ಕವಿಗಳು ಹೆಚ್ಚು ಓದಬೇಕು-ಬರೆಯಬೇಕು-G.H
ಪ್ರಚಾರಕ್ಕೆ ಕವನ ಬೇಡ-ಸಮಾಜದಲ್ಲಿ ಬದಲಾವಣೆ ಆಗಬೇಕು
ಬೀದರ: ಕವಿಗಳು ಬಲಪಂಥೀಯ ಹಾಗೂ ಎಡಪಂಥೀಯದ ಬಗ್ಗೆ ಯೋಚನೆ ಮಾಡದೇ ಹೆಚ್ಚು ಹೆಚ್ಚು ಓದಿ ಕವನವನ್ನು ಬರೆಯಬೇಕು. ಸಾಹಿತ್ಯ ರಚಿಸಬೇಕು ಎಂದು ವಾರ್ತಾ ಮತ್ತು ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಗವಿಸಿದ್ದಪ್ಪಾ ಹೊಸಮನಿ ಅಭಿಪ್ರಾಯ ಪಟ್ಟರು.
ನೌಬಾದ್ನ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲಿಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಕನ್ನಡ ವಿಭಾಗದ ಸಂಯುಕ್ತಾಶ್ರಯದಲ್ಲಿ ನಡೆದ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯದಲ್ಲಿ ವಿಶೇಷವಾಗಿ ಹೈದ್ರಾಬಾದ ಕರ್ನಾಟಕ ಭಾಗದಲ್ಲಿ ಕಥೆಗಳು ಸುಲಭವಾಗಿ ಸಿಗುತ್ತವೆ. ಹಾಗಾಗಿ ಈ ಭಾಗದ ಸಾಹಿತಿಗಳು ಹೆಚ್ಚು ಬರೆಯುವಂತಾಗಬೇಕು ಎಂದರು.
ಹಿರಿಯ ಸಾಹಿತಿ ರಜಿಯಾ ಬಳಬಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕವನಗಳು ಆಂತರಿಕವಾಗಿ ಬರುವಂತಹವು, ಅವುಗಳನ್ನು ಪ್ರಚಾರಕ್ಕಾಗಿ ಉಪಯೋಗಿಸಬಾರದು. ಕವಿಗಳು ಹೆಚ್ಚು ಓದಬೇಕು, ಬರೆಯಬೇಕು. ಹಣ್ಣುಗಳು ಎಷ್ಟು ರುಚಿಕರವಾಗಿರುತ್ತವೆಯೋ ಅದರಂತೆ ಕವಿಗಳು ಬರೆದ ಕವನಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತೆ ಪರಿಪಕ್ವತೆ ಹೊಂದಿರಬೇಕು ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ ಪ್ರಾಸ್ತಾವಿಕ ಮಾತನಾಡಿ, ಯುವ ಕಲಾವಿದರಲ್ಲಿರುವ ಕವನ ವಾಚನ ಕಲೆಯನ್ನು ಉಳಿಸಿ ಬೆಳೆಸಿ, ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆ ನೀಡುವ ಉದ್ದೇಶದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕವಿಗೋಷ್ಠಿಯನ್ನು ಆಯೋಜಿಸಿದೆ ಎಂದು ಹೇಳಿದರು.
ಶಂಭುಲಿಂಗ ವಾಲ್ದೊಡ್ಡಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಸುರೇಶ ಚನ್ನಶೆಟ್ಟಿ, ಕರುನಾಡು ಸಾಹಿತ್ಯ ಹಾಗೂ ಸಾಂಸ್ಕೃತಿಕ ವೇದಿಕೆಯ ಗೌರವಾಧ್ಯಕ್ಷರಾದ ಸಂಜೀವಕುಮಾರ ಅತಿವಾಳೆ ಮಾತನಾಡಿದರು.
ಕವಿಗೋಷ್ಠಿಯಲ್ಲಿ ಡಾ| ಮಲ್ಲಿಕಾರ್ಜನ ಆಮ್ಣೆ, ರುಕ್ಮೊÃದ್ದಿÃನ್ ಇಸ್ಲಾಂಪೂರ, ಡಾ| ಮಹಾನಂದಾ ಮಡಕಿ, ಸಿದ್ದಮ್ಮ ಬಸವಣ್ಣೊÃರ, ನಾಗಶೆಟ್ಟಿ ಪಾಟೀಲ್ ಗಾದಗಿ, ಬಾಲಾಜಿ ಕುಂಬಾರ, ಆತ್ಮನಂದ ಬಂಬುಳಗಿ, ರವಿ ಜಾಂಪಾಡೆ, ಓಂಪ್ರಕಾಶ ದಡ್ಡೆ, ಬೇಬಿ ಶೇಕ್, ಸುನೀತಾ ಮೇತ್ರೆ, ಸುರೇಖಾ ಬೆಳಕುಣೆ, ಪೂಜಾ ಪಟ್ನೆ ಅವರು ಕವನಗಳನ್ನು ವಾಚಿಸಿದರು. ಹಿರಿಯ ಗಾಯಕರಾದ ದೀಲಿಪ ಕಾಡವಾದ ಅವರು ಸುಗಮ ಸಂಗೀತ, ನಾಡಗೀತೆಯನ್ನು ಹಾಡಿದರು. ಸಾಹಿತಿಗಳು, ಕಲಾವಿದರು, ವಿಚಾರವಾದಿಗಳು, ಕಾಲೇಜು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…


















