ಕಾನೂನಿಗೆ ಧಕ್ಕೆ ಆದರೆ ಸೂಕ್ತ ಕ್ರಮ ; PSI ರವಿ
ಹುಮನಾಬಾದ: ಮುಂದಿನ ದಿನಗಳಲ್ಲಿ ರಾಮ ಮಂದಿರ ತೀರ್ಪು, ಟಿಪ್ಪು ಜಯಂತಿ ಹಾಗೂ ಈದ್ ಮಿಲಾದ್ ಹಬ್ಬದಲ್ಲಿ ಯಾರು ಕೂಡ ಕಾನೂನು ಉಲ್ಲಂಘನೆ ಆಗದಂತೆ ಜನರು ಜನರು ಎಚ್ಚರಿಕೆ ವಹಿಸಬೇಕು ಎಂದು ಪಿ.ವಸ್.ಐ ರವಿ ಕುಮಾರ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯ ಪ್ರಾಗಂಣದಲ್ಲಿ ಟಿಪ್ಪು ಜಯಂತಿ, ಈದ್ ಮಿಲಾದ್ ಹಾಗೂ ರಾಮ ಮಂದಿರ ತೀರ್ಪು ಹಿನ್ನೆಲೆಯಲ್ಲಿ ಕರೆದ ಪೂರ್ವ ಸಿದ್ಧತೆ ಸಭೆಯಲ್ಲಿ ಮಾತನಾಡಿದರು.
ಕಾನೂನು ಸುವ್ಯವಸ್ಥೆಗೆಧಕ್ಕೆ ತದರೆ ಸೂಕ್ತ ಕ್ರಮ ವಹಿಸಲಾಗುವುದು. ಪೂರ್ವ ಭಾವಿ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ ಎಲ್ಲರೂ ನಡೆದುಕೊಳ್ಳಬೇಕು. ಪೊಲೀಸ್ ಇಲಾಖೆಯೊಂದಿಗೆ ಜನರು ಸಹಕಾರ ನೀಡಬೇಕು ಎಂದು ತಿಳಿಸಿದರು.
ಮಲ್ಲಿಕಾರ್ಜುನ ಸೀಗಿ ಮಾತನಾಡಿ, ರಾಮ ಮಂದಿರ ವಿಷಯದಲ್ಲಿ ದೇಶದ ಎಲ್ಲಾ ಕಡೆಗಳಲ್ಲಿ ಗಲಾಟೆ ನಡೆದಿದ್ದು, ಹುಮನಾಬಾದ ಪಟ್ಟಣದಲ್ಲಿ ಯಾವುದೇ ಗಲಾಟೆಗೆ ಆಸ್ಪದ ನೀಡಿಲ್ಲ. ಇಲ್ಲಿನ ಜನರು ಪರಸ್ಪರ ಪ್ರೀತಿ ವಿಶ್ವಾಸದಿಂದ ಇದ್ದು, ಮುಂದೆ ಕೂಡ ನ್ಯಾಯಾಲಯದ ತೀರ್ಪು ಯಾರ ಕಡೆ ಬಂದರು ಪಟ್ಟಣದ ಎಲ್ಲರೂ ಏಕತೆಯಿಂದ ಇರಬೇಕು ಎಂದು ತಿಳಿಸಿದರು.
ಅಪ್ಸರ್ ಮಿಯ್ಯಾ ಮಾತನಾಡಿ, ಹಿಂದೂ ಮುಸ್ಲಿಂ ಎಂಬ ಭೇದ ಇಲ್ಲಿ ಇಲ್ಲ. ನ್ಯಾಯಾಲಯದ ಆದೇಶ ಯಾರ ಪರ ಇದ್ದರು ಕೂಡ ಪಟ್ಟಣದ ನಿವಾಸುಗಳು ಏಕತೆ ಪ್ರದರ್ಶಿಸಬೇಕು. ಯಾರೇ ಗಲಾಟೆಗೆ ಮುಂದಾದರೆ ಅವರಿಗೆ ಜನರು ಬುದ್ದಿ ಹೇಳಬೇಕು. ಸರ್ಕಾರ ಟಿಪ್ಪು ಜಯಂತಿ ಕುರಿತು ಸರ್ಕಾರಗಳು ತೆಗೆದುಕೊಳ್ಳುವ ತಿರ್ಮಾನಕ್ಕೆ ಗೌರವ ನೀಡಬೇಕು ಎಂದರು.
ಪುರಸಭೆ ಸದಸ್ಯ ಅಪ್ಸರ್ ಮಿಯ್ಯಾ, ಮಾಜಿ ಸದಸ್ಯ ಮಲ್ಲಿಕಾರ್ಜುನ ಸೀಗಿ, ಸುಭಾಷ ಆರ್ಯ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪ್ರತಿ ನಿಧಿಗಳು ಹಾಜರಿದ್ದರು.
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…

















