ನಿಮ್ಮ ಜಿಲ್ಲೆ
ಬೀದರ-ಕುತ್ತಿಗೆ ಕತ್ತರಿಸಿದ ಚೈನೀಸ್ ಮಾಂಜಾ
ಹುಮನಾಬಾದ: ಗಾಳಿಪಟ ಹಾರಿಸಲು ಬಳಸುವ ಚೈನೀಸ್ ಮಾಂಜಾ (ನೈಲನ್ ದಾರ) ವ್ಯಕ್ತಿಯೊಬ್ಬನ ಕುತ್ತಿಗೆ ಕತ್ತರಿಸಿದ ಘಟನೆ ಬುಧವಾರ ನಡೆದಿದೆ. ಪಟ್ಟಣದ ಎಂ.ಪಿ ಬಡಾವಣೆ ನಿವಾಸಿ ಶೇಖ್ ಯಿಜಾಜ್ ಎಂಬ ವ್ಯಕ್ತಿ ಬೈಕ್ ಮೇಲೆ ಪಟ್ಟಣದ ಕಲ್ಲೂರ್ ಬೈಪಾಸ್ ರಸ್ತೆಯಲ್ಲಿ ತೆರಳುತ್ತಿರುವ ಮಧ್ಯದಲ್ಲಿ ಈ ಅವಘಡ ಸಂಭವಿಸಿದೆ. ರಸ್ತೆಯ ಮಧ್ಯದಲ್ಲಿ ಗಾಳಿಪಟದ ದಾರ ಇರುವುದು ಗಮನಕ್ಕೆ ಬರದ ಕಾರಣ ನೈಲನ್ ದಾರ ವ್ಯಕ್ತಿಯ ಕುತ್ತಿಗೆ ಕತ್ತರಿಸಿದೆ. ಕುಟುಂಬಸ್ಥರು ಕಲಬುರಗಿಯ ಖಾಸಗಿ ಆಸ್ಪತ್ರೆಗೆ…
Read More »SSLC ಫಲಿತಾಂಶ ಹೆಚ್ಚಳಕ್ಕೆ ಕ್ರಮ ವಹಿಸಿ: ಗೀತಾ ಚಿದ್ರಿ
ಬೀದರ: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ, ಪಿಯುಸಿ ಫಲಿತಾಂಶ ಸುಧಾರಿಸುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಗೀತಾ ಪಂಡಿತರಾವ್ ಚಿದ್ರಿ ಅವರು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ನಗರದ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಜ.13ರಂದು ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಮಾಸಿಕ ಕೆಡಿಪಿ) ಡಿಸೆಂಬರ್ ತಿಂಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಿಸುವ ನಿಟ್ಟಿನಲ್ಲಿ ಕಳೆದ ಸಾಲಿನಲ್ಲಿ ಶೇ.40ಕ್ಕಿಂತ…
Read More »ಗರ್ಭಪಾತ ಮಾತ್ರೆಗಳ ದುರ್ಬಳಕೆ ಮಾಡುವವರ ವಿರುದ್ಧ ಕ್ರಮ: ಡಿಸಿ
ಬೀದರ: ಜಿಲ್ಲಾಧಿಕಾರಿ ಡಾ| ಹೆಚ್.ಆರ್.ಮಹಾದೇವ್ ಅವರ ಅಧ್ಯಕ್ಷತೆಯಲ್ಲಿ ಜ.13ರಂದು ಬ್ರಿಮ್ಸ್ ಕಾಲೇಜಿನಲ್ಲಿ ಔಷಧ ಅಂಗಡಿ ಹಾಗೂ ಡಿಸ್ಟಿçÃಬ್ಯೂಟರ್ ಮಾಲೀಕರ ಸಭೆ ನಡೆಯಿತು. ಈ ವೇಳೆ ಜಿಲ್ಲಾಧಿಕಾರಿಗಳು ಮಾತನಾಡಿ, ಜಿಲ್ಲೆಯಲ್ಲಿ ಕುಂದುತ್ತಿರುವ ಲಿಂಗಾನುಪಾತದ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಗರ್ಭಪಾತದ ಮಾತ್ರೆಗಳ ದುರುಪಯೋಗ ನಿಲ್ಲಿಸಲು ಎಲ್ಲ ಔಷಧಿ ಅಂಗಡಿಯವರು ಕೈಜೋಡಿಸಬೇಕು ಎಂದು ಸೂಚಿಸಿದರು. ಮತ್ತು ಹೆಣ್ಣು ಭ್ರೂಣಹತ್ಯೆಯ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಜನರು ನೇರವಾಗಿ ಅಂಗಡಿಗಳಲ್ಲಿ ಗರ್ಭಪಾತದ ಮಾತ್ರೆಗಳನ್ನು ತೆಗೆದುಕೊಂಡು ಅನಾಹುತಕ್ಕೆ…
Read More »ಬೀದರ್ನಲ್ಲಿ ರಾಜ್ಯಮಟ್ಟದ ಪಶುಮೇಳ: ಸಿದ್ಧತೆಗೆ ಸಚಿವರ ಸೂಚನೆ
