ಕಾರ್ಮಿಕ ಕಾಯ್ದೆಗಳು ಹಾಗು ಕಾರ್ಮಿಕ ಯೋಜನೆಗಳ ಬಗ್ಗೆ ಅಧಿಕಾರಿಗಳಿಗೆ ತರಬೇತಿ
ಕಾರ್ಮಿಕ ಇಲಾಖೆ
ಬೀದರ್ ಜಿಲ್ಲೆಯಲ್ಲಿ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಕಾರ್ಮಿಕ ಕಾಯ್ದೆಗಳು ಹಾಗೂ ಕಾರ್ಮಿಕ ಇಲಾಖೆ ಮತ್ತು ವಿವಿಧ ಮಂಡಳಿಗಳ ಯೋಜನೆಗಳ ಬಗ್ಗೆ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಗೌರವಾನ್ವಿತ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಆದ ಸಿದ್ರಾಮಪ್ಪಾ ಉದ್ಘಾಟಿಸಿದರು. ಡಿ.ಜಿ.ನಾಗೇಶ್ ಉಪ ಕಾರ್ಮಿಕ ಆಯುಕ್ತರು ಕಲಬುರಗಿ ಪ್ರಾದೇಶಿಕ ಹಾಗೂ ಇಎಸ್ಐ ಅಧಿಕಾರಿಗಳು ಮತ್ತು ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆಯ ಪ್ರತಿನಿಧಿಗಳು ಸಂಪನ್ಮೂಲ ಸಂಪನ್ಮೂಲ ಅಧಿಕಾರಿಯಾಗಿ ತರಬೇತಿ ನೀಡಲು ಉಪಸ್ಥಿತರಿದ್ದರು.ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ್ ಶಹಬಾದ್ ಕಾರ್ಯಕ್ರಮಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದ್ದರು, ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ರಮೇಶ್ ಕಾರ್ಮಿಕ ಕಾಯ್ದೆಗಳ ಬಗ್ಗೆ ಇಲಾಖೆ ಅಧಿಕಾರಿಗಳಿಗೆ ಹಾಗೂ ಸಿಬ್ಬಂಧಿಗಳಿಗೆ ಸಮರ್ಪಕ ಮಾಹಿ ಇದ್ದಾಗಲೆ ಮಾತ್ರ ಉತ್ತಮವಾಗಿ ಕಾರ್ಯ ನಿರ್ವಹಿಸಲು ಸಾಧ್ಯ ಅಂತಾ ಹೇಳಿದ್ದರು. ಕಾರ್ಮಿಕ ನಿರೀಕ್ಷಕರು, ಎಕ್ಸಿಕ್ಯೂಟಿವ್, ಡಿ ಇ ಓ ಗಳು ಮತ್ತು ಕಾರ್ಮಿಕ ಬಂಧುಗಳು ತರಬೇತಿಯಲ್ಲಿ ಹಾಜರಿದ್ದರು
ಕಲಬುರಗಿ: ವಿದ್ಯುತ್ ಅವಘಡಗಳಿಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳಿ
*ಮುನ್ನೆಚ್ಚರಿಕೆ ವಹಿಸಿ; ವಿದ್ಯುತ್ ಅವಘಡ ತಪ್ಪಿಸಿ* *ಮಳೆಗಾಲ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಸುರಕ್ಷತಾ …
















