ರಾಜ್ಯ ಸುದ್ದಿ
ಜ.2ರಂದು ತುಮಕೂರು ಜಿಲ್ಲೆಗೆ ಪ್ರಧಾನಿ ಮೋದಿ
ಹಾಸನ: ತುಮಕೂರು ಜಿಲ್ಲೆಯಲ್ಲಿ ಜನವರಿ 2 ರಂದು ನಡೆಯುವ ಕರ್ಮಣ್ಯ ಪ್ರಶಸ್ತಿ ಹಾಗೂ ಕಿಸಾನ್ ಸಮ್ಮಾನ್ ಕಾರ್ಯಕ್ರಮಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಮೀಸುತ್ತಿರುವ ಕುರಿತು ಕಾನೂನು, ಸಂಸದೀಯ ವ್ಯವಹಾರ, ಸಣ್ಣ ನೀರಾವರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ. ಮಾಧುಸ್ವಾಮಿ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜನವರಿ 2 ರಂದು ನಡೆಯುವ ಕಿಸಾನ್ ಸಮ್ಮಾನ್ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ ರೈತ ಪ್ರತಿನಿಧಿಗಳನ್ನು ಕಳುಹಿಸುವ ಕುರಿತು ಪೂರ್ವಭಾವಿ ಸಭೆ ನಡೆಸಿದ ಸಚಿವರು…
Read More »ಸೋಮವಾರ ಬಜೆಟ್ ಅಧಿವೇಶನ ದಿನಾಂಕ ತೀರ್ಮಾನ: ಮುಖ್ಯಮಂತ್ರಿ
ಕಾರವಾರ: ಬಜೆಟ್ ಅಧಿವೇಶನ ದಿನಾಂಕ ನಿಗದಿ ಮಾಡುವ ನಿಟ್ಟಿನಲ್ಲಿ ಬರುವ ಸೋಮವಾರ ಬೆಂಗಳೂರಿನಲ್ಲಿ ಸಚಿವ ಸಂಪುಟದ ಸಭೆ ಕರೆಯಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಹೊನ್ನಾವರ ತಾಲೂಕು ಮಂಕಿಯಲ್ಲಿ ಹಮ್ಮಿಕೊಳ್ಳಲಾದ ರಾಮಕ್ಷತ್ರಿಯ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಸೋಮವಾರ ಬೆಂಗಳೂರಿನಲ್ಲಿ ಸಚಿವ ಸಂಪುಟ ಸಭೆ ಕರೆಯಲಾಗಿದ್ದು , ಮುಂದಿನ ಬಜೆಟ್ ಅಧಿವೇಶನದ ದಿನಾಂಕ ನಿಗದಿ, ಸರ್ಕಾರದ ಯೋಜನೆಗಳು ಹಾಗೂ ರಾಜ್ಯಪಾಲರ ಭಾಷಣದ ಕುರಿತು ಚರ್ಚಿಸಲಾಗುವುದು ಎಂದು…
Read More »ಶಾಲೆಗಳ ಆಸ್ತಿ ಶಾಲೆಗಳ ಹೆಸರಿಗೆ-ಸಚಿವ ಸುರೇಶ್ ಕುಮಾರ್
ಶಿವಮೊಗ್ಗ: ಸರಕಾರಿ ಶಾಲೆಗಳ ಆಸ್ತಿಪಾಸ್ತಿಗಳನ್ನು ಆಯಾ ಶಾಲೆಗಳ ಹೆಸರಿಗೆ ನೋಂದಣಿ ಮಾಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕೆ. ಸುರೇಶ್ ಕುಮಾರ್ ತಿಳಿಸಿದರು. ಶನಿವಾರ ಸಾಗರ ತಾಲೂಕಿನ ಚದರವಳ್ಳಿ ಗ್ರಾಮದಲ್ಲಿ ಸರಕಾರಿ ಪ್ರಾಥಮಿಕ ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಖಾಸಗಿ ಶಾಲೆಗಳ ಆಕರ್ಷಣೆ ಕಡಿಮೆ ಮಾಡಿ ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುವಂತಹ ವಾತಾವರಣ ಸೃಷ್ಟಿಸುವ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಶಾಲೆಗಳ ದುರಸ್ತಿಗೆ ವಿಶೇಷ…
Read More »ಬೀದರ-ಮಕ್ಕಳನ್ನು ತಿಪ್ಪೆಗುಂಡಿಯಲ್ಲಿ ಹೂತಿಟ್ಟು ಗ್ರಹಣ ಆಚರಣೆ..