ಬೀದರ: ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಬೀದರ ಜಿಲ್ಲೆಯಲ್ಲಿ ಫೆಬ್ರವರಿ 7ರಿಂದ 9ರವರೆಗೆ ರಾಜ್ಯಮಟ್ಟದ ಪಶುಮೇಳವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಅಗತ್ಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಪಶುಸಂಗೋಪನೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು.ಬಿ.ಚವ್ಹಾಣ್ ಅವರು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದರು. ನಗರದ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಜ.13ರಂದು ನಡೆದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಾರ್ಯಕ್ರಮ ನಡೆಯುವ ಸ್ಥಳದ ಕುರಿತು…
Read More »ಬೀದರ-ಎಸ್ಬಿಐ ಸಾಲ ಮೇಳಕ್ಕೆ ಚಾಲನೆ
ಬೀದರ: ಭಾರತೀಯ ಸ್ಟೇಟ್ ಬ್ಯಾಂಕ್ನಿಂದ ನಗರದ ಅಂಬೇಡ್ಕರ್ ವೃತದ ಬಳಿಯಿರುವ ಎಸ್ಬಿಐ ಶಾಖೆಯ ಆವರಣದಲ್ಲಿ ಜ.10ರಂದು ಹೋಮ್ ಲೋನ್ ಮೇಳಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬೀದರ್ನ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಹಣಕಾಸು ನಿಯಂತ್ರಣಾಧಿಕಾರಿ ಡಾ.ಸಿ.ವಿ ರಾಜು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿ, ಎಸ್ಬಿಐನಿಂದ ಸಾರ್ವಜನಿಕರಿಗಾಗಿ ಸಾಕಷ್ಟು ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಮನೆ ನಿರ್ಮಾಣ ಮತ್ತು ನಿವೇಶನ ಖರೀದಿಗಾಗಿ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲ…
Read More »ಸ್ಥಳದಲ್ಲೇ 20 ಅರ್ಜಿಗಳಿಗೆ ಪರಿಹಾರ ಕಲ್ಪಿಸಿದ ಎಸಿ..
ಬೀದರ: ಬೀದರ ಸಹಾಯಕ ಆಯುಕ್ತರಾದ ಅಕ್ಷಯ ಶ್ರೀಧರ್ ಅವರು ಜ.8ರಂದು ಠಾಣಾಕುಶನೂರ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಆಲಿಸಿ ಸ್ಥಳದಲ್ಲೇ ಅರ್ಜಿಗಳ ಪರಿಹಾರ ಕಲ್ಪಿಸುವ ಕೆಲಸ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಒಟ್ಟು 27 ಅರ್ಜಿಗಳನ್ನು ಸ್ವೀಕರಿಸಲಾಯಿತು. ಇದರಲ್ಲಿ ಪಿಂಚಣಿಗೆ ಸಂಬAಧಿಸಿದAತೆ ಸ್ವೀಕರಿಸಲಾದ 20 ಅರ್ಜಿಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಲಾಯಿತು. ಮರಣ ಪ್ರಮಾಣ ಪತ್ರ ಜಾರಿ ಆಗುತ್ತಿಲ್ಲ ಎಂದು ವ್ಯಕ್ತಿಯೊಬ್ಬರು ಅಳಲು ತೋಡಿಕೊಂಡಾಗ, ಕೂಡಲೇ ನೋಂದಣಿಯಾದ ಮರಣ ಪ್ರಮಾಣ ಪತ್ರವನ್ನು ವಿತರಿಸಲಾಯಿತು.…
Read More »ಮತದಾರರ ಮಿಂಚಿನ ನೋಂದಣಿ ಅಭಿಯಾನಕ್ಕೆ ಜಿಲ್ಲಾಧಿಕಾರಿಗಳಿಂದ ಚಾಲನೆ
