DCC BANK-ಮೊಬೈಲ್ ಎಟಿಎಂ ವ್ಯಾನ್‌ಗೆ ಚಾಲನೆ
ಮನೆ ಬಾಗಿಲಿಗೆ ಹಣಕಾಸು ಸೇವೆ
ಬೀದರ: ನಗರದ ಡಿಸಿಸಿ ಬ್ಯಾಂಕ್ ಪ್ರಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಡಿಸಿಸಿ ಬ್ಯಾಂಕ್‌ನ ಎಟಿಎಂ ಹಾಗೂ ಮೊಬೈಲ್ ಎಟಿಎಂ ವ್ಯಾನ್‌ಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ, ಕಳೆದ ವರ್ಷ ಡಿಸಿಸಿ ಬ್ಯಾಂಕ್ ಎಟಿಎಂ ಶುರು ಮಾಡುವ ಭರವಸೆ ನೀಡಿದ್ದೆ. ಈಗ ಅದು ಕಾರ್ಯರೂಪಕ್ಕೆ ಬಂದಿದೆ. ಇದರ ಜತೆಗೆ ರೈತರ ಮನೆ ಬಾಗಿಲಿಗೆ ಹಣಕಾಸು ಸೇವೆ ಒದಗಿಸುವ ಮೊಬೈಲ್ ಎಟಿಎಂ ಅನ್ನೂ ಆರಂಭಿಸಲಾಗಿದೆ. ಮೊಬೈಲ್ ವ್ಯಾನ್ ಹಳ್ಳಿ ಹಳ್ಳಿಗಳಿಗೆ ಭೇಟಿ ನೀಡಲಿದೆ. ರೈತರು ತಾವಿರುವ ಸ್ಥಳದಲ್ಲಿಯೇ ಹಣಕಾಸು ವ್ಯವಹಾರ ನಡೆಸಬಹುದಾಗಿದೆ ಎಂದು ತಿಳಿಸಿದರು.
ಗುರುಪಾದಪ್ಪ ನಾಗಮಾರಪಳ್ಳಿ ಸೂಪರ್ ಸ್ಪೇಷಾಲಿಟಿ ಸಹಕಾರ ಆಸ್ಪತ್ರೆಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಮಾತನಾಡಿ, ನನ್ನ ತಂದೆ ಗುರುಪಾದಪ್ಪ ನಾಗಮಾರಪಳ್ಳಿ ಅವರು 13 ಮಹಿಳೆಯರಿಂದ ಸ್ವಸಹಾಯ ಸಂಘ ಆರಂಭಿಸಿದ್ದರು. ಈಗ ಸ್ವಸಹಾಯ ಸಂಘಗಳಲ್ಲಿ ಸುಮಾರು 4 ಲಕ್ಷ ಸದಸ್ಯರಿದ್ದಾರೆ. ಸಂಘಗಳ ಮೂಲಕ ಮಹಿಳೆಯರು ತಮ್ಮ ಆರ್ಥಿಕ ಸ್ಥಿತಿಯನ್ನು ಎತ್ತರಿಸಿಕೊಂಡಿದ್ದಾರೆ ಎಂದು ಹೇಳಿದ ಅವರು, ನಾಗಮಾರಪಳ್ಳಿ ಪರಿವಾರ ತನ್ನ ಜನ ಸೇವೆಯನ್ನು ಮುಂದುವರಿಸಲಿದೆ. ಸಚಿವರು, ಸಂಸದರ ಸಹಕಾರದೊಂದಿಗೆ ಬೀದರ್ ಕ್ಷೇತ್ರದ ಅಭಿವೃದ್ಧಿಗೆ ಎಲ್ಲ ಪ್ರಯತ್ನ ನಡೆಸುತ್ತಿದ್ದೇನೆ ಎಂದು ತಿಳಿಸಿದರು.
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…

















