ಸುದ್ದಿಗಳು
ವಿಷಹಾರ ಸೇವಿಸಿ 150 ಕ್ಕೂಹೆಚ್ಚು ಕುರಿಗಳ ಸಾವು
ದಾವಣಗೆರೆ:17OCT19: ವಿಷಹಾರ ಸೇವಿಸಿ 150 ಕ್ಕೂಹೆಚ್ಚು ಕುರಿಗಳ ಸಾವಿಗಿಡಾದ ಘಟನೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಜಯನಗರದಲ್ಲಿ ನಡೆದಿದೆ. ಕುರಿಗಾಯಿ ನವಲಪ್ಪ ವಾಲಿಕೆ ಎಂಬುವರಿಗೆ ಸೇರಿದ ಕುರಿಗಳು ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಕುರಿ ನಿಗಮ ಹಾಗೂ ಪಶುವೈದ್ಯ ಅಧಿಕಾರಿಗಳ ತಂಡ ಭೇಟಿ ಪರಿಶೀಲನೆ ನಡೆಸಿದ್ದಾರೆ. ಅಡವಿ ಸೊಪ್ಪು ಹೆಸರಿನ ವಿಷ ಆಹಾರ ತಿದುಕುರಿಗಳ ಸಾವು ಸಂಭವಿಸಿರಬೇಕು ಎಂದು ಶಂಕಿಸಲಾಗಿದೆ.
Read More »ಸಿಡಿಲಿಗೆ ವ್ಯಕ್ತಿ ಬಲಿ
ಹುಮನಾಬಾದ:17OCT19: ಗುರುವಾರ ಸುರಿದ ಗುಡುಗು ಮಿಂಚು ಮಳೆಯ ಸಂದರ್ಭದಲ್ಲಿ ಸಿಡಿಲು ಬಡಿದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ತಾಲೂಕಿನಲ್ಲಿ ನಡೆದಿದೆ. ಉಮೇಶ್ ರೆಡ್ಡಿ ಹನುಮಂತ್ ರೆಡ್ಡಿ ಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಮಳೆ ಬರುವ ಸಂದರ್ಭದಲ್ಲಿ ಈ ವ್ಯಕ್ತಿ ಹೊಲದಲ್ಲಿದ್ದ ಕಾರಣ ಸಿಡಿಲಿಗೆ ಬಲಿಯಾಗಿದ್ದಾನೆ. ತಾಲ್ಲೂಕಿನ ಬನ್ನಳ್ಳಿ ಹೊರವಲಯದಲ್ಲಿ ಈ ಘಟನೆ ಸಂಭವಿಸಿದೆ. ಈ ಕುರಿತು ಚಿಟಗುಪ್ಪ ಪೊಲೀಸ್ ಠಾಣೆಯ ಪೊಲೀಸರು ಭೇಟಿನೀಡಿ ಪರಿಶಿಲನೆ ನಡೆಸಿದ್ದಾರೆ.
Read More »ಪಿಜಿ ಮುಗಿಸಿದ ರೈತನ ಮಗ ಆತ್ಮಹತ್ಯೆ
ಹುಮನಾಬಾದ:17OCT19: ತಾಲೂಕಿನ ಜಲಸಂಗಿ ಗ್ರಾಮದ ಸಿದ್ದಪ್ಪ ಹೊನಗೊಂಡ ಅವರ ಮಗ ಗಜಾನಂದ (25 ವರ್ಷ) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಪಿಜಿ ವಿದ್ಯಾಭ್ಯಾಸ ಮುಗಿಸಿ ಗಜಾನಂದ ಖಾಸಗಿ ಶಾಲೆಯಲ್ಲಿ ಶಿಕ್ಷಕನಾಗಿ ಹಾಗೂ ಹೊಲದಲ್ಲಿ ರೈತನಾಗಿ ದುಡಿಯುತ್ತಿದ್ದ ಈತ ಹೆಚ್ಚಿನ ಶಿಕ್ಷಣಕಾಗಿ ಧಾರವಾಡ ಸೆಂಟರ್ಗೆ ಸೇರಬೇಕು ಎಂಬ ಹಂಬಲ ಹೊಂದಿದ. ಆದರೆ,ತಂದೆ ಬ್ಯಾಂಕ್ ಹಾಗೂ ಖಾಸಗಿ ಒಟ್ಟಾರೆ 7 ಲಕ್ಷ ಸಾಲ ಹೊಂದಿದ್ದು, ಶಿಕ್ಷಣಕ್ಕೆ ಹಣ ಇಲ್ಲದ ಕಾರಣ…
Read More »ರೇಕುಳಗಿಗೆ ಬಿ.ವೈ ವಿಜೆಯೇಂದ್ರ ಭೇಟಿ
ಬೀದರ: ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ ವಿಜೇಯಂದ್ರ ತಾಲೂಕಿನ ರೇಕುಳಗಿ ಶಂಭುಲಿಂಗೇಶ್ವರ ದೇವಸ್ಥಾನಕ್ಕೆ ಭಾನುವಾರ ಭೇಟಿನೀಡಿ ವಿಶೇಷ ಪೂಜೆ ಸಲ್ಲಿಸಿದರು. ಕಲಬುರಗಿ ಜಿಲ್ಲೆಯಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಆಗಮೀಸಿದ ಅವರು, ಕುಟುಂಬ ಸಮೇತ ರೇಕುಳಗಿ ಶಂಭುಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿನೀಡಿ ದರ್ಶನ ಪಡೆದಿದ್ದಾರೆ. ರಾಕೀಯ ವ್ಯಕ್ತಿಗಳಿಗೆ ಉನ್ನತ ಸ್ಥಾನ ನೀಡುವ ಕೇಂದ್ರವೆಂದು ಗುರುತಿಸಿಕೊಂಡಿರುವ ಇಲ್ಲಿನ ದೇವಸ್ಥಾನಕ್ಕೆ ರಾಷ್ಟ್ರ ಹಾಗೂ ರಾಜ್ಯದ ಅನೇಕ ರಾಜಕೀಯ ಮುಖಂಡರು ಭೇಟಿನೀಡಿ ವಿಶೇಷ ಪೂಜೆಸಲ್ಲಿಸಿದ್ದಾರೆ.
