#Humnabad : ಕಾರ್ಯಕ್ರಮಕ್ಕೆ ಬಿಜೆಪಿ ಪಕ್ಷದವರನ್ನು ಕೇಳಿ ಬರಬೇಕಾ?
ಚಿಟಗುಪ್ಪದಲ್ಲಿ ಮಾಜಿ ಸಚಿವ ರಾಜಶೇಖರ ಪಾಟೀಲ ಪ್ರಶ್ನೆ.
ಕಾರ್ಯಕ್ರಮಕ್ಕೆ ಬಿಜೆಪಿ ಪಕ್ಷದವರನ್ನು ಕೇಳಿ ಬರಬೇಕಾ: ಮಾಜಿ ಸಚಿವ ರಾಜಶೇಖರ ಪಾಟೀಲ
ಹುಮನಾಬಾದ: ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಕೊಠಡಿ ಉದ್ಘಾಟನೆ ಸಮಾರಂಭದಲ್ಲಿ ಯಾವುದೇ ರಾಜಕೀಯ ಮಾಡುತ್ತಿಲ್ಲ. ಕಾಂಗ್ರೆಸ್ ಪಕ್ಷದ ಅಧ್ಯಕ್ಷ-ಉಪಾಧ್ಯಕ್ಷರ ಕೊಠಡಿ ಉದ್ಘಾಟನೆಗೆ ನನ್ನಗೂ ಸೇರಿದಂತೆ ಅನೇಕರಿಗೆ ಆಹ್ವಾನಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಿಜೆಪಿ ಪಕ್ಷದವರಿಗೆ ಕೇಳಿ ಬರಬೇಕಾ ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.
ಚಿಟಗುಪ್ಪ ಪಟ್ಟಣದ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಕೊಠಡಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಇದು ಸರ್ಕಾರಿ ಕಾರ್ಯಕ್ರಮ ಅಲ್ಲ, ಬದಲಿಗೆ ಅಧ್ಯಕ್ಷ-ಉಪಾಧ್ಯಕ್ಷರಿಗೆ ಕೊಠಡಿ ಉದ್ಘಾಟನೆ ವಯಕ್ತಿಕ ಕಾರ್ಯಕ್ರಮವಾಗಿದೆ. ಪುರಸಭೆ ಆವರಣದಲ್ಲಿ ಯಾವುದೇ ರಾಜಕೀಯ ಕಾರ್ಯಕ್ರಮ ಮಾಡುತ್ತಿಲ್ಲ, ಯಾವ ರಾಜಕೀಯ ಪಕ್ಷದ ಧ್ವಜ ಹಾಕಿಲ್ಲ ಎಂದು ಸ್ಪಷ್ಟಪಡಿಸಿದರು. ಚಿಟಗುಪ್ಪ ತಾಲೂಕು ಕೇಂದ್ರ ಮಾಡಬೇಕು ಎಂದು ಶ್ರಮಿಸುತ್ತಿರುವ ಸಂದರ್ಭದಲ್ಲಿ ಬಿಜೆಪಿ ಪಕ್ಷದವರು ಮನ್ನಾಏಖೇಳ್ಳಿ ತಾಲೂಕು ಕೇಂದ್ರ ಆಗಬೇಕು ಎಂದಿದರು. ತಾಲೂಕು ಕೇಂದ್ರ ಆದ ನಂತರ ನಾನು ಅನೇಕ ಅಭಿವೃದ್ಧಿ ಕೆಲಸಗಳು ಇಲ್ಲಿ ಮಾಡಿದ್ದೇನೆ ಎಂದು ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ವಿವರಿಸಿದರು.
ನೂತನ ಅಧ್ಯಕ್ಷ ಉಪಾಧ್ಯಕ್ಷರು ಎಲ್ಲಾ ಪಕ್ಷದ ಸದಸ್ಯರನ್ನು ಸಮನಾಗಿ ನೋಡುವ ಮೂಲಕ ಎಲ್ಲರೂ ಸೇರಿ ಪಟ್ಟಣದ ಅಭಿವೃದ್ದಿಗೆ ಮುಂದಾಗಬೇಕು. ಪಟ್ಟಣದ ಜನರು ಶುದ್ಧ ಕುಡಿಯುವ ನೀರು, ಸ್ವಚ್ಛತೆ ಹಾಗೂ ಮೂಲ ಭೂತ ಸೌಕರ್ಯಗಳು ಮಾತ್ರ ಕೇಳುತ್ತಾರೆ. ಎಲ್ಲರೂ ಕೂಡಿಕೊಂಡು ಪಟ್ಟಣದ ಕುಂದುಕೊರತೆಗಳು ಅರೆತ್ತುಕೊಂಡು ಸೂಕ್ತ ಕ್ರೀಯಾ ಯೋಜನೆಗಳು ಮಾಡಿ ಜನರ ನಿರೀಕ್ಷೆಯಂತೆ ಕೆಲಸ ಮಾಡಬೇಕು. ಯಾವುದೇ ಸರಕಾರದ ಸಹಕಾರ ಬೇಕಾದರಲ್ಲಿ ಜಿಲ್ಲೆಯಲ್ಲಿ ಇಬ್ಬರು ಸಚಿವರಿದ್ದು, ಇಲ್ಲಿನ ಸಮಸ್ಯೆಗೆ ಸೂಕ್ತ ಸ್ಪಂದಿಸುವAತೆ ಸಚಿವರ ಗಮನಕ್ಕೆ ತರುತ್ತೇನೆ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಾ| ಚಂದ್ರಶೇಖರ ಪಾಟೀಲ, ಭೀಮರಾವ ಪಾಟೀಲ, ಅಭಿಷೇಕ್ ಪಾಟೀಲ ಸೇರಿದಂತೆ ಅನೇಕ ಮುಖಂಡರು ಇದ್ದರು.
ಹೆಚ್ಚಿನ ಸುದ್ದಿಗಳಿಗಾಗಿ ಓದಿ : ಕಸ್ತೂರಿಕಿರಣ : Date: 08-10-2024 :
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…