ಬೀದರ
ಕಳ್ಳರ ಬಂಧನ : 14 ಲಕ್ಷದ ಆಭರಣ ಜಪ್ತಿ
ಹುಮನಾಬಾದ: ತಾಲೂಕಿನ ವಿವಿಧಡೆ ಕಳ್ಳತನ ಮಾಡಿದ ಐದು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, 14 ಲಕ್ಷ ಮೊತ್ತದ ಚಿನ್ನಾಭರಣ ಜಪ್ತಿಮಾಡಿಕೊಂಡಿದ್ದಾರೆ. ಶಿವಕುಮಾರ ಪಂಚಾಳ, ಸಲ್ಮಾನ ಅಲ್ತಾಫ್, ಅರುಣ ಸ್ವಾಮಿ, ಅವಿನಾಶ ತೊರಣ, ನಾಮದೇವ ಸೇಣಗೇರ ಬಂಧಿತ ಆರೋಪಿಗಳು ಎಲ್ಲಾ ಆರೋಪಿಗಳು 19 ವರ್ಷದಿಂದ 24 ವರ್ಷದ ಯುವಕರಾಗಿದ್ದಾರೆ. ಹುಮನಾಬಾದ, ಹಳ್ಳಿಖೇಡ ಬಿ, ದುಬಲಗುಂಡಿ ಹಾಗೂ ಅಮಿರಾಬಾದ ಗ್ರಾಮಗಳಲ್ಲಿನ ಮನೆ ಕಳ್ಳತನದಲ್ಲಿ ಈ ಯುವಕರು ಭಾಗಿಯಾಗಿದ್ದರು. ಹಳ್ಳಿಖೇಡ ಪಟ್ಟಣದ ಸೀಮಿನಾಗನಾಥ…
Read More »ಜೆಸ್ಕಾಂ ಗ್ರಾಹಕರು ವಿದ್ಯುತ್ ಬಿಲ್ ಪಾವತಿ ಮಾಡಿ.
ಬೀದರ: ಲಾಕ್ ಡೌನ್ ಹಿನ್ನಲೆಯಲ್ಲಿ ಹುಮನಾಬಾದ ಪಟ್ಟಣ, ಹಳ್ಳಿಖೇಡ (ಬಿ) ಪಟ್ಟಣ ಮತ್ತು ಕಾ & ಪಾ ಉಪ-ವಿಭಾಗ ಜೆಸ್ಕಾಂ ಹುಮನಾಬಾದ ವ್ಯಾಪ್ತಿಗೆ ಒಳಪಡುವ ಗ್ರಾಮಗಳ ವಿದ್ಯುತ್ ಗ್ರಾಹಕರು ಕಡ್ಡಾಯವಾಗಿ ವಿದ್ಯುತ್ ಬಿಲ್ ಪಾವತಿ ಮಾಡಬೇಕು ಎಂದು ಜೆಸ್ಕಾಂ ಅಧಿಕಾರಿ ತಿಳಿಸಿದ್ದಾರೆ. ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿಯ ಹುಮನಾಬಾದ ಸಹಾಯಕ ಕಾರ್ಯನಿರ್ವಾಹಕ ಅಬಿಯಂತರರು ಪ್ರಕಟಣೆಯೊಂದು ಹೊರಡಿಸಿದ್ದು, 3 ತಿಂಗಳ ಅವಧಿ ವಿದ್ಯುತ್ ಬಿಲ್ ಪಾವತಿಸುವುದನ್ನು ಮುಂದುಡಿರುವ ಬಗ್ಗೆ ರಾಜ್ಯ ಸರ್ಕಾರ…
Read More »ಅವಶ್ಯಕತೆ ಇರುವಲ್ಲಿ ಬೋರವೆಲ್ ಕೊರೆಯಿಸಿ-ಖಾಶೆಂಪೂರ್
ಬೀದರಃ ಜಿಲ್ಲೆಯಲ್ಲಿ ಅವಶ್ಯಕತೆ ಇರುವ ಕಡೆಗಳಲ್ಲಿ ಕೂಡಲೇ ಬೋರವೆಲ್ ಕೊರೆಯಿಸಿ ಜನತೆಗೆ ತೊಂದರೆಯಾಗದಂತೆ ಸಮರ್ಪಕ ಕುಡಿಯುವ ನೀರು ಪೂರೈಕೆಗೆ ವ್ಯವಸ್ಥೆ ಮಾಡಬೇಕು ಎಂದು ಬೀದರ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪೂರ ತಿಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಏ.8ರಂದು ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೊಂದರೆಯಾಗಿದೆ ಎನ್ನುವ ದೂರುಗಳು ಗ್ರಾಮಸ್ಥರಿಂದ ಬರುತ್ತಿದೆ. ತುರ್ತು ಅವಶ್ಯಕತೆ…