Read More »ಬೀದರ ಜಿಲ್ಲೆ ಬರಪೀಡಿತ ಎಂದು ಸರ್ಕಾರ ಘೋಷಣೆ ಮಾಡಬೇಕು.
ಬೆಂಗಳೂರು- ಬೀದರ ಜಿಲ್ಲೆಯಲ್ಲಿ ವಾಡಿಕೆಗಿಂದ ಕಡಿಮೆ ಮಳೆಯಾಗಿದ್ದು, ರಾಜ್ಯ ಸರ್ಕಾರ ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಟ್ವೀಟ್ ಮೂಲಕ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಒತ್ತಾಯಿಸಿದ್ದಾರೆ. ಅಲ್ಲದೇ, ಮೈತ್ರಿ ಸರ್ಕಾರದ ಅವಧಿಯಲ್ಲಿ ಮಾಡಿದ ಸಾಲಮನ್ನಾ ಯೋಜನೆಯಲ್ಲಿ 1.17 ಲಕ್ಷ ರೈತರ ಖಾತೆಗೆ ಮಾತ್ರ ಹಣ ಜಮೆಗೊಂಡಿದ್ದು, ಇನ್ನೂ ಉಳಿದ ರೈತರಿಗೆ ತಕ್ಷಣ ಸಾಲ ಮನ್ನಾದ ಹಣ ಜಮಾವಣೆ ಮಾಡಬೇಕು ಎಂದು ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದಾರೆ.…
Read More »ಅ.19ರ ವರೆಗೆ ಉದ್ದು, ಹೆಸರು ಖರೀದಿಗಾಗಿ ನೊಂದಣೆ- ಖೂಬಾ
ಬೀದರ: ಉದ್ದು, ಹೆಸರು ಬೆಳೆದ ರೈತರು ಮುಂದಿನ ಅ.19ರ ವರೆಗೆ ಖರೀದಿಗಾಗಿ ನೊಂಡಣೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಲೋಕಸಭೆ ಸದಸ್ಯ ಭಗವಂತ ಖೂಬಾ ತಿಳಿಸಿದ್ದಾರೆ. ಈ ಕಉರಿತು ಪ್ರಕಟಣೆ ಹೊರಡಿಸಿದರುವ ಅವರು, ಜಿಲ್ಲೆಯ ರೈತರು ಉದ್ದು, ಹೆಸರು ನೊಂದಣೆ ದಿನಾಂಕ ವಿಸ್ತರಿಸುವಂತೆ ಮನವಿ ಸಲ್ಲಿಸಿದರು. ಈ ಕುರಿತು ಸಹಕಾರ ಸಚಿವ ಲಕ್ಷ್ಮಿಣ ಸವದಿ ಅವರ ಗಮನಕ್ಕೆ ತಂದು ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ದಿನಾಂಕ ವಿಸ್ತರಣೆ ಮಾಡುವಂತೆ ಮನವಿ…
Read More »ಮೈಸೂರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಭೇಟಿ
ಮೈಸೂರು: ಇತಿಹಾಸಿಕ ನಗರಿ ಮೈಸೂರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಭೇಟಿನೀಡಿದ್ದಾರೆ. ರಾಜ್ಯಪಾಲ ವಜುಭಾಯಿ ವಾಲಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ರಾಷ್ಟ್ರಪತಿಗಳನ್ನು ಸ್ವಾಗತಿಸಿದರು. ಎರಡು ದಿನಗಳ ಕಾಲ ವಿವಿಧಡೆ ಭೇಟಿನೀಡಲ್ಲಿದ್ದಾರೆ. ಮೈಸೂರು ಅರಮನೆಯಲ್ಲಿ ನಡೆಯಲ್ಲಿರುವ ಜಯಚಾಮರಾಜ ಒಡೆಯರ್ ಜನ್ಮಶತಾಮಾನೋತ್ಸವ ಹಾಗೂ ಶುಕ್ರವಾರ ಚಾಮುಡಿ ಬೆಟ್ಟ, ನಂಜನಗೂಡಿಗೆ ಭೇಟಿನೀಡಲ್ಲಿದ್ದಾರೆ.
