ಅಕ್ರಮ ಮದ್ಯ ಮಾರಾಟ – ಎರೆಡು ಪ್ರಕರಣ ದಾಖಲು.
ಕಹುಮನಾಬಾದ: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ತಾಲೂಕಿನ ಎರಡು ಕಡೆ ದಾಳಿ ನಡೆಸಿದ ಪೊಲೀಸರು ಭಾರೀ ಪ್ರಮಾಣದ ಮದ್ಯ ಜಪ್ತಿ ಮಾಡಿದ್ದಾರೆ.
ಹಳ್ಳಿಖೇಡ ಬಿ ಪೊಲೀಸ್ ಠಾಣೆ ವ್ಯಾಪ್ತಿಯ ದುಬಲಗುಂಡಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟದ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಪಿ.ಎಸ್.ಐ ಮಹಾತೇಶ ಲೂಂಬಿ ನೇತೃತ್ವದಲ್ಲಿ ದಾಳಿ ನಡೆಸಿ 2.41 ಲಕ್ಷ ಮೌಲ್ಯದ ಮದ್ಯ ಜಪ್ತಿ ಮಾಡಿದ್ದಾರೆ. ಅಲ್ಲದೆ ಮದ್ಯ ಮಾರಾಟ ಮಾಡಿದ 1.17 ಲಕ್ಷ ನಗದು ಹಾಗೂ ಎರೆಡು ಲಕ್ಷ ಮೌಲ್ಯದ ಟಾಟಾ ಎಸ್ ವಾಹನ ಜಪ್ತಿಮಾಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ಡಿಎಲ್ ನಾಗೇಶ, ಡಿ.ವೈ.ಎಸ್.ಪಿ ಮಹೇಶ್ವರಪ್ಪ, ಸಿಪಿಐ ಜೆ.ಎಸ್ ನ್ಯಾಮಗೌಡರ್ ಸೂಕ್ತ ಮಾರ್ಗದರ್ಶನದಲ್ಲಿ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ತಾಲೂಕಿನ ಘಾಟಬೋರಳ ಗ್ರಾಮದಲ್ಲಿ ಕೂಡ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರಿಗೆ ಹುಮನಾಬಾದ ಪೊಲೀಸ್ ರು ದಾಳಿ ನಡೆಸಿದ್ದು ಸುಮಾರು 12 ಸಾವಿರ ಮೌಲ್ಯದ ಮದ್ಯ ಜಪ್ತಿಮಾಡಿದ್ದಾರೆ.
ದಾಳಿಯಲ್ಲಿ ಹಳ್ಳಿಖೇಡ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಘನಶ್ಯಾಮ, ಮಲ್ಲಯ್ಯಾ ಸ್ವಾಮಿ, ವಿಶ್ವನಾಥ, ಶಿವಶರಣ, ಮಲ್ಲಿನಾಥ, ಬಡ್ಡೆಪ್ಪಾ, ಸುರೇಶ ಇದ್ದರು
Date:24-04-2020
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…