ರಾಜ್ಯ ಸುದ್ದಿ
ಬೀದರನಲ್ಲಿ ಮತ್ತೆ 4 ಪಾಸಿಟಿವ್ ಪ್ರಕರಣ ಪತ್ತೆ.
ಬೀದರನಲ್ಲಿ ಮತ್ತೆ 4 ಪಾಸಿಟಿವ್ ಪ್ರಕರಣ ಪತ್ತೆ. ಮುಂಬೈ ಇಂದ ರಾಜ್ಯಕ್ಕೆ ಬಂದ ಕೊರೊನಾ ಮಹಾಮಾರಿ – 60ಕ್ಕೂ ಅಧಿಕ ಜನರ ಮೇಲೆ ನಿಗಾ ಬೀದರಃ ಜಿಲ್ಲೆಯಲ್ಲಿ ಗುರುವಾರ ಮತ್ತ ನಾಲ್ಕು ಪ್ರಕರಣಗಳು ಬೆಳಕಿಗೆ ಬಂದಿದ್ದು ಮೂರು ಪ್ರಕರಣಗಳು ಬೀದರ ನಗರದಾಗಿದ್ದು, ಇನ್ನೂಂದು ಹುಮನಾಬಾದ ತಾಲೂಕಿನ ಹುಣಸಗೇರಾ ಗ್ರಾಮದ ಮಹಿಳೆಗೆ ಪಾಸಿಟಿವ್ ಬಂದಿದೆ. ಮಹಾರಾಷ್ಟ್ರದ ಧಾರಾವಿ ಸಮಿಪದ ಸಾತರಾಸ್ತಾ ಹತ್ತಿರ ಗುಡಿಸಲ ಮಾಡಿಕೊಂಡಿದ ದಂಪತಿ ಪೈಕಿ ಪತ್ನಿಗೆ ಕೊರೊನಾ ಪಾಸಿಟಿವ್ ಬಂದಿದೆ.…
Read More »ಬೀದರನಲ್ಲಿ ಮತ್ತೆ 11 ಕೊರೊನಾ ಪಾಸಿಟಿವ್ ಪತ್ತೆ.
ಬೀದರನಲ್ಲಿ ಮತ್ತೆ 11 ಕೊರೊನಾ ಪಾಸಿಟಿವ್ ಪತ್ತೆ. ಜಿಲ್ಲಾಧಿಕಾರಿ ಡಾ| ಎಚ್.ಆರ್ ಮಹಾದೇವ ಜಾಗೃತ ನಡೆ ಹಿನ್ನೆಲೆ ಪತ್ತೆ. ಬೀದರಃ ಜಿಲ್ಲಾಡಳಿತದ ಆದೇಶದಂತೆ ಆರೋಗ್ಯ ಇಲಾಖೆ ಕಳೆದ ಮೂರು ದಿನಗಳಿಂದ ಬೀದರ ಸೀಲ್ ಡೌನ್ ಏರಿಯಾದಲ್ಲಿ ನಡೆಸಿದ ಆರೋಗ್ಯ ತಪಾಸಣೆ ಕಾರ್ಯ ಹಿನ್ನೆಲೆಯಲ್ಲಿ ಬುಧವಾರ ಮತ್ತೆ 11 ಕೊರೊನಾ ಪಾಸಟಿವ್ ಪ್ರಕರಣಗಳು ಬೆಳಕಿಗೆ ಬಂದಿವೆ. ಹೌದು ಒಂದೇ ಬಾರಿ ಹೆಚ್ಚಿನ ಪ್ರಕರಣಗಳು ಬೆಳಕಿಗೆ ಬಂದ ಪ್ರದೇಶಗಳಲ್ಲಿ ಆರೋಗ್ಯ ತಪಾಸಣೆ ನಡೆಸುವುದು…
Read More »-ಬೀದರ-ಮತ್ತೆ ಶುರುವಾಯಿತು ಅಕ್ರಮ ಅಕ್ಕಿ ಸರಬರಾಜು..!