ಬೀದರ: ಗುರುವಾರ ಸಂಭವಿಸಿದ ಕಂಕಣ ಸೂರ್ಯಗ್ರಹಣದ ಸಂದರ್ಭದಲ್ಲಿ ಹುಮನಾಬಾದ ತಾಲೂಕಿನ ಗ್ರಾಮವೊಂದರಲ್ಲಿ ಐದು ವಿಕಲಚೇತನ ಮಕ್ಕಳನ್ನು ತಿಪ್ಪೆಗುಂಡಿಯಲ್ಲಿ ಹೂತ್ತಿಟ ಘಟನೆ ನಡೆದಿದ್ದು, ಆಧುನಿಕ ಭಾರತದಲ್ಲಿ ಇಂದಿಗೂ ಇಂತಹ ಆಚರಣೆಗಳು ನಡೆಯುತ್ತಿವೆ. ಗುರುವಾರ ಅಪರೂಪದ ಕಂಕಣ ಸೂರ್ಯಗ್ರಹಣ ಸಂಭಿಸುತ್ತಿರುವುದನ್ನು ತಿಳಿದ ಗ್ರಾಮಸ್ಥರು ವಿವಿಧ ಸಿದ್ದತೆಗಳುಮಾಡಿಕೊಂಡು ವಿಕಲಚೇತನ ಮಕ್ಕಳನ್ನು ಮಣ್ಣಿನಲ್ಲಿ ಹೂತ್ತಿಟ್ಟರೆ ಅಂಗವೈಕಲ್ಯ ಸರಿಯಾಗುತ್ತದೆ ಎಂಬ ನಂಬಿಕೆ ಹಿನ್ನೆಲೆಯಲ್ಲಿ ಗ್ರಹಣದ ಸಂದರ್ಭದಲ್ಲಿ ಈ ಆಚರಣೆ ಮಾಡಲಾಗಿದೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಪುರಾತನ…
Read More »ರಾಜಕಾರಣಿಗಳ ಕಿತ್ತಾಟಕ್ಕೆ ಅಭಿವೃದ್ಧಿ ಕುಂಠಿತ..!
ದುರ್ಯೋಧನ ಹೂಗಾರ (ಕಸ್ತೂರಿ ಕಿರಣ ಪತ್ರಿಕೆಯ ಸುದ್ದಿ ಮುಖ್ಯಸ್ಥರು) ಬೀದರ: ಜಿಲ್ಲಾ ಕಚೇರಿಗಳ ಸಂಕೀರ್ಣ ನಿರ್ಮಾಣ ಕಳೆದ ಎರೆಡು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು, ಇದೀಗ ಮತ್ತೆ ರಾಜಕೀಯ ಚದುರಂಗದಾಟ ಶುರುವಾಗಿದೆ. ಈ ಹಿಂದೆ ನಗರದಿಂದ ದೂರದ ಪ್ರದೇಶದಲ್ಲಿ ಜಿಲ್ಲಾ ಕಚೇರಿಗಳ ಸಂಕರ್ಣ ನಿರ್ಮಾಣಕ್ಕೆ ಬಿಜೆಪಿ ಪಕ್ಷದವರು ವಿರೋಧ ವ್ಯಕ್ತಪಡಿಸಿ ಜಿಲ್ಲಾಡಳಿತ ಕಚೇರಿಗಳ ಸ್ಥಳದಲ್ಲಿಯೇ ಜಿಲ್ಲಾ ಕಚೇರಿಗಳಸಂಕೀರ್ಣ ನಿರ್ಮಿಸಬೇಕು ಎಂದು ಒತ್ತಾಯಿಸಿದ ಬಿಜೆಪಿ ಪಕ್ಷದವರು ಇದೀಗ ಆಡಳಿತದಲ್ಲಿದ್ದು, ನಗರದಿಂದ ದೂರದ ಪ್ರದೇಶಕ್ಕೆ…
Read More »ಬೀದರ ಕಲಂ 144 ಜಾರಿ
ಬೀದರ: ಭಾರತದ ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಮೆರವಣಿಗೆ, ಪ್ರತಿಭಟನೆ ಮುಂಜಾಗ್ರತ ಕ್ರಮವಾಗಿ ಬೀದರ್ ಜಿಲ್ಲೆಯಾದ್ಯಂತ ಬುಧವಾರ ಡಿ.12 ಮಧ್ಯರಾತ್ರಿ 12 ಗಂಟೆಯಿಂದ ಡಿ.21 ರಾತ್ರಿವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ| ಎಚ್.ಆರ್ ಮಹಾದೇವ ಆದೇಶ ಹೊರಡಿಸಿದ್ದಾರೆ. ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ವಿವಿಧ ಸಂಘಟನೆಗಳು ಹಾಗೂ ವಿರೋಧ ಪಕ್ಷಗಳು ಡಿಸೆಂಬರ್ 19 ರಂದು ಬೀದರ ಜಿಲ್ಲೆಯಾದ್ಯಂತ ಪ್ರತಿಭಟನೆ, ಮೆರವಣಿಗೆ, ಚಳುವಳಿ ನಡೆಸುವ ಸಾಧ್ಯತೆ ಇರುವುದರಿಂದ ಶಾಂತಿ…
