ಮೈಸೂರು ದಸರಾ ‘ಪ್ರಧಾನ ಮಂತ್ರಿ ಫಸಲ್ ಬಿಮಾ’ ಸ್ತಬ್ಧಚಿತ್ರ
ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದಲ್ಲಿ ಈ ವರ್ಷ ಬೀದರ ಜಿಲ್ಲೆಯಿಂದ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ‘ಪ್ರಧಾನ ಮಂತ್ರಿ ಫಸಲ್ ಬಿಮಾ’ ಯೋಜನೆಯ ಪರಿಕಲ್ಪನೆಯ ಸ್ತಬ್ಧಚಿತ್ರ (ಟ್ಯಾಬ್ಲೊ) ಪ್ರದರ್ಶನಗೊಳ್ಳಲಿದೆ.
ಕಳೆದ ೨೦೧೬-೧೭ನೇ ಸಾಲಿನಲ್ಲಿ ಬೀದರ ಜಿಲ್ಲೆಯಲ್ಲಿ ಅತಿವೃಷ್ಟಿ, ಅನಾವೃಷ್ಟಿ ಯಿಂದ ಜಿಲ್ಲೆಯ ರೈತರು ಕಂಗಾಲು ಆಗಿದ್ದರು. ಹೊಲದಲ್ಲಿ ಬೆಳೆದ ಬೆಳೆಗಳು ನಷ್ಟ ಅನುಭವಿಸಿದ ರೈತರು ಸರ್ಕಾರದ ನೇರವಿಗಾಗಿ ಕಾಯುತ್ತಿರುವ ಸಂದರ್ಭದಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಿಂದ ಈ ಭಾಗದ ಲಕ್ಷಕ್ಕೂ ಅಧಿಕ ರೈತರಿಗೆ ಲಾಭ ಬಂದಿದೆ. ಸಂಕಷ್ಟದ ಸಮಯಕ್ಕೆ ಬಂದ ಹಣದಿಂದ ರೈತರು ಹುರುಪಿನಿಂದ ಮತ್ತೆ ಕೃಷಿ ಕಡೆ ಮುಖ ಮಾಡುವಂತೆ ಕೂಡ ಮಾಡಿತ್ತು.
ಫಸಲ್ ಬಿಮಾ ಯೋಜನೆ ಅಡಿಯಲ್ಲಿ ಬೆಳೆ ವಿಮೆ ಮಾಡಿಸಿದ ರೈತರಿಗೆ ಸೂಕ್ರ ಬೆಳೆ ವಿಮೆ ಪರಿಹಾರ ಪಡೆದುಯುವ ಮೂಲಕ ದೇಶದಲ್ಲಿ ಬೀದರ ಜಿಲ್ಲೆ ಪ್ರಥಮ ಎಂಬ ಹೆಗ್ಗಳಿಕ್ಕೆಗೂ ಕೂಡ ಪಾತ್ರವಾಗಿತ್ತು. ಈ ಹಿನ್ನೆಲೆಯಲ್ಲಿ ೨೦೧೯-೨೦ನೇ ಸಾಲಿನ ಮೈಸೂರು ದಸರಾ ಉತ್ಸವದಲ್ಲಿ ಬೀದರ್ ಜಿಲ್ಲೆಯಿಂದ ‘ಫಸಲ್ ಬಿಮಾ’ ಯೋಜನೆ ಕುರಿತು ಸ್ತಬ್ಧಚಿತ್ರ ಪ್ರದರ್ಶನಗೊಳ್ಳಲಿದೆ. ಅಲ್ಲದೆ, ಬೆಳೆ ವಿಮೆ ಕುರಿತು ಉತ್ಸವದಲ್ಲಿ ಜನರ ಗಮನ ಸೇಳೆಯುವ ಮೂಲಕ ಹೆಚ್ಚಿನ ರೈತರು ಬೆಳೆ ವಿಮೆ ಯೋಜನೆಯೊಂದಿಗೆ ಸಂಪರ್ಕ ಸಾಧಿಸುವ ನಿಟ್ಟಿನಲ್ಲಿ ಜನ ಜಾಗೃತಿ ಮೂಡಿಸುವ ಕಾರ್ಯ ಕೂಡ ನಡೆಯಲ್ಲಿದೆ.
2016-17ನೇ ಸಾಲಿನಲ್ಲಿ 150 ಕೋಟಿ ಮೊತ್ತದ ಬೆಳೆವಿಮೆ ಪಡೆಯುವ ಮೂಲಕ ಅತಿ ಹೆಚ್ಚು ಪರಿಹಾರ ಪಡೆದ ದೇಶದ ಮೊದಲ ಜಿಲ್ಲೆ ಎಂದು ಗುರುತಿಸಿಕೊಂಡಿತ್ತು. ೨೦೧೭-೧೮ನೇ ಸಾಲಿನಲ್ಲಿ ೬೪ ಕೋಟಿ, ೨೦೧೮ರಲ್ಲಿ ಮಳೆ ಕೊರತೆ ಹಿನ್ನೆಲೆಯಲ್ಲಿ ಬೆಳೆ ಹಾನಿ ಸಂಭವಿಸಿದ ವಿಮೆ ಮಾಡಿಸಿದ ರೈತರಿಗೆ ೧೨೫ ಕೋಟಿ ವಿಮಾ ಪರಿಹಾರ ಜಿಲ್ಲೆಗೆ ಬಿಡುಗಡೆಗೊಂಡಿದ್ದು, ಜಿಲ್ಲೆಯ ರೈತರು ಫಲಸ ಬಿಮಾ ಯೋಜನೆಗೆ ಹೆಚ್ಚಿನ ಮಹತ್ವ ನೀಡುತ್ತಿರುವ ಹಿನ್ನೆಲೆಯಲ್ಲಿ ದಸರಾ ಉತ್ಸವದಲ್ಲಿ ಬೆಳೆ ವಿಮೆ ಕುರಿತು ಸ್ತಬ್ಧಚಿತ್ರ ನಿರ್ಮಾಣಕ್ಕೆ ಅನುಮೊಂದನೆ ಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇಂದಿಗೂ ನಡೆಯದ ಜಾತ್ರಾ ಪೂರ್ವಭಾವಿ ಸಭೆ
ಇಂದಿಗೂ ನಡೆಯದ ಜಾತ್ರಾ ಪೂರ್ವಭಾವಿ ಸಭೆ ಸಭೆಯ ಅಧ್ಯಕ್ಷರ ನೇಮಕ ಕುರಿತು ಗೊಂದಲ ಸೃಷ್ಟಿ – ಅಧಿಕಾರಿಗಳು ಹೈರಾ…


















