ್ನಲ್ಲೆ ಗಡಿ ಜಿಲ್ಲೆಗೆ ಭೇಟಿ ನೀಡಿ ಕೆಎಸ್ ಓ ಬೆಳವಣಿಗೆ ಬಗ್ಗೆ ಸವಿಸ್ತಾರವಾಗಿ ಮಾತನಾಡಿದ್ದರು. ಸಧ್ಯ ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ 21ಸಾವಿರ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ.ಈ ಸಂಖ್ಯೆಯನ್ನ ಒಂದು ಲಕ್ಷ ವಿದ್ಯಾರ್ಥಿಗಳಿಗೆ ಏರಿಸುವ ಬಗ್ಗೆ ಚಿಂತನೆ ನಡೆದಿದೆ.ಈ ಬಗ್ಗೆ ಭರ್ಜರಿ ಪ್ರಚಾರ ಮಾಡಲಾಗುತ್ತಿದೆ ಅಂತಾ ಹೇಳಿದ್ದರು.
ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯ ಈ ವರ್ಷ 15 ಕೊರ್ಸ್ ಗಳನ್ನ ಪ್ರಾರಂಭ ಮಾಡತ್ತಾ ಇದೆ.ಈ ವರ್ಷ ಹತ್ತು ಕೋರ್ಸ್ ಗಳು ಪ್ರಾರಂಭಿಲಸಾಗುತ್ತೆ.ಉಳಿದ ಐದು ಕೋರ್ಸ್ ಗಳು ಮೂಂದಿನ ವರ್ಷ ಪ್ರಾರಂಭವಾಗುತ್ತವೆ ಅಂತಾ ಮಾಹಿತಿ ನೀಡಿದ್ದರು.ಇನ್ನು ವಿವಿಯಲ್ಲಿ 6ಕೋಟಿ75 ಲಕ್ಷ ರೂ.ಹಣ ಜಮೆ ಇದೆ.ಇನ್ನು ಆಯಾ ಜಿಲ್ಲೆಯಲ್ಲಿ ಸ್ವಂತ ಕಟ್ಟಡ ಪ್ರಾರಂಭ ಮಾಡಲು ಸ್ಥಳ ಕೊಡಲು ಆಯಾ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಅಂತಾ ಮಾಹಿತಿ ನೀಡಿದ್ದರು.ಕೆಎಸ್ ಓ ನಲ್ಲಿ ಹೆಚ್ಚುವರಿ ಸಿಬ್ಬಂಧಿಗಳ ನಿಯುಕ್ತಿಯಾಗಿದೆ.ಪ್ರತಿ ತಿಂಗಳು ಮೂರು ಕೋಟಿ ವೇತನ ನೀಡಲಾಗುತ್ತಿದೆ.ಯಾವುದೇ ಕಾರಣಕ್ಕು ಸಿಬ್ಬಂಧಿಗಳನ್ನ ತೆಗೆಯುವುದಿಲ್ಲ ಬದಲಿಗೆ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆಯನ್ನ ಈಗಿನ 21ಸಾವಿರದಿಂದ 1ಲಕ್ಷಕ್ಕೆ ಹೆಚ್ಚಿಲಸು ಪ್ರಯತ್ನಿಸಲಾಗುವುದು ಅಂತಾ ಅವರು ಮಾಹಿತಿ ನೀಡಿದ್ದರು.
ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆಯಿಂದ ದೂರು:
ಬೀದರ್ ಪ್ರಾದೇಶಿಕ ಕೇಂದ್ರ ಸಮಯಕ್ಕೆ ಸರಿಯಾಗಿ ತೆಗೆಯದೆ ಅಲ್ಲಿನ ಸಿಬ್ಬಂಧಿಗಳಿಗೆ ಹಣ ಕೊಡದೆ ಅವರನ್ನ ಪ್ರಚಾರಕ್ಕೆ ಬಳಸಿ ಕೊಳ್ಳೋದು ಜೊತೆಗೆ ದಿನಾಲೂ ಬಸವಕಲ್ಯಾಣದಿಂದ ಬೀದರ್ ಬಂದು ಸರಿಯಾದ ಸಮಯದಲ್ಲಿ ಕಚೇರಿ ತೆರೆಯದೆ ಪ್ರವೇಶ ಬಯಸಿ ಬರೋ ವಿದ್ಯಾರ್ಥಿಗಳಿಗೆ ಸರಿಯಾದ ಮಾಹಿತಿ ನೀಡದ ಬೀದರ್ ಕೇಂದ್ರದ ಸತೀಶ ಕುಲಕರ್ಣಿ ವಿರುದ್ದ ದೂರು ನೀಡಿದ್ದರು.ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಶರಣಪ್ಪಾ ಹಲ್ಸೆಯವರಗೆ ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಶಿವಕುಮಾರ್ ತುಂಗಾ ನೇತ್ವದಲ್ಲಿ ಕ್ರಮಕ್ಕೆ ಆಗ್ರಹಿಸಿ ವಿಸಿಗೆ ಮನವಿ ಪತ್ರ ಸಲ್ಲಿಸಲಾಯಿತು. ರಾಜ್ಯದಲ್ಲಿ ಸಮಪರ್ಕ ಕೆಲ್ಸ್ ಮಾಡದ ಬೀದರ್ ಪ್ರಾದೇಶಿಕ ಕೇಂದ್ರ ಅನ್ನೋ ಕುಖ್ಯಾತಿಗೆ ಬೀದರ್ ಒಳಗಾಗಿದೆ.ದೂರಿನ ಹಿನ್ನಲೆ ಕ್ರಮಕೈಗೊಳ್ಳುವ ಆಶ್ವಾಸನೆ ವಿಸಿ ನೀಡಿದ್ದರು.
ಮಾಧ್ಯಮ ಗೋಷ್ಠಿಯಲ್ಲೆ ಖಡಕ್ ವಾರ್ನಿಂಗ್ ನೀಡಿದ ಕುಲಪತಿಗಳು ಸರಿಯಾಗಿ ಕೆಲ್ಸ್ ಮಾಡಿ ಇಲ್ಲಾ ವರ್ಗಾವಣೆ ಆಗುತ್ತೆ ಅಂತ ಹೇಳಿದ್ದರು.ಸಧ್ಯ ಬೀದರ್ ಜಿಲ್ಲೆಗೆ ಭೇಟಿ ನೀಡಿದ್ದ ಶರಣಪ್ಪಾ ಹಲ್ಸೆಯವರಿಗೆ ಬೀದರ್ ಪ್ರಾದೇಶಿಕ ಕೇಂದ್ರದ ಸಮಸ್ಯೆ ಅವರ ಗಮನಕ್ಕೆ ಬಂದಿದ್ದು ಬರೋ ದಿನದಲ್ಲಿ ಕಠಿಣ ಕ್ರಮ ಜರುಗಿಸುವ ಆಶ್ವಾಸನೆ ನೀಡಿದ್ದು ಬೀದರ್ ಪ್ರಾದೇಶಿಕ ಕೇಂದ್ರದಲ್ಲಿ ಎಲ್ಲವು ಸರಿ ಇಲ್ಲ ಅನ್ನೋದು ಇದರಿಂದ ಗೊತ್ತಾಗಿದೆ.
ಕಳೆದ ಹತ್ತು ವರ್ಷದಲ್ಲಿ ಪ್ರಥಮ ಬಾರಿಗೆ ಬೀದರ್ ಡಾ.ಶರಣಪ್ಪಾ ವಿ ಹಲ್ಸೆಯವರು ಮೈಸೂರಿನ ಪ್ರತಿಷ್ಠಿತ ಮುಕ್ತ ವಿವಿಗೆ ಕುಲಪತಿಯಾಗಿ ನಿಯೂಕ್ತಿಯಾಗಿದ್ದಕ್ಕೆ ಈ ಬಾಗದ ಗಣ್ಯರು,ಸಾಮಾಜಿಕ ಚಿಂತಕರು ಅವರನ್ನ ಅಭಿನಂದಿಸಿದ್ದಾರೆ.
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…

