Read More »ಪರಮೇಶ್ವರ ಮನೆಮೇಲೆ ಐಟಿ ದಾಳಿ
ಬೆಂಗಳೂರು- ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅವರ ನಿವಾಸ ಹಾಗೂ ಅವರಿಗೆ ಸಂಬಂಧಿಸಿ ಶಿಕ್ಷಣಗಳ ಮೇಲೆ ಇಂದು ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರಿನ ಸಿದ್ದಾರ್ಥ ಕಾಲೇಜು, ಪದವಿ ಕಾಲೇಜು ಸೇರಿದಂತೆ ಅವರ ನಿವಾಸದಮೇಲು ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಲ್ಲದೆ, ಪರಮೇಶ್ವರ ಅವರ ಆಪ್ತನ ಮನೆ ಮೇಲೂ ದಾಳಿ ನಡೆದಿರುವ ಬಗ್ಗೆ ತಿಳಿದುಬಂದಿದೆ. ಐಟಿ ಅಧಿಕಾರಿಗಳು ವಿವಿಧ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
Read More »ನೇರ ಪ್ರಸಾರಕ್ಕೆ ವಿನಂತಿ – ಮುಖ್ಯಮಂತ್ರಿ BSY
ಬೆಂಗಳೂರು- ವಿಧಾನ ಸಭೆ ಕಲಾಪದಲ್ಲಿ ಖಾಸಗಿ ಟಿವಿಗಳ ನೇರ ಪ್ರಸಾರಕ್ಕೆ ತಡೆ ಹಾಕಿರುವ ಕುರಿತು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ. ಮಾಧ್ಯಮ ಸ್ವಾತಂತ್ರಕ್ಕೆ ನನ್ನ ಸರ್ಕಾರ ಸದಾ ಬದ್ಧವಾಗಿದೆ. ನೇರ ಪ್ರಸಾರಕ್ಕೆ ತಡೆ ಹಾಕಿರುವ ಸ್ಪೀಕರ್ ನಿರ್ಧಾರವನ್ನು ಪುನರ್ ಪರಿಶೀಲಿಸಲು ವಿನಂತಿ ಮಾಡುವುದಾಗಿ ತಿಳಿಸಿದ್ದಾರೆ. ಈ ಕುರಿತು ವಿವಿಧ ಮಾಧ್ಯಮಗಳು ಬುಧವಾರ ಸಂಜೆಯಿಂದ ರಾಜ್ಯ ಸರಕಾರದ ವಿರುದ್ದ ಅನೇಕರೀತಿಯ ಟೀಕೆಗಳು ಮಾಡಿದವು.
Read More »ಕೋಟ ಶ್ರಿನಿವಾಸ ಪೂಜಾರಿ ವಿಧಾನ ಪರಿಷತ್ತಿನ ಸಭಾನಾಯಕ
ಬೆಂಗಳೂರು: ಮುಜುರಾಯಿ, ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರಿನಿವಾಸ ಪೂಜಾರಿ ಅವರನ್ನು ಕರ್ನಾಟಕ ವಿಧಾನ ಪರಿಷತ್ತಿನ ಸಭಾನಾಯಕರಾಗಿ ಕರ್ತವ್ಯ ನಿರ್ವಹಿಸಲ್ಲಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ.
Read More »


















