Home ನಿಮ್ಮ ಜಿಲ್ಲೆ ಬೀದರ ಕರ್ತವ್ಯಲೋಪ ಎಸಗಿದರೆ ಕಠಿಣ ಕ್ರಮ – ನಿರ್ದೇಶಕ ವರ್ಧನ್

ಕರ್ತವ್ಯಲೋಪ ಎಸಗಿದರೆ ಕಠಿಣ ಕ್ರಮ – ನಿರ್ದೇಶಕ ವರ್ಧನ್

ಕರ್ತವ್ಯಲೋಪ ಎಸಗಿದರೆ ಕಠಿಣ ಕ್ರಮ – ನಿರ್ದೇಶಕ ವರ್ಧನ್

ಹುಮನಾಬಾದ: ಪ್ರಸಕ್ತ ಸಾಲಿನಲ್ಲಿ ಶಾಲೆಗಳ ಮಾನ್ಯತೆ ನವೀಕರಣ ಮಾಡುವಲ್ಲಿ ಇಲ್ಲಿನ ಶಿಕ್ಷಣ ಇಲಾಖೆ ಯಾವುದೇ ಭ್ರಷ್ಟಾಚಾರ ನಡೆದರೆ, ಕರ್ತವ್ಯಲೋಪ ಎಸಗಿದರೆ ಕಠಿಣ ಕ್ರಮ ಜರುಗಿಸುವುದಾಗಿ ನಿರ್ದೇಶಕ ಡಾ| ಬಿ.ಕೆ.ಎಸ್ ವರ್ಧನ್ ಹೇಳಿದರು.

ಶನಿವಾರ ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಭೇಟಿ ನೀಡಿ ಸುದ್ದಿಗಾರರ ವಿವಿಧ ಪ್ರಶ್ನೆಗಳಿಗೆ ಉತ್ತಿಸಿದ ಅವರು, ಶಾಲೆಗಳ ಮಾನ್ಯತೆಗೆ ಸಂಬAಧಿಸಿದAತೆ ಅಧಿಕಾರಿಗಳು, ಇಲಾಖೆಯ ಸಿಬ್ಬಂದಿಗಳು ಕರ್ತವ್ಯಲೋಪ ಎಸಗಿರುವ ಮಾಹಿತಿ ಕೇಳಿಬಂದರೆ, ಅಂತಹ ಶಾಲೆಗಳ ಕಡತಗಳು ಕಚೇರಿಗೆ ತರಿಸಿ ಮರು ಪರಿಶೀಲನೆ ನಡೆಸಲಾಗುವುದು. ಕ್ಷೇತ್ರ ಶಿಕ್ಷಣಾಧಿಕಾರಿಗಳು ಖುದ್ದು ವಿವಿಧ ಶಾಲೆಗಳಿಗೆ ಭೇಟಿನೀಡಿ ಆಯಾ ಶಾಲೆಗಳಲ್ಲಿನ ಎಲ್ಲಾ ಮೂಲಸೌಕರ್ಯ ಸೇರಿದಂತೆ ಸರ್ಕಾರದ ನಿಯಮಗಳಂತೆ ಪರಿಶೀಲನೆ ನಡೆಸಿ ವರದಿ ನೀಡಬೇಕು ಎಂದು ತಿಳಿಸಲಾಗಿದೆ ಎಮದು ಹೇಳಿದರು.

ಶಾಲಾ ಆರಂಭದಲ್ಲಿ ಇಲಾಖೆಗೆ ನೀಡಿದ ವಿವಿಧ ದಾಖಲೆಗಳಂತೆ, ಶಾಲಾ ಆರಂಭಕ್ಕೆ ಸೂಚಿಸಿದ ಸ್ಥಳ ಸೇರಿದಂತೆ ಇತರೆ ಯಾವುದೇ ಬದಲಾವಣೆಗಳ ಕುರಿತು ಇಲಾಖೆಯಿಂದ ಕಡ್ಡಾಯವಾಗಿ ಪರವಾನಗಿ ಪಡೆಯಬೇಕು. ಯಾವ ಶಾಲೆಗಳು ಕಾನೂನು ಮೀರಿದರೆ ಕೂಡಲೇ ಅಧಿಕಾರಿಗಳು ಅಂತಹ ಶಾಲೆಗಳಿಗೆ ನೋಟಿಸ್ ಜಾರಿ ಮಾಡಬೇಕು. ಸೂಕ್ತ ಉತ್ತರ ಬರದ ಸಮಯದಲ್ಲಿ ಡಿಡಿಪಿಐ ಮೂಲಕ ಇನ್ನೋಂದ ನೋಟಿಸ್ ನೀಡಬೇಕು ಎಂದು ಸ್ಥಳದಲ್ಲಿದ ಅಧಿಕಾರಿಗೆ ತಿಳಿಸಿದ ಅವರು, ನಿಯಮ ಪಾಲಿಸದ ಶಾಲೆಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಹೇಳಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಈಗಾಗಲೇ 13 ಶಾಲೆಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಆರ್.ಟಿ.ಇ ಯೋಜನೆ: ಅಡಿಯಲ್ಲಿ ಶಿಕ್ಷಣ ನೀಡುತ್ತಿರುವ ಶಿಕ್ಷಣ ಸಂಸ್ಥೆಗಳು ಯೋಜನೆಯ ನಿಯಮಗಳು ಪಾಲನೆ ಮಾಡದಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಆರ್.ಟಿ.ಇ ಯೋಜನೆ ಅಡಿಯಲ್ಲಿ ಖಾಸಗಿ ಶಾಲೆಗಳಿಗೆ ಸರ್ಕಾದಿಂದ ನಿಗದಿತ ಅನುದಾನ ನೀಡಲಾಗುತ್ತಿದೆ. ಸ್ಥಳಿಯ ಅಧಿಕಾರಿಗಳು ಅಂತಹ ಶಾಲೆಗಳಿಗೆ ಖುದ್ದು ಭೇಟಿನೀಡಿ ನಿಯಮ ಅನುಸಾರ ಇರಬೇಕಾದ ಎಲ್ಲಾ ಸೌಲಭ್ಯ ಹಾಗೂ ಸೌಕರ್ಯಗಳ ಕುರಿತು ಪರಿಶೀಲನೆ ನಡೆಸಿ ವರದಿ ಪಡೆದುಕೊಳ್ಳಬೇಕು. ಸಮಸ್ಯೆ ಇರುವ ಶಾಲೆಗಳ ಪಟ್ಟಿ ತಯಾರಿಸಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಬೇಕು. ಸರ್ಕಾರದ ನಿಯಮ ಪಾಲಿಸದ ಶಾಲೆಗಳಿಗೆ ಕೂಡಲೇ ನೋಟಿಸ್ ಜಾರಿ ಮಾಡಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು.

 

Date: 19-12-2021 :

Main

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…