ಬೀದರ: ಬೀದರ ತಾಲೂಕಿನಲ್ಲಿ ಮತ್ತೆ ಪಡಿತರ ಅಕ್ರಮ ಅಕ್ಕಿ ಸರಬರಾಜು ಹೆಚ್ಚಾಗಿದ್ದು, ಒಂದು ವಾರದಲ್ಲಿ ಭಾರಿ ಪ್ರಮಾಣದ ಪಡಿತರ ಅಕ್ಕಿ ವಶಪಡಿಸಿಕೊಂಢು ಎರೆಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಅಕ್ರಮಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಡಾ| ಎಚ್.ಆರ್ ಮಹಾದೇವ ಮುಂದಾಗಿದ್ದಾರೆ. ಕೊರೊನಾ ವೈರಸ್ ತಡೆಗಟ್ಟುವನಿಟ್ಟಿನಲ್ಲಿ ಸರ್ಕಾರಗಳು ಲಾಕ್ ಡೌನ್ ಜಾರಿಮಾಡಿ ಬಡವರಿಗೆ ಉಚಿತ ಅಕ್ಕಿ, ಗೋಧಿ ಹಾಗೂ ತೊಗರಿ ಬೇಳೆ ವಿತರಣೆ ಮಾಡಿದ್ದು, ಇದೀಗ ಪಡಿತರ ಅಕ್ಕಿ, ಗೋಧಿ ಕಳ್ಳ…
Read More »ಬೀದರ ಜಿಲ್ಲೆಯಲ್ಲಿ ಕೊರೊನಾ ಪರೀಕ್ಷಾ ಕೇಂದ್ರ
ಬೀದರ: ಬೀದರ ಜಿಲ್ಲೆಯಲ್ಲಿ ಕೋರೋನಾ ವೈರಾಣು ಪರೀಕ್ಷಾ ಕೇಂದ್ರ ಪ್ರಾರಂಭಕ್ಕೆ ಸರ್ಕಾರ ಸಹಮತ ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಪ್ರಭು ಚೌವಾಣ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಪರೀಕ್ಷಾ ಕೇಸದ್ರ ಪ್ರಾರಂಭದ ಕೋರಿಕೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ಮನ್ನಿಸಿ, ಬೀದರನಲ್ಲಿ ಎರಡು ಪರೀಕ್ಷಾ ಕೇಂದ್ರಗಳನ್ನು ತೆರೆಯಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ. ಈಗಾಗಲೇ ಜಿಲ್ಲಾಧಿಕಾರಿಗಳು ಹಾಗೂ ಬ್ರಿಮ್ಸ್ ನಿರ್ದೇಶಕರಿಗೆ ಸೂಕ್ತ ತಯಾರಿ ಮಾಡಿಕೊಳ್ಳಲು ಸಚಿವರು ಸೂಚಿಸಿದ್ದು, ಶೀಘ್ರದಲ್ಲಿಯೇ…
Read More »ಬೀದರ ಮತ್ತೆರಡು ಪ್ರಕರಣ ಪತ್ತೆ.
ಬೀದರ: ಜಿಲ್ಲೆಯಲ್ಲಿ ಮತ್ತೆ ಎರಡು ಕೋವಿಡ್-19 ಪ್ರಕರಣಗಳು ದೃಢವಾಗಿದ್ದು, ಬೀದರ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಈ ಕುರಿತು ಬೀದರ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಹೇಳಿಕೆ ನೀಡಿದ್ದು, ಜಿಲ್ಲೆಯಲ್ಲಿ ಇಬ್ಬರು ಮಹಿಳೆಯರಿಗೆ ಸೋಂಕು ಪತ್ತೆಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ದೆಹಲಿಯ ಜಮಾತ್ ಗೆ ಹೊಗಿ ಬಂದ ವ್ಯಕ್ತಿಯ ಸಂಬಂಧಿಕರು ಎಂದು ತಿಳಿಸಿದ್ದಾರೆ. ಅಲ್ಲದೆ, ದೆಹಲಿಗೆ ಹೋಗಿ ಬಂದವರು ನೇರವಾಗಿ ಆಸ್ಪತ್ರೆಗೆ ಭೇಟಿನೀಡಿ ಚಿಕಿತ್ಸೆ ಪಡೆಯಬೇಕು. ಸೋಂಕಿತರ ಪತ್ತೆಗೆ ಸಮುದಾಯದ ಜನರು…
Read More »ಬೀದರ ಮತ್ತೊಂದು ಪಾಸಿಟಿವ್ ಖಚಿತ.
ಬೀದರ: ಜಿಲ್ಲೆಯಲ್ಲಿ ಮತ್ತೊಂದು ಕೊರೊನಾ ವೈರಸ್ ಪಾಸಿಟಿವ್ ಪ್ರಕರಣ ಬೆಳಕಿಗೆ ಬಂದಿದ್ದು, 50 ವರ್ಷದ ಮಹಿಳೆ ಸೋಂಕು ಇರುವುದು ಖಚಿತವಾಗಿದೆ. ಬೀದರ ನಗರದ ಓಲ್ಡ್ ಸಿಟಿಯ ಮಹಿಳೆಗೆ ಕೋರೋನಾ ಸೊಂಕು ಧೃಡಪಟ್ಟಿದೆ. ಇತ್ತೀಚಿಗೆ ನವ ದೆಹಲಿಯ ತಬ್ಲಿಘಿ ಜಮಾತ್ ಕಾರ್ಯಕ್ರಮಕ್ಕೆ ಹೋಗಿ ಬಂದಿದ್ದ ವ್ಯಕ್ತಿಯ ಸಂಪರ್ಕಕ್ಕೆ ಬಂದಿದ್ದ ವ್ಯಕ್ತಿಯ ಸಂಬಂಧಿ ಮಹಿಳೆಗೆ ಸೋಂಕು ಖಚಿತವಾಗಿದೆ. ಜಿಲ್ಲೆಯಲ್ಲಿ ವಾರದ ನಂತರ ಪತ್ತೆಯಾದ 11ನೇ ಕೋರೋನಾ ಪಾಜಿಟಿವ್ ಪ್ರಕರಣ ಇದಾಗಿದೆ. ಸಂಸದ ಭಗವಂತ್…