Read More »ಅಕ್ರಮ ಮದ್ಯ ಮಾರಾಟ -ಅಬಕಾರಿ ಅಧಿಕಾರಿಗಳಿಂದ ದಾಳಿ
ಬೀದರ: ಹುಮನಾಬಾದ ತಾಲೂಕಿನ ಹಂದಿಕೇರಾ ಗ್ರಾಮದ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟದ ಖಚಿತ ಮಾಹಿತಿ ಮೇರೆಗೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ 3.24 ಲೀ. ಮದ್ಯ ಹಾಗೂ ದ್ವಿಚಕ್ರ ವಾಹನ ಜಪ್ತಿಮಾಡಿದ್ದಾರೆ. ಅರ್ಜುನ್ ಕರೀನಾಗೆ ಎಂದ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅಬಕಾರಿ ಉಪ ನಿರೀಕ್ಷಕರಾದ ಜೆಟ್ಟೆಪ್ಪ ಬೇಲೂರ ಹಾಗೂ ಅರುಣ್ ಜೇವರ್ಗಿ, ಸಿಬ್ಬಂದಿ ಉಮೇಶ್ ಮಲ್ಲಿಕಾರ್ಜುನ ಇದ್ದರು ಎಂದು ಅಬಕಾರಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. Date: 02-04-2020
Read More »ಅಧಿಕಾರಿಗಳ ಸಮನ್ವಯ ಕೊರತೆ ಜನಸಾಮಾನ್ಯರಿಗೆ ತೊಂದರೆ.
ಬೀದರ: ಹುಮನಾಬಾದ ಪಟ್ಟಣದಲ್ಲಿನ ಪುರಸಭೆ, ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆಗಳ ಮಧ್ಯೆ ಸಮನ್ವಯದ ಕೊರತೆ ಎದ್ದುಕಾಣುತ್ತಿದೆ. ಪಟ್ಟಣದಲ್ಲಿನ ತರಕಾರಿ ಮಾರಾಟಗಾರರು, ಕಿರಾಣಿ ಅಂಗಡಿಗಳ ಮಾಲೀಕರಿಗೆ ಹಾಗೂ ಹಣ್ಣಿನ ಅಂಗಡಿ ವ್ಯಾಪಾರಸ್ಥರಿಗೆ ಸಮಸ್ಯೆ ಉಂಟಾಗಿದೆ. ಯಾವ ಸಮಯದಲ್ಲಿ ವ್ಯಾಪಾರ ಮಾಡಬೇಕು ಎಂಬುದು ಗೊಂದಲ ಸೃಷ್ಟಿಯಾಗಿದೆ. ಆಗಿದ್ದೇನು?: ಲಾಕ್ ಡೌನ್ ಆರಂಭವಾದ ದಿನದಿಂದ ಬೆಳಿಗ್ಗೆ 7:00 ಗಂಟೆಯಿಂದ 10:00 ವರೆಗೆ ತರಕಾರಿ ಹಣ್ಣು ಕಿರಾಣಿ ಅಂಗಡಿಗಳು ವ್ಯಾಪರ ನಡೆಸುತ್ತಿದ್ದರು. ಆದರೆ, ಮಂಗಳವಾರ…