Read More »ಬಿಎಸ್ಸೆಸ್ಸೆಕೆ ನಂಬಿದವರು ಬೀದಿಗೆ ಬಿದ್ದರೂ ಜನಪ್ರತಿನಿಧಿಗಳ ಕ್ಯಾರೇ ಇಲ್ಲ..!
ದುರ್ಯೋಧನ ಹೂಗಾರ (ಕಸ್ತೂರಿ ಕಿರಣ ಪತ್ರಿಕೆ ಸುದ್ದಿ ಮುಖ್ಯಸ್ಥರು) ಬೀದರ: ಸಾಲದ ಸುಳಿಯಲ್ಲಿ ನರಳುತ್ತಿರುವ ಬೀದರ ಸಹಕ್ಕಾರ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಮುಂದಾಗದ ಜಿಲ್ಲೆಯ ರಾಜಕಾರಣಿಗಳ ವಿರುದ್ಧ ಹಾಗೂ ಸರ್ಕಾರದ ವಿರುದ್ಧ ಜಿಲ್ಲೆಯ ರೈತರು ಹಾಗೂ ಕಾರ್ಖಾನೆ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 1968-69ರಿಂದ ನಿರಂತರ ಕಬ್ಬು ನುರಿಸುವ ಕೆಲಸ ಆರಂಭಿಸಿದ ಸಕ್ಕರೆ ಕಾರ್ಖಾನೆ ಇದೀಗ ಬಾಗಿಲು ಮುಚ್ಚುವ ಹಂತಕ್ಕೆ ಬಂದಿದೆ. ಇದಕ್ಕೆ ಮುಖ್ಯ ಕಾರಣ ಸಾಲದ ಹೊರೆ. ಜಿಲ್ಲೆಯ ಸುಮಾರು…
Read More »ಕಾರಿಗೆ ಬೆಂಕಿ: ಮಹಿಳೆ ಸಜೀವ ದಹನ
ಬೀದರ: ಮಹಾರಾಷ್ಟ್ರದಿಂದ ತೆಲಂಗಾಣಕ್ಕೆ ತೆರಳುತ್ತಿದ ಸಂದರ್ಭದಲ್ಲಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಾರಿನಲ್ಲಿದ ಮಹಿಳೆಯೊಬ್ಬಳು ಸಜೀವ ದಹನವಾದ ಘಟನೆ ಗುರುವಾರ ಬೆಳಗ್ಗಿನ ಜಾವ ಸಂಭವಿಸಿದೆ. ಹೋಂಡೈ ಕಂಪನಿಯ ಕಾರಿನಲ್ಲಿ ಕಲ್ಯಾಣಿ ಗಂಡ ಉದಯಕುಮಾರ (39) ಸಜೀವ ದಹನವಾ ದಮಹಿಳೆ ಎಂದು ಗುರುತಿಸಲಾಗಿದೆ. ಕಾರಿನಲ್ಲಿ ಉದಯಕುಮಾರ ಭಾಸ್ಕರರಾವ, ಜೀವನಕುಮಾರ ಉದಯಕುಮಾರ, ಗಗನಕುಮಾರ ಉದಯಕುಮಾರ ಇದ್ದು, ಸಣ್ಣಪುಟ್ಟಗಾಯಗಳಾಗಿವೆ. ಹೈದ್ರಾಬಾದ ಮೂಲದ ಕುಟುಂಬ ಮಹಾರಾಷ್ಟ್ರದ ಉದಗೀರ ಖಾಸಗಿ ಆಸ್ಪತ್ರೆಗೆ ಹೋಗಿ ಮರಳುವಾಗ ಈ ದುರ್ಘಟನೆ ಸಂಭವಿಸಿದೆ.…
Read More »ವಿಷ ಕೊಟ್ಟು ಕೊಲ್ಲಿ ಎನ್ನುತ್ತಿರುವ ಬಿಎಸ್ಸೆಸ್ಸೆಕೆ ಕಾರ್ಮಿಕರು..