Read More »ಕಳ್ಳರ ಬಂಧನ : 14 ಲಕ್ಷದ ಆಭರಣ ಜಪ್ತಿ
ಹುಮನಾಬಾದ: ತಾಲೂಕಿನ ವಿವಿಧಡೆ ಕಳ್ಳತನ ಮಾಡಿದ ಐದು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, 14 ಲಕ್ಷ ಮೊತ್ತದ ಚಿನ್ನಾಭರಣ ಜಪ್ತಿಮಾಡಿಕೊಂಡಿದ್ದಾರೆ. ಶಿವಕುಮಾರ ಪಂಚಾಳ, ಸಲ್ಮಾನ ಅಲ್ತಾಫ್, ಅರುಣ ಸ್ವಾಮಿ, ಅವಿನಾಶ ತೊರಣ, ನಾಮದೇವ ಸೇಣಗೇರ ಬಂಧಿತ ಆರೋಪಿಗಳು ಎಲ್ಲಾ ಆರೋಪಿಗಳು 19 ವರ್ಷದಿಂದ 24 ವರ್ಷದ ಯುವಕರಾಗಿದ್ದಾರೆ. ಹುಮನಾಬಾದ, ಹಳ್ಳಿಖೇಡ ಬಿ, ದುಬಲಗುಂಡಿ ಹಾಗೂ ಅಮಿರಾಬಾದ ಗ್ರಾಮಗಳಲ್ಲಿನ ಮನೆ ಕಳ್ಳತನದಲ್ಲಿ ಈ ಯುವಕರು ಭಾಗಿಯಾಗಿದ್ದರು. ಹಳ್ಳಿಖೇಡ ಪಟ್ಟಣದ ಸೀಮಿನಾಗನಾಥ…
Read More »ಕಾನೂನು ಉಲ್ಲಂಘನೆ ಚಹಾ ಅಂಗಡಿ ವಿರುದ್ದ ಪ್ರಕರಣ ದಾಖಲು.
ಸೋಂಕಿತ ಜನರ ಸಂಪರ್ಕದಲ್ಲಿದ್ದ ವ್ಯಕ್ತಿಗಳ ಪತ್ತೆಗೆ 9 ಅಧಿಕಾರಿಗಳ ತಂಡ.
ಬೀದರ: ಬೀದರ ಜಿಲ್ಲೆಯ 11 ಕೊರೊನಾ ಸೋಂಕಿತರ ಸಂಪರ್ಕದಲ್ಲಿದ್ದ ವ್ಯಕ್ತಿಗಳ ಹುಡುಕಾಟಕ್ಕೆ, ಆರೋಗ್ಯ ತಪಾಸಣೆಗೆ 9 ಅಧಿಕಾರಿಗಳ ತಂಡ ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ। ಎಚ್.ಆರ್ ಮಹಾದೇವ ತಿಳಿಸಿದ್ದಾರೆ. 11 ಜನರ ಸಂಪರ್ಕದಲ್ಲಿದ ಪ್ರಾಥಮಿಕ ಹಂತದಲ್ಲಿ 68 ಜನರನ್ನು ಗುರುತಿಸಲಾಗಿದ್ದು ಇನ್ನೂ 20 ಜನರು ಹುಡುಕಾಟ ನಡೆದಿದೆ. ಇದಕ್ಕಾಗಿ ಅಧಿಕಾರಿಗಳ ತಂಡ ರಚಿಸಲಾಗಿದ್ದು ಎಲ್ಲಾ ಜನರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ದೆಹಲಿಯಿಂದ ರೈಲು ಮೂಲಕ ಹೈದರಾಬಾದ್…
Read More »ಬೀದರ 26 ಜನರ ಗಂಟಲು ದ್ರವ ಮಾದರಿ ಪರೀಕ್ಷೆ- ಡಿಸಿ
ಬೀದರ: ನವದೆಹಲಿಯ ನಿಜಾಮುದ್ದೀನ್ ಜಮಾತ್ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಬೀದರ ಜಿಲ್ಲೆಯ 26 ಜನರ ಗಂಟಲು ದ್ರವ ಮಾದರಿಯನ್ನು ಕಲಬುರಗಿ ಲ್ಯಾಬ್ ಗೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ| ಎಚ್.ಆರ್ ಮಹಾದೇವ ಮಾಹಿತಿ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಈಗಾಗಲೇ 26 ಎಲ್ಲರೂ ಗೃಹ ಬಂಧನ ಅವಧಿ ಪೂರ್ಣಗೊಳಿಸಿದ್ದಾರೆ. ದೆಹಲಿಯಿಂದ ಬಂದ 26 ಜನರಿಗೆ ಕೊರೊನಾ ಸೋಂಕಿನ ಯಾವ ಲಕ್ಷಣಗಳು ಕಂಡುಬಂದಿಲ್ಲ. ದೆಹಲಿಯಲ್ಲಿ ಸೋಂಕಿನ ಹೆಚ್ಚಿನ ಪ್ರಭಾವ ಕಂಡುಬಂದ ಹಿನ್ನೆಲೆಯಲ್ಲಿ ಸರ್ಕಾರ…
Read More »