Read More »ಲಾಕ್ಡೌನ್ ಆದೇಶ ಉಲ್ಲಂಘನೆ: 213 ವಾಹನಗಳ ಜಪ್ತಿ
ಬೀದರಃ ಭಾರತದಲ್ಲಿ ಕೊರೊನಾ ವೈರಸ್ ಸೋಂಕು ತಡೆಯಲು ಪ್ರಧಾನಮಂತ್ರಿಗಳು ಮಾ.25 ರಿಂದ 21 ದಿನಗಳ ಕಾಲ ಲಾಕಡೌನ್ (ನಿಷೇಧ) ಆದೇಶಿಸಿದ್ದು, ಕೊರೊನಾ ವೈರಸ್ ಸೋಂಕು ಇತರರಿಗೆ ಹರಡದಂತೆ ತಡೆಯಲು ಹೋಮ್ಕ್ವಾರಂಟೈನ್ (ಗೃಹ ನಿರ್ಬಂಧ) ಮತ್ತು ಕಲಂ 144 ಸಿ.ಆರ್.ಪಿ.ಸಿ ಆದೇಶವನ್ನು ಉಲ್ಲಂಘಿಸಿದವರ ವಿರುದ್ಧ ಬೀದರ ಜಿಲ್ಲೆಯಲ್ಲಿ 4 ಪ್ರಕರಣಗಳು ದಾಖಲಾಗಿವೆ. ಸಾರ್ವಜನಿಕರು ಮನೆಯಲ್ಲಿಯೇ ಇರತಕ್ಕದ್ದು. ಅತ್ಯವಶ್ಯಕ ಸಂದರ್ಭದಲ್ಲಿ ಮಾತ್ರ ಮನೆಯಿಂದ ಹೊರಗೆ ಬರತಕ್ಕದ್ದು ಎಂದು ಆದೇಶವಿದ್ದರು ಸಹ ಅನವಶ್ಯಕವಾಗಿ ಸಂಚಾರಿಸಿದವರ…
Read More »ಅಬಕಾರಿ ದಾಳಿ – 1.05 ಲಕ್ಷದ ಮದ್ಯ ಜಪ್ತಿ.
ಬೀದರ: ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯ ಅಬಕಾರಿ ಇಲಾಖೆಯ ಅಧಿಕಾರಿಗಳು ಕಳೆದ 15 ದಿನಗಳಿಂದ ವಿವಿಧಡೆ ದಾಳಿ ನಡೆಸಿ 1.05 ಲಕ್ಷ ಮೌಲ್ಯದ ಮದ್ಯವನ್ನು ಜಪ್ತಿಮಾಡಿದ್ದಾರೆ. ಜಿಲ್ಲೆಯ ವಿವಿಧಡೆ 80 ದಾಳಿಗಳು ನಡೆದಿದ್ದು, 28 ಪ್ರಕರಣಗಳು ದಾಖಲಿಸಲಾಗಿದೆ. 25 ಆರೋಪಿಗಳ ಬಂಧನ ಮಾಡಲಾಗಿದೆ. 32 ಲೀ ಮದ್ಯ, 31 ಲೀ ಬೀರ್, 5 ಲೀ ಕಳ್ಳಭಟ್ಟಿ ಸಾರಾಯಿ ಮತ್ತು 20 ಲೀ. ಸೆಂದಿ, ಒಂದು ದ್ವಿಚಕ್ರವಾಹನ ಜಪ್ತಿ ಮಾಡಲಾಗಿದೆ…
Read More »ಬೆಳಿಗ್ಗೆ 6 ರಿಂದ 10 ಪೆಟ್ರೋಲ್ ದೊರೆಯುವುದಿಲ್ಲ
ಬೀದರ: ಹುಮನಾಬಾದ ಪಟ್ಟಣದ ಪೆಟ್ರೊಲ್ ಬಂಕ್ ಗಳ ಮಾಲೀಕರು ಸಿಪಿಐ ಜೆ.ಎಸ್ ನ್ಯಾಮೆಗೌಡರ್ ಅವರನ್ನು ಭೇಟಿ ಮಾಡಿ ಯಾರಿಗೆ ಇಂಧನ ಪೂರೈಕೆ ಮಾಡಬೇಕು ಎಂದು ಚರ್ಚೆ ನಡೆಸಿದರು. ಬಂಕ್ ಗಳಲ್ಲಿ ಕೆಲಸ ಮಾಡಲು ಯುವಕರು ಬರುತ್ತಿಲ. ಯಾವ ವಾಹನಗಳಿಗೆ ಇಂಧನ ಹಾಕಬೇಕು ಎಂಬುವುದು ಸ್ಪಷ್ಟಪಡಿಸಿ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಪಿಐ ಅನಾವಶಕ ವಾಹನಗಳಿಗೆ ಯಾವುದೇ ಕಾರಣಕ್ಕೂ ಇಂಧನ ಪೂರೈಕೆ ಆಗಬಾರದು. ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತ ಪಾಸ್…