ಬೀದರ: ಜಿಲ್ಲಾಡಳಿತದಿಂದ ಜ.8ರವರೆಗೆ ಜಿಲ್ಲೆಯಾದ್ಯಂತ ನಡೆಯಲಿರುವ ಮತದಾರರ ಮಿಂಚಿನ ನೋಂದಣಿ ಅಭಿಯಾನಕ್ಕೆ ಜಿಲ್ಲಾಧಿಕಾರಿಗಳಾದ ಡಾ.ಹೆಚ್.ಆರ್.ಮಹಾದೇವ್ ಅವರು ಜ.6ರಂದು ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಪ್ರಕ್ರಿಯೆ ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿದೆ. ಪಟ್ಟಿಯಿಂದ ಬಿಟ್ಟು ಹೋದವರನ್ನು ಸೇರಿಸುವ ನಿಟ್ಟಿನಲ್ಲಿ ಮತದಾರರ ಮಿಂಚಿನ ನೋಂದಣಿ ಅಭಿಯಾನವನ್ನು ಏರ್ಪಡಿಸಲಾಗಿದ್ದು, 18 ವರ್ಷ ವಯಸ್ಸು ಪೂರ್ಣಗೊಂಡವರು ಹಾಗೂ ಮತದಾನಕ್ಕೆ ಅರ್ಹತೆ ಹೊಂದಿದ…
Read More »ಮನೆಮದ್ದು ಬಳಸಿ ಆರೋಗ್ಯ ಕಾಪಾಡಿಕೊಳ್ಳಿ
ಕಲಬುರಗಿ: ಆಯುರ್ವೇದ ಮನೆ ಮದ್ದುಗಳು ಬಳಸುವುದರಿಂದ ಆರೋಗ್ಯಕ್ಕೆ ಲಾಭ ಎಂದು ಜಿಲ್ಲಾಆಯುರ್ವೇದ ಮನೆ ಮದ್ದುಗಳು ಬಳಸುವುದರಿಂದ ಆರೋಗ್ಯಕ್ಕೆ ಲಾಭ ಎಂದು ಜಿಲ್ಲಾ ಆಯುಷ ಅಧಿಕಾರಿ ಡಾ. ರವಿ ಗೀರಿ ಹೇಳಿದರು. ಕಲಬುರಗಿಯ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಜ.3 ರಂದು ಅಂಗನವಾಡಿ ಕಾರ್ಯ ಕರ್ತೆಯರಿಗಾಗಿ ಏರ್ಪಡಿಸಿದ ಮನೆ ಮದ್ದು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಡಾ. ಉಮಾಶಂಕರ ಹಿರೇಮಠ ಮಾತನಾಡಿ, ತಲೆ ನೊವು ಹಾಗೂ ಮುಖ್ಯಕ್ಕೆ ಬಳಸುವ ಕ್ರಿಮ್ ಗಳ ಕುರಿತು ಮನೆಯಲ್ಲಿ…
Read More »ವೀರಶೈವ ಸಕಲ ಮನುಕುಲಕ್ಕೆ ಲೇಸನ್ನೇ ಬಯಸುತ್ತದೆ.
ಬೀದರ: ಪ್ರಪಂಚದಲ್ಲಿ ಹಲವು ಧರ್ಮಗಳು ತಮ್ಮ ತಮ್ಮ ಧರ್ಮಕ್ಕೆ ಜಯವಾಗಲಿ ಎಂದು ಜಯಘೋಷ ಹಾಕುತ್ತಾರೆ. ಆದರೆ, ವೀರಶೈವ ಧರ್ಮ ಮಾತ್ರ ಮಾನವ ಧರ್ಮಕ್ಕೆ ಜಯವಾಗಲಿ ಎಂದು ಜಯಘೋಷ ಹಾಕುವ ಮೂಲಕ ಮಾನವ ಧರ್ಮಕ್ಕೆ ಪ್ರಾತಿನಿಧ್ಯ ನೀಡುತ್ತದೆ ಎಂದು ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ| ವೀರಸೋಮೇಶ್ವರ ಭಗವತ್ಪಾದರ ತಿಳಿಸಿದರು. ಚಿಟಗುಪ್ಪ ತಾಲೂಕಿನ ಮುತ್ತಂಗಿ ಗ್ರಾಮದಲ್ಲಿ ಮಂಗಳವಾರ ನಡೆದ ಧರ್ಮಸಭೆಯಲ್ಲಿ ಅವರು ಆರ್ಶೀವಚನ ನೀಡಿದರು. ಧರ್ಮದಲ್ಲಿ ರಾಜಕೀಯ ಬರಬಾರದು.…
Read More »ಹುಮನಾಬಾದ- ಹಲವೆಡೆ ವಿದ್ಯುತ್ ವ್ಯತ್ಯಯ
ಬೀದರ: ಹುಮನಾಬಾದ ಪಟ್ಟಣದಲ್ಲಿ ಜರುಗುವ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಪೂರ್ವ ಸಿದ್ಧತೆ ವಿದ್ಯತ್ ನಿರ್ವಹಣೆ ಕಾಮಗಾರಿ ನಡೆಯುವ ಪ್ರಯುಕ್ತ ಜ.3ರಿಂದ 11ರವರೆಗೆ ಹಲವೆಡೆ ಬೆಳಗ್ಗೆ 10ರಿಂದ ಸಂಜೆ 5:30ರವರೆಗೆ ವಿದ್ಯುತ್ ಪೂರೈಕೆಯಲ್ಲಿ ಅಡಚಣೆಯಾಗಲಿದೆ. ಜ.3ರಂದು ಶಿವಪುರ ಗಲ್ಲಿ, ಸನಾ ಕಾಲೋನಿ, ಶಿವಾಜಿ ಚೌಕ್, ಬಾಲಾಜಿ ಮಂದಿರ, ಎಂಪಿ ಗಲ್ಲಿ, ವೀರಭದ್ರೇಶ್ವರ ದೇವಸ್ಥಾನ, ಹಳೆ ಮುನ್ಸಿಪಾಲಿಟಿ, ಪಕಿರ್ಟ್ಟಿಕಡಾ, ಶಿವಪುರ್ಬೇಸ್, ತೋಪ್ ಗಲ್ಲಿ. ಜ.6ರಂದು ಜೆರಪೇಟ್, ತಹಸೀಲ್ ಕಚೇರಿ, ಬಸ್ನಿಲ್ದಾಣ,…
Read More »


