ದುರ್ಯೋಧನ ಹೂಗಾರ (ಕಸ್ತೂರಿ ಕಿರಣ ಪತ್ರಿಕೆ ಸುದ್ದಿ ಮುಖ್ಯಸ್ಥರು) ಬೀದರ: ಸಾಲದ ಸುಳಿಗೆ ಸಿಲುಕಿ ನರಳುತ್ತಿರುವ ಬೀದರ ಸಹಕಾರ ಸಕ್ಕರೆ ಕಾರ್ಖಾನೆ (ಬಿಎಸ್ಎಸ್ಕೆ) ಅವಸಾನದ ಅಂಚಿಗೆ ತಲುಪಿದ್ದು, ಕಾರ್ಖಾನೆಯನ್ನೇ .ನಂಬಿಕೊಂಡ ಕಾರ್ಮಿಕರು ಹಾಗೂ ಕುಟುಂಬಸ್ಥರ ನೋವು ಹೇಳತೀರದಾಗಿದೆ. ಆಡಳಿತ ಮಂಡಳಿ ಅಥವಾ ಸರ್ಕಾರ ವಿಷ ನೀಡಿದ್ರೇ ಖುಷಿಯಿಂದ ವಿಷ ಸೇವಿಸಿ ಇದೇ ಕಾರ್ಖಾನೆ ಪ್ರಾಂಗಣದಲ್ಲಿ ಪ್ರಾಣ ಬಿಡುತ್ತೇವೆ ಎಂದು ನೋವು ತೋಡಿಕೊಳ್ಳುತ್ತಿದ್ದಾರೆ. ಮೊದಲ ಬಾರಿಗೆ ಕಾರ್ಖಾನೆ ಬಂದ್: ಕಳೆದ…
Read More »ಮಹಾರಾಷ್ಟ್ರ– ದೇವೇಂದ್ರ ಫಡ್ನವಿಸ್ ಮತ್ತೆ ಅಧಿಕಾರಕ್ಕೆ
ಮುಂಬೈ: ಮಹಾರಾಷ್ಟ್ರ ಸರ್ಕಾರ ರಚನೆಯ ಬಿಕ್ಕಟ್ಟಿಗೆ ಇದೀಗ ಹೊಸ ಟ್ವಿಸ್ಟ್ ಸಿಕ್ಕಿದ್ದು, ಶಿವಸೇನೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಶಾಕ್ ನೀಡಿ ಮತ್ತೆ ಬಿಜೆಪಿಯ ದೇವೇಂದ್ರ ಫಡ್ನವಿಸ್ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ ಚುನಾವಣೆಯಲ್ಲಿ 288 ಸ್ಥಾನಗಳ ಪೈಕಿ ಬಿಜೆಪಿ 105 ಸ್ಥಾನ, ಶಿವಸೇನೆ 56 ಸ್ಥಾನ, ಎನ್ಸಿಪಿ 54 ಸ್ಥಾನ ಹಾಗೂ ಕಾಂಗ್ರೆಸ್ 44 ಸ್ಥಾನಗಳನ್ನು ಪಡೆದುಕೊಂಡಿತ್ತು. ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆದ್ದ ಬಿಜೆಪಿ ಜೊತೆ ಕೈಜೊಡಿಸಿ ಸರ್ಕಾರ ರಚಿಸಲು…
Read More »

