Read More »ಜನರ ಸಕಷ್ಟಕ್ಕೆ ಅಧಿಕಾರಿಗಳು ಸ್ಪಂದಿಸಬೇಕು: ಶಾಸಕ ಪಾಟೀಲ
ಹುಮನಾಬಾದ: ವಿಶ್ವದಲ್ಲಿ ಮಹಾಮಾರಿ ಕೊರೊನಾ ವೈರಸ್ ಭೀಕರತೆ ಹೆಚ್ಚಾಗುತ್ತಿದ್ದು, ಕ್ಷೇತ್ರದ ಮೂರು ಪುರಸಭೆ ಹಾಗೂ ಗ್ರಾಮೀಣ ಭಾಗದಲ್ಲಿ ಜನರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಬೇಕು. ಜನರಿಗೆ ಕುಡಿವ ನೀರಿನ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಶಾಸಕ ರಾಜಶೇಖರ ಪಾಟೀಲ ಸೂಚಿಸಿದರು. ಪಟ್ಟಣದ ತಾಲೂಕು ಪಂಚಾಯತ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಕೊರೊನಾ ಹಾಗೂ ಕುಡಿಯುವ ನೀರಿನ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ್ದು, ಜನರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಆಗಬೇಕು ಎಂದು…
Read More »ಖಾಸಗಿ ಆಸ್ಪತ್ರೆ ತೆರೆದು ಚಿಕಿತ್ಸೆ ನೀಡಿ.
ಬೀದರ: ಖಾಸಗಿ ಆಸ್ಪತ್ರೆಗಳ ವೈದ್ಯರು ಕ್ಲಿನಿಕ್ ತೆರೆದು ಜನರಿಗೆ ಆರೋಗ್ಯ ಸೇವೆ ನೀಡಬೇಕು ಎಂದು ತಹಸೀಲ್ದಾರ ನಾಗಯ್ಯಾ ಹಿರೇಮಠ ಸೂಚಿಸಿದರು. ಪಟ್ಟಣದ ತಹಸೀಲ್ದಾರರ ಕಚೇರಿಯಲ್ಲಿ ಖಾಸಗಿ ಆಸ್ಪತ್ರೆಗಳ ವೈದ್ಯರ ಸಭೆ ನಡೆಸಿ ಮಾಹಿತಿ ನೀಡಿದರು. ಸಾರ್ವಜನಿಕರಿಗೆ ಆರೋಗ್ಯ ಸೇವೆ ನೀಡುವುದು ಮುಖ್ಯವಾಗಿದ್ದು, ಕೊರೊನಾ ವೈರಾಣು ಇರುವ ಶಂಕಿತರ ಹೊರೆತುಪಡಿಸಿ ಇನ್ನುಳಿದ ಚಿಕಿತ್ಸೆಗಳು ನೀಡಬೇಕು ಎಂದು ಜಿಲ್ಲಾಧಿಕಾರುಗಳು ಸೂಚಿಸಿದ್ದಾರೆ. ಯಾರು ಆಸ್ಪತ್ರೆ ತೆರೆಯುವುದಿಲ್ಲ ಅವರಿಗೆ ನೋಟಿಸ್ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.ಪ…
Read More »



















